ಹೊಸವರ್ಷಕ್ಕೆ ಆ ರೀತಿ ಸಂಭ್ರಮಾಚರಣೆಯ ಮಾಡಬೇಕು ಕೇಕ್ ಕತ್ತರಿಸಬೇಕು, ಪಾರ್ಟಿ ಮಾಡಬೇಕು, ಮೋಜು-ಮಸ್ತಿ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಂಡಿದ್ದವರಿಗೆ ಬೆಂಗಳೂರು ಪೊಲೀಸರು ಶಾಕ್ ನೀಡಿದ್ದಾರೆ. ಹೌದು ಹೊಸವರ್ಷವನ್ನು ಆಚರಣೆ ಮಾಡುವ ಜನರ ಕನಸಿಗೆ ಬೆಂಗಳೂರು ಪೊಲೀಸರು ತಣ್ಣೀರು ಎರಚಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೊಸವರ್ಷಕ್ಕೆ ಹೇರಿರುವ ನಿರ್ಬಂಧದ ಕುರಿತು ಬೆಂಗಳೂರು ಪೊಲೀಸರು ಬರೆದುಕೊಂಡಿದ್ದಾರೆ. ರೂಪಾಂತರಿ ಕೊರೊನ ಕಾರಣದಿಂದಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1, ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಮನೆ ಹೊರತುಪಡಿಸಿ ಹೊರಗಡೆ ಎಲ್ಲಿಯೂ ಸಹ ಹೊಸ ವರ್ಷಾಚರಣೆಗೆ ಗುಂಪು ಕಟ್ಟುವಂತಿಲ್ಲ. ಮನೆಯಲ್ಲಿ, ಪ್ರೈವೇಟ್ ಕ್ಲಬ್ಬುಗಳಲ್ಲಿ, ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ಗಳಲ್ಲಿ ಸದಸ್ಯರು ಮಾತ್ರ ಹೊಸ ವರ್ಷವನ್ನು ಆಚರಣೆ ಮಾಡಬಹುದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಇದನ್ನ ಬಿಟ್ಟು ಹೊರಗಡೆ ಇಲ್ಲಿಯೂ ಸಹ ಅನವಶ್ಯಕವಾಗಿ ಓಡಾಡಿದರೆ ಐಪಿಸಿ ಸೆಕ್ಷನ್ 188 ರ ಅಡಿ ಬಂಧನ ಮಾಡಲಾಗುವುದು ಇಂದು ಪೊಲೀಸರು ತಿಳಿಸಿದ್ದಾರೆ. ಎಂ ಜಿ ರಸ್ತೆ, ಕೋರಮಂಗಲ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರದಲ್ಲಿ ‘ ಸಂಚಾರ ನಿಷೇಧ’ ವಲಯಗಳನ್ನು ಮಾಡಲಾಗುತ್ತದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ಜನತೆ ಹೊಸ ವರ್ಷ ಆಚರಣೆಯ ಹುಮ್ಮಸ್ಸಿನಲ್ಲಿ ಮನೆಯನ್ನು ಬಿಟ್ಟು ಹೊರಗಡೆ ಬಂದರೆ ಪೊಲೀಸರ ಅತಿಥಿಯಾಗುವುದಂತೂ ಪಕ್ಕಾ