ಹೃದಯಾಘಾತದಿಂದ 24 ವರ್ಷದ ಯುವತಿ ಸಾವು

Date:

ಮಡಿಕೇರಿ: ಯುವತಿಯೊಬ್ಬಳು ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ. ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತ ಯುವತಿಯಾಗಿದ್ದು, ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯಕ್ಕೆ ಹೊರಟಾಗ ಮನೆಯಲ್ಲಿ ಇಂದು ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಯುವತಿ ನಿಲಿಕಾ ವಾಪಸ್ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ ಅಷ್ಟೆ. ಈ ವೇಳೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

Previous article
ಬೆಂಗಳೂರು: ದೇಶಾದ್ಯಂತ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಕೇಸ್ ಭಾರಿ ಸದ್ದು ಮಾಡಿತ್ತು , ಮೂರು ಪ್ರಕರಣಗಳು ಪ್ರಜ್ವಲ್ ರೇವಣ್ಣ ಮೇಲೆ ಈಗಾಗಲೇ ದಾಖಲಾಗಿದ್ವು. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿತ್ತು. ಹೊಳೆನರಸೀಪುರ ಟೌನ್ ಠಾಣೆ ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ 82 ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಜ್ವಲ್ ವಿರುದ್ದ ಹೊಳೆನರಸೀಪುರ ,ಕೆ ಆರ್ ನಗರ , ಸಿಐಡಿ , ಸೈಬರ್ ಠಾಣೆ, ಎರಡು ಕೇಸ್ ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ.
Next article

Share post:

Subscribe

spot_imgspot_img

Popular

More like this
Related

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...