ಚ್ಯೂಯಿಂಗ್ ಗಮ್ ಜಗಿಯೋದು ಕಾಮನ್. ಕೆಲವ್ರಿಗೆ ಅದನ್ನು 24 ಗಂಟೆ ಜಗೀತಾ ಇದ್ರೇನೇ ನೆಮ್ಮದಿ. ಇಲ್ದೆ ಇದ್ರೆ ಅವ್ರ ಚಡಪಡಿಕೆ ನೋಡೋಕೆ ಆಗಲ್ಲ.
ಸಿಗರೇಟ್ ಸೇದಿದಾಗ ಸ್ಮೆಲ್ ಬರ್ದೆ ಇರ್ಲಿ ಅಂತ ಚ್ಯೂಯಿಂಗ್ ಗಮ್ ಜಗಿಯುತ್ತಾರೆ. ಸಿಗರೇಟ್ ಅಭ್ಯಾಸ ಇಲ್ದೆ ಇರೋರಲ್ಲಿ ಕೆಲವರು ಚ್ಯೂಯಿಂಗ್ ಗಮ್ ಸೇದೋದನ್ನು ಬಿಡಲಾಗದ ಹವ್ಯಾಸ ಮಾಡ್ಕೊಂಡಿದ್ದಾರೆ.
ಅದೇನೇ ಇದ್ರು ಸರ್ವೇ ಸಾಮಾನ್ಯವಾಗಿ ಎಲ್ರೂ ಚ್ಯೂಯಿಂಗ್ ಗಮ್ ಜಗಿದೇ ಜಗೀತಾರೆ.
ಆದ್ರೆ, ಈ ದೇಶದಲ್ಲಿ ಚ್ಯೂಯಿಂಗಂ ತಿನ್ನೋದು ಅಪರಾಧವಂತೆ..!
ಆಶ್ಚರ್ಯ ಆದ್ರೂ ಇದು ಸತ್ಯ. ಸಿಂಗಾಪುರದಲ್ಲಿ ಚ್ಯೂಯಿಂಗ್ ಮಾರಾಟ ಮತ್ತು ತಿನ್ನುವುದು ಎರಡೂ ಕೂಡ ಬ್ಯಾನ್..ಇದು ಅಲ್ಲಿನ ಕಾನೂನಿನ ಪ್ರಕಾರ ಅಪರಾಧ.
ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನು ಇರುತ್ತದೆ. ಅದೇರೀತಿ ಸಿಂಗಾಪುರದಲ್ಲಿ ಚ್ಯೂಯಿಗಮ್ ನಿಷಿದ್ಧ.