ಹೃದಯಾಘಾತದಿಂದ ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಕುಸಿದ ಬಿದ್ದು ಸಾವು.!
ಕೊಡಗು: ಇತ್ತೀಚೆಗೆ ಎಲ್ಲೆಲ್ಲೂ ಹೃದಯಾಘಾತಕ್ಕೆ ಸಾವಿನ ಸುದ್ದಿಯೇ ಕೇಳಿ ಬರುತ್ತಿದೆ. ಚಿಕ್ಕ ಮಕ್ಕಳಿಂದ ವಯಸ್ಕರವರೆಗೂ ಮಹಿಳೆಯರು, ಪುರುಷರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಕೊಡಗು ಆಹಾರ ಇಲಾಖೆ ಉಪನಿರ್ದೇಶಕರಿಗೆ ಹೃದಯಾಘಾತವಾಗಿ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆಹಾರ ಇಲಾಖೆ ಉಪನಿರ್ದೇಶಕ ಜೆ.ಬಿ. ಶ್ರೀಧರ್ ಮೂರ್ತಿ(59) ಮೃತ ದುರ್ಧೈವಿ, ಇಂದು ಬೆಳ್ಳಗ್ಗೆ 11 ಗಂಟೆಗೆ ಡಿಡಿ ಸಭೆ ಕರೆದಿದ್ದರು. 11. 20 ಕ್ಕೆ ಕಚೇರಿ ಬಂದು ಕುಳಿತಾಕ್ಷಣ ಅಧಿಕಾರಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ಮೂಲದ ಶ್ರೀಧರ್ ಮೂರ್ತಿ ಮಡಿಕೇರಿಗೆ ಬಂದು ಕೇವಲ ಒಂದು ತಿಂಗಳಾಗಿತ್ತು. ಅದಲ್ಲದೆ ಮುಂದಿನ ಆರು ತಿಂಗಳಲ್ಲಿ ನಿವೃತ್ತರಾಗಬೇಕಿತ್ತು. ಆದ್ರೆ ಅಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದೆ.