ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಮತ್ತು ತಮ್ಮ ಮಗಳು ವಮಿಕಾ ಜೊತೆ ಏರ್ ಪೋರ್ಟ್ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಅವರು ತಮ್ಮ ಮಗಳು ವಮಿಕಾಳನ್ನು ಎತ್ತಿಕೊಂಡು ಮುಂದೆ ಹೋಗುತ್ತಿದ್ದರೆ ಹಿಂದೆ ವಿರಾಟ್ ಕೊಹ್ಲಿ ಅವರು ತಮ್ಮ ಲಗೇಜ್ ಮತ್ತು ಮಗಳಾದ ವಮಿಕಾಳ ವೀಲ್ ಚೇರನ್ನು ಹೊತ್ತು ಅನುಷ್ಕಾ ಅವರ ಹಿಂದೆ ನಡೆದುಕೊಂಡು ಹೋಗುತ್ತಿದ್ದಾರೆ.
ಇನ್ನೂ ಮುದ್ದು ಪುಟ್ಟ ಫ್ಯಾಮಿಲಿಯ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯಾರೇ ಆದರೂ ಸರಿ ಹೆಂಡತಿಯ ಮುಂದೆ ಎಲ್ಲರೂ ಒಂದೇ ಎಂದು ಟ್ರೋಲ್ ಆಗುತ್ತಿದೆ. ಜಗತ್ತಿನ ಶ್ರೇಷ್ಠ ಬ್ಯಾಟ್ಸ್ ಮನ್ , ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಅವರು ಸಹ ಹೆಂಡತಿಯ ಹಿಂದೆ ಲಗೇಜ್ ಹೊತ್ತು ನಡೆದು ಹೋಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್ ಆಗಿವೆ.