ಅಮರಾವತಿ: ಅಂತ್ಯಕ್ರಿಯೆಗಾಗಿ ಅನಾಥ ಶವವವನ್ನು ಮಹಿಳಾ ಎಸ್‍ಐ ತನ್ನ ಭುಜದ ಮೇಲೆ ಇಟ್ಟು 2 ಕೀಲೋಮೀಟರ್ ದೂರ ಹೊತ್ತು ಸಾಗಿ ಮಾನವೀಯತೆ ಮೆರೆದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಅನಾಥ ಶವವನ್ನು ಹೊತ್ತು ಸಾಗಿದ ಮಹಿಳಾ ಎಸ್‍ಐ ಶಿರೀಶಾ ಆಗಿದ್ದಾರೆ. ಇವರು ಕಾನಿಗುಬ್ಬ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅನಾಥ ಶವವನ್ನು ಹೊತ್ತು ಹೋಗಿ ಅಂತ್ಯಕ್ರಿಯೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಎಸ್‍ಐ ಮಾನವೀಯತೆ ಕಂಡು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಶವವೊಂದು ಅವಿಕೊತ್ತೂರು ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಸ್ಥಳ ಪರಿಶೀಲನೆಗೆ ಹೋದಾಗ ಗ್ರಾಮಸ್ಥರು ಈ ಅನಾಥ ಶವವನ್ನು ಹೊತ್ತು ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಆಗ ಎಸ್‍ಐ ತಾವೇ ಶವವವನ್ನು ಹೊತ್ತುಕೊಂಡು ಹೋಗಲು ಮುಂದಾಗಿದ್ದಾರೆ. ಓರ್ವ ವ್ಯಕ್ತಿ ಮತ್ತು ಎಸ್‍ಐ ಶಿರೀಶಾ ತಮ್ಮ ಹೆಗಲ ಮೇಲೆ ಹೊತ್ತು ಜಮೀನಿನಿಂದ ವಾಹನವಿದ್ದ ಸ್ಥಳದವರೆಗೆ ಸುಮಾರು 2 ಕೀಲೋಮೀಟರ್ ದೂರ ನಡೆದುಕೊಂಡು ಹೋಗಿ ಅಂತ್ಯಕ್ರಿಯೆಯನ್ನು ನರೆವೆರಿಸಿದ್ದಾರೆ. ಪೊಲೀಸ್ ಮಾನವೀಯತೆ ಕಂಡು ಮೆಚ್ಚುಗೆ ವ್ಯಕ್ತವಾಗುತ್ತಿದೆ.