ಧಾರವಾಡ: ರಾಜ್ಯದಲ್ಲಿ ಒಂದೊಂದು ದಿನ ಒಂದೊಂದು ಪ್ರಕರಣಗಳು ಬರುತ್ತಿವೆ. ಹೊಸ ಹೊಸ ಪ್ರಕರಣಗಳತ್ತ ಹೊರಟಿದ್ದೇವೆ. ಹಳೇ ಪ್ರಕರಣ ಬಿಟ್ಟು ಬಿಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೊಂದು ದಿನ ಒಂದೊಂದು ಪ್ರಕರಣಗಳು ಬರುತ್ತಿವೆ. ಹೊಸ ಹೊಸ ಪ್ರಕರಣಗಳತ್ತ ಹೊರಟಿದ್ದೇವೆ. ಹಳೇ ಪ್ರಕರಣ ಬಿಟ್ಟು ಬಿಡುತ್ತೇವೆ. ಈಗ ವಾಲ್ಮೀಕಿ ಪ್ರಕರಣ ಸಹ ಮರೆತು ಬಿಟ್ಟಿದ್ದೇವೆ, ಚರ್ಚೆಯೇ ಕಾಣುತ್ತಿಲ್ಲ.
84 ಕೋಟಿ ರೂ. ಹಣ ಬೇರೆ ಬೇರೆ ರೀತಿಯಲ್ಲಿ ದುರುಪಯೋಗವಾಗಿರುವ ಮಾಹಿತಿ ಇದೆ. ಮಂತ್ರಿಯೂ ಒಬ್ಬರು ರಾಜೀನಾಮೆ ಕೊಟ್ಟಿದಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಏನೇನಾಗುತ್ತದೆ ನೋಡೋಣ. ಇನ್ನೊಬ್ಬ ಮಂತ್ರಿ ಚೇಂಬರ್ನಲ್ಲಿ ಸಭೆ ಕೂಡ ಆಗಿದೆ ಎನ್ನುವ ಸುದ್ದಿಯೂ ಇದೆ. ಯಾವ ಯಾವುದೋ ಅಕೌಂಟ್‌ಗೆ ಹಣ ಹೋಗಿದೆ. ಎಸ್‌ಐಟಿಯಿಂದ ಹಣವೂ ಫ್ರಿಜ್ ಆಗಿದೆ ಅಂತಿದ್ದಾರೆ. ತನಿಖೆ ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ ನೋಡೋಣ ಎಂದರು.
ಹೊಸ ಪ್ರಕರಣಗಳತ್ತ ಹೊರಟಿದ್ದೇವೆ. ಹಳೇ ಪ್ರಕರಣ ಬಿಟ್ಟು ಬಿಡುತ್ತೇವೆ !
Date: