ಹುಡುಗಿಯರೇ ನೀವು ನೋಡಲು ಚೆನ್ನಾಗಿದ್ದಾನೆ, ಚೆನ್ನಾಗಿ ಮಾತನಾಡುತ್ತಾನೆ. ಅವನ ಬಳಿ ಹಣ ಇದೆ ಎಂದ ಮಾತ್ರಕ್ಕೆ ಹುಡುಗನನ್ನು ನಂಬಿ ಪ್ರೀತಿ ಬಲೆಯಲ್ಲಿ ಬಿದ್ದರೆ ಸಾಲದು. ಜೀವನದಲ್ಲಿ ಮುಖ್ಯ ನಿಮ್ಮನ್ನು ಹೇಗೆ ನೋಡಿ ಕೊಳ್ಳುತ್ತಾನೆ ಎನ್ನುವುದು.
ನೀವು ನಿಮ್ಮ ಹುಡಗನಲ್ಲಿ ಇಂಥಾ ವರ್ತನೆಯಿದ್ದರೆ ಅವನನ್ನು ನಂಬಬೇಡಿ.. ಒಂದೋ ಅವನ ವರ್ತನೆ ಬದಲಾಯಿಸಿ, ತಪ್ಪು ತಿದ್ದಿಕೊಳ್ಳುವಂತೆ ಮಾಡಿ. ಇಲ್ಲದಿದ್ದರೆ ಅವನಿಗೆ ಗುಡ್ ಬೈ ಹೇಳುವುದೇ ಒಳ್ಳೆಯದೇ.
ನಿಮ್ಮ ಫ್ಯಾಮಿಲಿಯನ್ನು ಪದೇ ಪದೇ ಅವೈಡ್ ಮಾಡ್ತಾನೆ. ನಿಮ್ಮ ಕುಟುಂಬವನ್ನು ಭೇಟಿಯಾಗಲು ನಿಮ್ಮ ತವರಿಗೆ ಬರಲು ಪದೇ ಪದೇ ಏನಾದರೂ ಕಾರಣ ಹೇಳಿ ಅವೈಡ್ ಮಾಡುತ್ತಿದ್ದರೆ ಅವನನ್ನು ಹೆಚ್ಚಾಗಿ ನಂಬಬೇಡಿ.
ನಿಮ್ಮ ಕರೆಗಳನ್ನು ನಿರ್ಲಕ್ಷಿಸುತ್ತಿದ್ದರೆ, ಅವೈಡ್ ಮಾಡುತ್ತಿದ್ದಾರೆ ಅವನನ್ನು ಈಗಲೇ ವಿಚಾರಿಸಿಕೊಳ್ಳಿ.
ನಿಮ್ಮ ಸಮಸ್ಯೆಯನ್ನುಯ ಬಗ್ಗೆ ಕೇಳದೇ ನಿಮ್ಮ ಕಷ್ಟಗಳಿಗೆ ಸ್ಪಂಧಿಸದೇ ಇದ್ದರೆ ಅವನಿಗೆ ನಿಮ್ಮ ಮೇಲೆ ಹೇಳಿಕೊಳ್ಳುವಂಥಾ ಪ್ರೀತಿ ಇಲ್ಲವೇ ಇಲ್ಲ.
ನಿಮಗಾಗಿ ಸಮಯ ಮೀಸಲಿಡದೇ ಇರುವವನ್ನು ನಂಬಿ ಬಾಳ್ವೆ ಮಾಡೋ ತಪ್ಪು ನಿರ್ಧಾರ ಬೇಡ.
ನಿಮ್ಮನ್ನು ಮತ್ತೆ ಮತ್ತೆ ಕಡೆಗಾಣಿಸುವವನಾಗಿದ್ದರೆ ಆದಷ್ಟು ಬೇಗ ಬಗೆಹರಿಸಿಕೊಳ್ಳಿ.
ಹುಡುಗಿಯರೇ ಇಂಥಾ ಹುಡುಗರನ್ನು ನಂಬಿದ್ರೆ ಹುಷಾರ್..!
Date: