ತುಮಕೂರು: ಸ್ವಾಮೀಜಿಗಳು ಹೇಳಿದ್ದರಲ್ಲಿ ತಪ್ಪೇನಿದೆ? ಈ ಬಗ್ಗೆ ಅಂತಿಮವಾಗಿ ನಿರ್ಣಯ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಈ ಬಗ್ಗೆ ಅಂತಿಮವಾಗಿ ನಿರ್ಣಯ ಮಾಡುವುದು ಕಾಂಗ್ರೆಸ್ ಹೈಕಮಾಂಡ್, ನಾವು ಕೇಳದೇ ಇದ್ದರೆ, ಅವರ ಗಮನಕ್ಕೆ ಹೇಗೆ ಹೋಗುತ್ತೆ? ಅಂತಿಮವಾಗಿ ಹೈಕಮಾಂಡ್‍ನವರು ಏನು ನಿರ್ಣಯ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದಿದ್ದಾರೆ.
ಇನ್ನೂ ಹೊಸಬರನ್ನು ಮಂತ್ರಿಗಳನ್ನಾಗಿ ಮಾಡೋದು, ಸಂಪುಟ ವಿಸ್ತರಣೆ ಮಾಡೋದು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‍ಗೆ ಬಿಟ್ಟಿದ್ದು. ಇವತ್ತು ಹೈಕಮಾಂಡ್ ಜೊತೆ ಹೆಚ್ಚುವರಿ ಡಿಸಿಎಂ ಸ್ಥಾನ ಪ್ರಸ್ತಾಪ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಈ ವಿಚಾರವನ್ನು ಕೆಲವರು ಪದೇ ಪದೇ ಚರ್ಚಿಸುತ್ತಿದ್ದಾರೆ. ಈ ವಿಚಾರ ಹೈಕಮಾಂಡ್ ಎದುರು ಚರ್ಚೆಗೆ ಬಂದರೂ ಬರಬಹುದು, ಬರದೇ ಇದ್ದರು ಇರಬಹುದು ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ಡಿಸಿಎಂ ವಿಚಾರವಾಗಿ ಸ್ವಾಮೀಜಿಗಳ ಹೇಳಿಕೆ: ಸಚಿವ ಕೆ.ಎನ್ ರಾಜಣ್ಣ ಹೇಳಿದ್ದೇನು..?
Date: