ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ ನೋಡಿದ್ರೆ ಶಾಕ್ ಆಗುತ್ತೆ!

Date:

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಟಫ್ ರೂಲ್ಸ್ ಘೋಷಣೆ ಮಾಡಿದ್ದರೂ ಸೋಂಕಿತರ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಇಂದು 8 ಸಾವಿರದ ಗಡಿಯ ಸಮೀಪಕ್ಕೆ ಬಂದಿದೆ.

ಇಂದು ಒಂದೇ ದಿನ 7,955 ಮಂದಿಗೆ ಸೋಂಕು ಬಂದಿದೆ. ಆಸ್ಪತ್ರೆಯಿಂದ 3,220 ಮಂದಿ ಬಿಡುಗಡೆಯಾಗಿದ್ದು 46 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲೇ 5,576 ಮಂದಿಗೆ ಸೋಂಕು ಬಂದಿದ್ದರೆ 29 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 283, ಕಲಬುರಗಿಯಲ್ಲಿ 211 ಮಂದಿಗೆ ಸೋಂಕು ಬಂದಿದೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,48,085ಕ್ಕೆ ಏರಿಕೆ ಆಗಿದ್ದು, ಈ ಪೈಕಿ 9,77,169 ಮಂದಿ ಬಿಡುಗಡೆಯಾಗಿದ್ದಾರೆ. ಸದ್ಯ ಒಟ್ಟು 58,084 ಸಕ್ರಿಯ ಪ್ರಕರಣಗಳಿದ್ದು ಇಲ್ಲಿಯವರೆಗೆ ಒಟ್ಟು 12,813 ಮಂದಿ ಬಲಿಯಾಗಿದ್ದಾರೆ.

ಇಂದು ಒಟ್ಟು 1,35,163 ಕೊರೊನಾ ಪರೀಕ್ಷೆ ಮಾಡಲಾಗಿದ್ದು 1,31,275 ಲಸಿಕೆಯನ್ನು ನೀಡಲಾಗಿದೆ. ಐಸಿಯುನಲ್ಲಿ ಒಟ್ಟು 378 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 169, ಕಲಬುರಗಿ 32, ಮೈಸೂರು 23, ಕೋಲಾರ 17, ತುಮಕೂರು 17 ಮಂದಿ ದಾಖಲಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...