ಹುಟ್ಟೂರಿನ ಕಾಫಿ ಘಮ ಘಮವನ್ನು ವಿಶ್ವಕ್ಕೇ ಪಸರಿಸಿ ಮರೆಯಾದ ಸಿದ್ಧಾರ್ಥ್ ಲೈಫ್ ಸ್ಟೋರಿ..!

Date:

ಸಿದ್ಧಾರ್ಥ್ ‌..ಮಾಜಿ ಸಿಎಂ ಎಸ್ ಎಂ ಕೃಷ್ಣರ ಅಳಿಯ…ಅಷ್ಟೇ ಅಲ್ಲ ದೇಶದ ಶ್ರೇಷ್ಠ ಉದ್ಯಮಿಗಳ ಸಾಲಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಸಾಧಕ…ಇನ್ನು ಈ ಸಿದ್ದಾರ್ಥ್ ನೆನಪು ಮಾತ್ರ..
ಯಾರೂ ..ಯಾರೆಂದರೆ ಯಾರೂ ಕೂಡ ಹೀಗಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಕಾಫಿ ಸಾಮ್ರಾಜ್ಯದ ಸಾಮ್ರಾಟ ಸಿದ್ಧಾರ್ಥ್ ಇಂಥಾ ಒಂದು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅಂತ ಯಾರೂ ಕನಸು ಮನಸ್ಸಲ್ಲೂ ಕಲ್ಪಿಸಿಕೊಂಡಿರಲಿಲ್ಲ. ಉದ್ಯಮ ನಷ್ಟದಿಂದ ಮುಳಗಿದ್ದರೂ ಅದನ್ನು ಮೇಲೆತ್ತುವ ತಾಕತ್ತು ಖಂಡಿತಾ ಸಿದ್ದಾರ್ಥ್ ಅವರಿಗಿತ್ತು. ಆದರೇ ಅವರೇ ನೇತ್ರಾವತಿಯಲ್ಲಿ ಮುಳುಗಿ ಎಲ್ಲರನ್ನೂ ಕಣ್ಣೀರಲ್ಲಿ ಮುಳುಗುವಂತೆ ಮಾಡಿದ್ದಾರಾಲ್ಲಾ..ಛೇ..ಹೀಗಾಗಬಾರದಿತ್ತು…ಸಿದ್ಧಾರ್ಥ್ ಯಾವ ತಪ್ಪು ಮಾಡದ ನೀವು ಇಂದೊಂದು ತಪ್ಪು ನಿರ್ಧಾರವನ್ನೇಕೆ ತೆಗೆದುಕೊಂಡ್ರೀ ಸಾರ್….ಮತ್ತೆ ಹುಟ್ಟಿಬನ್ನಿ ಅಂತ ಕೇಳಿಕೊಳ್ಳುತ್ತಿದ್ದೇವೆ..ನಿಮ್ ಜೊತೆ ಒಂದೇ ಒಂದು ಕಾಫಿ ಕುಡಿಯುವ ಆಸೆ‌ ಸಾರ್…
ನೀವೇನೋ ಬಾರದ ಲೋಕಕ್ಕೆ ಹೋಗಿ ಬಿಟ್ಟಿರಿ..ನಿಮ್ಮನ್ನು ಪ್ರೀತಿಸುತ್ತಿದ್ದವರ ಕಥೆ ಏನು ಸಾರ್..ನಿಮ್ಮನ್ನೇ ಆದರ್ಶವಾಗಿಟ್ಟುಕೊಂಡಿದ್ದವರ ನೋವು ಜೀವಂತ ಸಿದ್ಧಾರ್ಥ್ ಸಾರ್…
ಮಲೆನಾಡಿನ ಸುಂದರ ತಾಣ…ಕಾಫಿಯ ತವರು ಚಿಕ್ಕಮಗಳೂರಿನ ಸಿದ್ಧಾರ್ಥ್… ಸುಮಾರು 140 ವರ್ಷಗಳಿಂದ ಕಾಫಿ ಬೆಳೆಯುತ್ತಾ ಬಂದಿರುವ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಿದ್ಧಾರ್ಥ್ ತನ್ನ ಹುಟ್ಟೂರಿನ ಕಾಫಿ ಘಮ ಘಮವನ್ನು ಇಡೀ ವಿಶ್ವಕ್ಕೆ ಪಸರಿಸಿದ ಸಾಧಕ…! ಕಾಫಿಗೆ ಮಾರುಕಟ್ಟೆ ತಂದ ಕಾಫಿ ಸಾಮ್ರಾಜ್ಯದ ಸಾಮ್ರಾಟ..!
ಮಂಗಳೂರು ಯೂನಿವರ್ಸಿಟಿಯಲ್ಲಿ ಮಾಸ್ಟರ್ ಡಿಗ್ರಿ ‌ಪೂರೈಸಿ, 1983 ರಲ್ಲಿ ಮುಂಬೈ ಕಡೆ ಪಯಣ ಬೆಳೆಸಿದ ಸಿದ್ಧಾರ್ಥ್ ಅಲ್ಲಿನ ಜೆಎಂ ಫೈನಾನ್ಸಿಯಲ್ ಲಿಮಿಟೆಡ್ ನಲ್ಲಿ ಕೆಲಸ ಮಾಡಲಾರಂಭಿಸಿದ್ರು. ಮಹೇಂದ್ರ ಕಂಪನಿಯಡಿ ಭಾರತೀಯ ಷೇರು ಮಾರುಕಟ್ಟೆಯ ನಿರ್ವಹಣಾ ಮತ್ತು ಸುರಕ್ಷಾ ವಹಿವಾಟಿನ ನಿರ್ವಹಣಾ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬರೀ ಕೆಲಸಗಾರನಾಗಿರಬಾರದು ಉದ್ಯಮಿಯಾಗಬೇಕು…ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕು ಎಂಬ ಮಹತ್ವದ ಕನಸಿನೊಂದಿಗೆ ನಮ್ಮ ಬೆಂಗಳೂರಿಗೆ ವಾಪಸ್ ಆದರು. ಎಲ್ಲಾ ಹೊಸತನವನ್ನು ಹುಡುಕಿ ದೂರದೂರಿಗೆ ಹೋದರೆ, ಸಿದ್ಧಾರ್ಥ್ ಬಂದಿದ್ದು ತನ್ನೂರಿಗೆ..!
