ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನ ಏಪ್ರಿಲ್ ಒಂದನೇ ತಾರೀಕಿನಂದು ಭರ್ಜರಿಯಾಗಿ ಬಿಡುಗಡೆ ಮಾಡಲು ಭರ್ಜರಿಯಾಗಿ ತಯಾರಿಗಳನ್ನು ನಡೆಸಿದೆ ಚಿತ್ರತಂಡ. ಪುನೀತ್ ಚಿತ್ರ ಎಂದಮೇಲೆ ಬಿಡುಗಡೆಗೂ ಮುನ್ನ ಕ್ರೇಜ್ ಹುಟ್ಟಿಕೊಳ್ಳುವುದು ಕಾಮನ್ ಅದೇ ರೀತಿ ಇದೀಗ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ ಇದಕ್ಕೆ ಕಾರಣ ಪುನೀತ್ ಅವರ ಯುವ ಸಂಭ್ರಮ ಟೂರ್.
ಯುವರತ್ನ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮೈಸೂರಿನಲ್ಲಿ ಕ್ಯಾನ್ಸಲ್ ಆದ ಬಳಿಕ ಜಿಲ್ಲೆ ಜಿಲ್ಲೆಗಳಿಗೂ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಅಭಿಮಾನಿಗಳಿಗೆ ಮಾತುಕೊಟ್ಟಿದ್ದ ಪುನೀತ್ ಅವರು ಇಂದಿನಿಂದ ಯುವ ಸಂಭ್ರಮ ಟ್ರಿಪ್ ಆರಂಭ ಮಾಡಿದ್ದಾರೆ. ಬಾಗಲಕೋಟೆ ಬೆಳಗಾವಿ ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಇದು ಪುನೀತ್ ರಾಜ್ ಕುಮಾರ್ ಅವರು ರೋಡ್ ಶೋ ನಡೆಸಿದರು.
ಎಲ್ಲೆಡೆ ಪುನೀತ್ ಅಭಿಮಾನಿಗಳು ಪುನೀತ್ ಅವರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು ಪುಷ್ಪಾ ಮಳೆಯನ್ನೇ ಸುರಿಸಿದರು. ಅದರಲ್ಲಿಯೂ ಹುಬ್ಬಳ್ಳಿಯಲ್ಲಂತೂ ಜನ ಕಿಕ್ಕಿರಿದು ತುಂಬಿದ್ದರು. ಕೊರೋನಾವೈರಸ್ ಅನ್ನು ಸಹ ಮರೆತು ತಮ್ಮ ನೆಚ್ಚಿನ ನಟನನ್ನು ನೋಡಲು ಸಾಗರೋಪ ಸಾಗರವಾಗಿ ಅಭಿಮಾನಿಗಳು ನಿಂತಿದ್ದರು. ಹುಬ್ಬಳ್ಳಿಯ ಕ್ರೌಡ್ ಕಂಡು ಯುವರತ್ನ ಚಿತ್ರತಂಡ ಫುಲ್ ಖುಷ್ ಆಗಿದ್ದಂತೂ ನಿಜ..