ಈ ಹುಡುಗರಿಗೆ ಹುಡುಗಿಯರು ಬಿದ್ದೇ ಬೀಳ್ತಾರೆ!

Date:

ಸಾಮಾನ್ಯವಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸಂಗಾತಿ ಹಾಗೂ ಪ್ರೀತಿಗಾಗಿ ವಿಶೇಷ ಸ್ಥಾನ ನೀಡುತ್ತಾರೆ. ಸಂಬಂಧ, ಪ್ರೀತಿ ಹಾಗೂ ಸಂಗಾತಿಯ ವಿಷಯದಲ್ಲಿ ಅಹಿತಕರ ಸಂಗತಿ ನಡೆದರೆ ಅದು ಮನಸ್ಸಿಗೆ ಹೆಚ್ಚು ಪರಿಣಾಮ ಬೀರುವುದು. ಹಾಗಾಗಿ ವಿವಾಹ ಮತ್ತು ಜೀವನದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿ ಇರಲು ಬಯಸುವರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರು ತಮ್ಮ ಕುಂಡಲಿಗೆ ಅನುಗುಣವಾಗಿ ಸಂಗಾತಿಯನ್ನು ಪಡೆದುಕೊಳ್ಳುವರು. ಜೊತೆಗೆ ಅವರ ಪ್ರೀತಿಗೆ ಪಾತ್ರರಾಗುವರು. ಜ್ಯೋತಿಷ್ಯದ ತುಲನೆಯ ಪ್ರಕಾರ ಕೆಲವು ರಾಶಿ ಚಕ್ರದ ಹುಡುಗರು ತಮ್ಮ ಸಂಗಾತಿಗಳನ್ನು ಹೆಚ್ಚು ಪ್ರೀತಿಯಿಂದ ನೋಡುವರು. ಜೊತೆಗೆ ಅವರು ಬಹಳ ಸುಲಭವಾಗಿ ವಿರುದ್ಧ ಲಿಂಗದವರನ್ನು ಆಕರ್ಷಿಸುವರು.

ಹುಡುಗಿಯರ ಮನವೊಲಿಸುವ ವಿಷಯದಲ್ಲಿ ಮಿಥುನ ರಾಶಿಯವರು ಮೇಲುಗೈ ಸಾಧಿಸುತ್ತಾರೆ. ಇವರಿಗೆ ಹುಡುಗಿಯರ ಮನ ಗೆಲ್ಲುವುದು ಹೇಗೆ? ಎನ್ನುವುದು ಸುಲಭವಾಗಿ ತಿಳಿದಿರುತ್ತಾರೆ. ಅವರ ಮಧುರ ಮಾತುಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುವುದು. ಹುಡುಗಿಯರ ಮನ ಗೆಲ್ಲಲು ಅಧಿಕ ಶ್ರಮ ವಹಿಸುವ ಅಗತ್ಯವಿರುವುದಿಲ್ಲ. ಸುಲಭವಾಗಿ ಅವರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಳ್ಳುವರು.

ಸಿಂಹ ರಾಶಿಯ ಹುಡುಗರು ಹುಡುಗಿಯರ ವಿಷಯದಲ್ಲಿ ಅತ್ಯಂತ ಅದೃಷ್ಟ ಶಾಲಿಗಳು ಎಂದು ಪರಿಗಣಿಸಲಾಗುವುದು. ಈ ರಾಶಿಯ ಹುಡುಗರು ಶುದ್ಧ ಮನಸ್ಸನ್ನು ಹೊಂದಿರುತ್ತಾರೆ. ಇವರ ನಿಸ್ವಾರ್ಥದ ಸ್ವಭಾವದಿಂದಲೇ ಹುಡುಗಿಯರು ಆಕರ್ಷಿತರಾಗುತ್ತಾರೆ. ಇವರ ಸಂಬಂಧ ಹಾಗೂ ಪ್ರೀತಿಯಲ್ಲಿ ಸದಾ ಮಾಧುರ್ಯ ಇರುತ್ತದೆ. ಇವರ ಪ್ರಣಯ ಪೂರಕವಾದ ಸ್ವಭಾವದೊಂದಿಗೆ ಹುಡುಗಿಯರು ಒಂದಿಷ್ಟು ಸಮಯವನ್ನು ಕಳೆಯಲು ಬಯಸುವರು. ಈ ರಾಶಿಯ ಹುಡುಗರಲ್ಲಿ ಸ್ನೇಹಪರ ಹಾಗೂ ಕಾಳಜಿಯುಳ್ಳ ಸ್ವಭಾವ ಇರುತ್ತದೆಗಿವರನ್ನು ಹುಡುಗಿಯರು ಸುಲಭವಾಗಿ ಸ್ನೇಹಿತರನ್ನಾಗಿ ಸ್ವೀಕರಿಸುತ್ತಾರೆ.

