ಪಶುವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣದ ನಾಲ್ವರು ಕಾಮಾಂಧರನ್ನು ಗಲ್ಲಿಗೇರಿಸಿ ಎಂಬ ಕೂಗು ಜೋರಾಗಿದ್ದ ಬೆನ್ನಲ್ಲೇ, ಎಲ್ಲಾ ನಾಲ್ಕೂ ಪಾಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಕಾಮುಕರ ಹುಟ್ಟಡಗಿಸಿದ್ದು ಕನ್ನಡದ ವೀರ, ಸೈಬರಾಬಾದಿನ ಪೊಲೀಸ್ ಕಮಿಷನರ್ ವಿಶ್ವನಾಥ್ ಸಜ್ಜನರ್ ಎಂಬುದು ವಿಶೇಷ.
ಪಶುವೈದ್ಯೆ ದಿಶಾ ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಂದ ಸಜ್ಜನರ್ ಅವರನ್ನು ಇಡೀ ದೇಶ ಕೊಂಡಾಡುತ್ತಿದೆ. ರಿಯಲ್ ಸಿಂಗಂ ಎಂದು ಬಣ್ಣಿಸುತ್ತಿದೆ. ದೇಶವೇ ಮೆಚ್ಚಿರುವ ಈ ಪೊಲೀಸ್ ಅಧಿಕಾರಿ ಕನ್ನಡಿಗ, ಹುಬ್ಬಳ್ಳಿ ಹುಲಿ ಎಂಬುದು ಕರುನಾಡ ಹೆಮ್ಮೆ.
ಪಶುವೈದ್ಯಯ `ಹತ್ಯಾಚಾರಿ’ಗಳಾದ ಆರಿಫ್, ಶಿವ, ಚನ್ನಕೇಶವಲು ನವೀನನ್ನು ವಿಶ್ವನಾಥ್ ಅವರೇ ವಿಚಾರಣೆ ನಡೆಸುತ್ತಿದ್ದರು. ಶುಕ್ರವಾರ ಬೆಳಗ್ಗೆ ವಿಶ್ವನಾಥ್ ನೇತೃತ್ವದ ತಂಡ ಸ್ಥಳ ಮಹಜರಿಗೆ ಆರೋಪಿಗಳನ್ನು ಮಹಜರಿಗೆ ಕರೆದೋಯ್ದಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿ, ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಮುಲಾಜಿಲ್ಲದೆ ಎನ್ಕೌಂಟರ್ ಮಾಡಿದ್ದಾರೆ.