24ವರ್ಷಕ್ಕೆ ಮುಂಬೈ ಹೋಗಿದ್ದ ಸಿದ್ಧಾರ್ಥ್ ಅಲ್ಲಿದ್ದುದು ಎರಡೇ ಎರಡು ವರ್ಷ..! ಆ ಮೇಲೆ ಬೆಂಗಳೂರಿಗೆ ಬಂದರು. ಅಪ್ಪ ಕೊಟ್ಟ 30 ಸಾವಿರ ರೂ ನಲ್ಲಿ ಸೆವೆಲ್ ಸೆಕ್ಯೂರಿಟಿ ಅನ್ನೋ ಕಂಪನಿ ಹುಟ್ಟು ಹಾಕಿದ್ರು‌ . ಷೇರು ಮಾರುಕಟ್ಟೆ ಕಾರ್ಡನ್ನೂ ಪಡೆದರು.‌
1985ರಲ್ಲಿ ಮುಂಬೈನಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ಮಾಲೀಕರಾಗಿದ್ದ ಸಿದ್ಧಾರ್ಥ್ 10 ಸಾವಿರ ಎಕರೆ ಕಾಫಿ ತೋಟವನ್ನು ಕೊಂಡುಕೊಂಡರು. ನಿಧಾನಕ್ಕೆ ಹೆಚ್ಚು ಹೆಚ್ಚು ಎಕರೆ ಕಾಫಿ ತೋಟ ಗಳನ್ನು ಕೊಳ್ಳುತ್ತಾ ಸಾಗಿದರು.1993ರ ವೇಳೆಯಲ್ಲಿ ಅಮಾಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಹುಟ್ಟುಹಾಕಿದ್ದರು. ಆ ಮೂಲಕ ಕಾಫಿ ರಫ್ತಿನತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರು.
1999ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮೊದಲ ಕಾಫಿ ಡೇ ಶುರು ಮಾಡಿದರು. 5 ರೂಗೆ ಸಿಗುವ ಕಾಫಿಯನ್ನು 100ರೂಗೆ ಯಾರ್ ಕೊಳ್ತಾರೆ ಸ್ವಾಮಿ ಅಂತ ಜನ ಮಾತಾಡಿದ್ದರು. ಆದರೆ, ಧೈರ್ಯಮಾಡಿ ಕಾಫಿ ಡೇ ತೆರೆದೇ ಬಿಟ್ಟರು ಸಿದ್ಧಾರ್ಥ್. ಆರಂಭದಲ್ಲಿ ಕಾಫಿ ಡೇ ನಲ್ಲಿ ಉಚಿತ ಇಂಟರ್ ನೆಟ್ ಸೌಲಭ್ಯ ನೀಡಿದರು…ಬೆಲ್ಲಕ್ಕೆ ಇರುವೆ ಮುತ್ತುವಂತೆ…ಕಾಫಿಗೆ ಜನ ಮುತ್ತಿದರು…! ಬೆಂಗಳೂರಲ್ಲಿ ಅದಾಗಲೇ ಐಟಿ ಉದ್ಯಮ ಉತ್ತುಂಗಕ್ಕೇರಿತ್ತು. ಕಾಫಿ ಡೇ ಐಟಿ ಉದ್ಯೋಗಿಗಳ ಲೈಫ್ ಸ್ಟೈಲ್ ಗೆ ಒಪ್ಪಿಕೊಂಡಿತು. ಹಂತ ಹಂತವಾಗಿ ಕಾಫಿ ಡೇ ಉದ್ಯಮ ಬೆಳೀತು. ಇಂದು 1700 ಕೆಫೆಗಳಿವೆ. 48 ಸಾವಿರ ಕಾಫಿ ತಯಾರಿಕೆ ಮಷಿನ್ ಗಳಿವೆ. 532 ಕಿಯಸ್ಕೋ, 403 ಕಾಫಿ ಮಾರಾಟ ಮಳಿಗೆಗಳಿವೆ..ಇವುಗಳ ಒಟ್ಟು ಆದಾಯ 4, 264 ಕೋಟಿ ರೂ..!
ಕಾಫಿ ಡೇ ಮಾಲೀಕರು ಮಾತ್ರ ಅಲ್ಲದೆ ಸಿದ್ಧಾರ್ಥ್ ಐಷಾರಾಮಿ ರೆಸಾರ್ಟ್ ಉದ್ಯಮಿ ಕೂಡ… 7 ಸ್ಟಾರ್ ರೆಸಾರ್ಟ್ ಗಳಾದ ಸರಾಯಿ, ಸಿಕಾಡ ಇದೇ ಸಿದ್ಧಾರ್ಥ್ ಅವರದ್ದು.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...