ಈ ರಾಶಿಯವರನ್ನು ಶುಕ್ರನು ಆಳುವನು. ಹುಡುಗಿಯರು ಈ ರಾಶಿಯವರನ್ನು ಪ್ರೀತಿಸಲು ಇದೂ ಒಂದು ಕಾರಣವಾಗಿರುತ್ತದೆ. ಈ ರಾಶಿಯ ಹುಡುಗರ ಪ್ರೀತಿ ಹಾಗೂ ಪ್ರೀತಿಯಿಂದ ತುಂಬಿರುವ ಅವರ ಮಾತುಗಳು ಹುಡುಗಿಯರನ್ನು ಆಕರ್ಷಿಸುವುದು. ಇವರು ಹುಡುಗಿಯರೊಂದಿಗೆ ಮಾತನಾಡುವ ಶೈಲಿಯು ಇತರರಿಗಿಂತ ಭಿನ್ನವಾಗಿರುತ್ತದೆ. ಪ್ರೀತಿಯ ವಿಷಯದಲ್ಲಿ ಈ ರಾಶಿಯ ಹುಡುಗರು ಬಹಳ ನಿಷ್ಠಾವಂತರು ಎಂದು ಪರಿಗಣಿಸಲಾಗುವುದು. ಇವರು ಸ್ವಭಾವದಲ್ಲಿ ಸ್ವಲ್ಪ ನಾಚಿಕೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಹುಡುಗಿಯರು ಸಹ ಇವರನ್ನು ಇಷ್ಟಪಡುವರು.

ಈ ರಾಶಿಯನ್ನು ಶನಿಯು ಆಳುವನು. ಹಾಗಾಗಿ ಈ ರಾಶಿಯ ಹುಡುಗರು ಸ್ವಭಾವತಃ ಅತ್ಯಂತ ಶಾಂತ ಮತ್ತು ಸರಳವಾದ ಗುಣವನ್ನು ಹೊಂದಿರುತ್ತಾರೆ. ಇವರ ಈ ಗುಣವನ್ನು ಹುಡುಗಿಯರು ಬಹಳ ಇಷ್ಟಪಡುತ್ತಾರೆ. ಇವರು ವ್ಯಕ್ತಿತ್ವದಲ್ಲಿ ಅತ್ಯಂತ ಆಕರ್ಷಿತರಾಗಿರುತ್ತಾರೆ. ಇತರರಿಗೆ ಹೋಲಿಸಿದರೆ ಇವರ ಮಾತಿನ ಶೈಲಿ ಹಾಗೂ ವರ್ತನೆಗಳು ಅತ್ಯಂತ ಆಕರ್ಷಕ ಹಾಗೂ ವಿಭಿತೆಯಿಂದ ಕೂಡಿರುತ್ತದೆ. ಇವರು ಅತ್ಯಂತ ಚಾಣಾಕ್ಷರು ಹಾಗೂ ಬುದ್ಧಿವಂತರೂ ಆಗಿರುತ್ತಾರೆ. ಹಾಗಾಗಿ ಹುಡುಗಿಯರು ಬಹುಬೇಗ ಆಕರ್ಷಿತರಾಗುತ್ತಾರೆ.

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...