ಕರ್ನಾಟಕ ಕ್ರಶ್ ಎಂದೇ ಖ್ಯಾತಿಯನ್ನು ಪಡೆದಿರುವ ನಟಿ ಆಶಿಕಾ ರಂಗನಾಥ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡದ ಕೆಲವೊಂದಷ್ಟು ಚಿತ್ರಗಳಲ್ಲಿ ಅಭಿನಯಿಸಿ ತನ್ನ ಸುಂದರತೆಯಿಂದ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಆಶಿಕಾ ರಂಗನಾಥ್ ಕ್ಯೂಟ್&ಡೀಸೆಂಟ್ ನಟಿ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ.
ಡೀಸೆಂಟ್ ನಟಿ ಎಂದು ಖ್ಯಾತಿಯನ್ನು ಪಡೆದಿರುವ ಆಶಿಕಾ ರಂಗನಾಥ್ ಹುಟ್ಟುಹಬ್ಬದ ದಿನವಾದ ಇಂದು ಜನರಿಂದ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಪಡೆದುಕೊಂಡಿದ್ದಾರೆ. ಮಧ್ಯರಾತ್ರಿಯಿಂದಲೇ ಸಾಲುಸಾಲು ಹುಟ್ಟುಹಬ್ಬದ ಶುಭಾಶಯಗಳನ್ನು ಪಡೆದುಕೊಳ್ಳುತ್ತಿದ್ದ ನಟಿ ಆಶಿಕಾ ರಂಗನಾಥ್ ಇದ್ದಕ್ಕಿದ್ದಂತೆ ಜನರಿಂದ ನೆಗೆಟಿವ್ ಕಾಮೆಂಟ್ ಗಳನ್ನು ಪಡೆದುಕೊಳ್ಳಲು ಆರಂಭಿಸಿದ್ದಾರೆ.
ನಟಿ ಆಶಿಕಾ ರಂಗನಾಥ್ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಲು ಕಾರಣ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಮದಗಜ ಚಿತ್ರದ ಪೋಸ್ಟರ್. ಹೌದು ನಟಿ ಆಶಿಕಾ ಅಭಿನಯಿಸುತ್ತಿರುವ ಮದಗಜ ಚಿತ್ರತಂಡ ಆಶಿಕಾ ಹುಟ್ಟುಹಬ್ಬಕ್ಕೆ ವಿಶೇಷವಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ನಟಿ ಆಶಿಕಾ ರಂಗನಾಥ್ ಧಮ್ ಹೊಡೆಯುತ್ತಿದ್ದಾರೆ. ಓರ್ವ ಡೀಸೆಂಟ್ ನಟಿಯಾಗಿ ಜನರಿಗೆ ಸಂದೇಶ ಕೊಡುವುದನ್ನು ಬಿಟ್ಟು ಇಂತಹ ಪಾತ್ರಗಳಿಗೆ ಬಣ್ಣ ಹಚ್ಚಿ ಜನರಿಗೆ ಏನು ಹೇಳಲು ಹೊರಟಿದ್ದೀರಾ ಎಂದು ಹುಟ್ಟುಹಬ್ಬದ ದಿನವೇ ಆಶಿಕಾ ರಂಗನಾಥ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದ ನಿರ್ದೇಶಕರಿಗೂ ನೆಗೆಟಿವ್ ಕಾಮೆಂಟ್ ಹಾಕಿರುವ ಪ್ರೇಕ್ಷಕರು ಸಾಧ್ಯವಾದರೆ ಒಳ್ಳೆಯ ಚಿತ್ರಗಳನ್ನು ಮಾಡಿ ಅದನ್ನು ಬಿಟ್ಟು ನಟಿಯ ಕೈಯಲ್ಲಿ ಸಿಗರೇಟ್ ಕೊಟ್ಟು ಚಿತ್ರವನ್ನು ಹಿಟ್ ಮಾಡಿಕೊಳ್ಳುವ ಯತ್ನ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.