ಅಯೋಧ್ಯಯಲ್ಲಿ ಬಾಲ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ಒಂದೆಡೆ ಆದ್ರೆ, ಇನ್ನೊಂದೆಡೆ ದೇಶದ ವಿವಿಧ ಭಾಗದಲ್ಲಿ ರಾಮೋತ್ಸವವನ್ನ ಅದ್ದೂರಿಯಾಗಿ ಭಕ್ತರು ನೆರೆವೇರಿಸಿದ್ದಾರೆ.
ಹುಬ್ಬಳ್ಳಿಯಲ್ಲು ಕೂಡಾ ರಾಮೋತ್ಸವ ಅದ್ದೂರಿಯಾಗಿ ನಡೆದಿದ್ದು, ಹುಬ್ಬಳ್ಳಿಯ ಅಂಬಣ್ಣವರ್ ಲೇಔಟ್ ನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಳಿಗ್ಗೆಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಕಾರ್ಯಕ್ರಮ, ನೃತ್ಯ ಫ್ಯಾನ್ಸಿ ಡ್ರೇಸ್ ಹೀಗೆ ಹಲವು ಕಾರ್ಯಕ್ರಮಗಳು ನಡೆದವು.
ಮಕ್ಕಳನ್ನ ನೋಡಲು ಎರಡು ಕಂಗಳು ಸಾಲದೆಂಬಂತೆ ಬಾಲ ರಾಮ ಲಕ್ಷ್ಮಣ ಸೀತೆ ಹಾಗೂ ಆಂಜನೇಯನ ಉಡುಗೆ ತೊಟ್ಟು ಕಂಗೊಳಿಸಿದರು. ಹಾಗೂ ನೈತ್ಯ ಮಾಡುವ ಮೂಲಕ ಮಕ್ಕಳು ರಾಮೋತ್ಸವವನ್ನ ಅದ್ದೂರಿಯಾಗಿ ಆಚರಿಸಿದರು. ಇನ್ನೂ ರಾತ್ರಿ ಪ್ರಸಾದ ವಿನಿಮಯ ಮಾಡಿ ಜೈ ಶ್ರೀರಾಮ್ ಎನ್ನುತ್ತ ಬಾಲ ರಾಮಲಲ್ಲಾನನ್ನ ಬರಮಾಡಿಕೊಂಡರು.