ಹೊಸ ರೂಲ್ಸ್‌ : ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲೇಬೇಕು!

0
109

ದುಡಿಯುವುದಕ್ಕೆ ಸರ್ಕಾರಿ ಕೆಲಸ ಬೇಕು ಆದರೆ ಮಕ್ಕಳನ್ನು ಮಾತ್ರ ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳಿಗೆ ಸೇರಿಸುವುದಿಲ್ಲ ಇದು ಬಹುತೇಕ ಸರ್ಕಾರಿ ಅಧಿಕಾರಿಗಳು ಮಾಡುವ ಕೆಲಸ. ಸರ್ಕಾರಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರೇ ತಮ್ಮ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಾರೆ. ಹೌದು ತಾವು ಪಾಠ ಮಾಡುವ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಳ್ಳಲು ಮುಜುಗರ ಪಡುವ ಎಷ್ಟೋ ಜನ ಸರ್ಕಾರಿ ಶಿಕ್ಷಕರು ಇದ್ದಾರೆ.

 

 

 

ಬೇರೆ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಬಹುದು ಆದರೆ ಸರಕಾರಿ ನೌಕರರ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಅವರು ತಯಾರಿಲ್ಲ.. ಇಂತಹ ಸರ್ಕಾರಿ ನೌಕರರಿಗೆ ಇದೀಗ ತಮಿಳುನಾಡು ಸರ್ಕಾರ ಚಾಟಿಯೇಟು ನೀಡಿದೆ. ಹೌದು ತಮಿಳು ನಾಡು ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಸರ್ಕಾರಿ ನೌಕರರು ಅವರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಸೇರಿಸಿ ವಿದ್ಯಾಭ್ಯಾಸ ಕೊಡಿಸಬೇಕು.

 

 

ಈ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ತಮಿಳುನಾಡು ಸರ್ಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಳ್ಳೆ ದುಡ್ಡು ಮಾಡಿ ತಮ್ಮ ಮಕ್ಕಳನ್ನು ಲಕ್ಷಲಕ್ಷ ಫೀಸು ಕೊಟ್ಟು ಖಾಸಗಿ ಶಾಲೆಯಲ್ಲಿ ಸೇರಿಸುತ್ತಿದ್ದ ಸರ್ಕಾರಿ ನೌಕರರು ಇದೀಗ ಸರ್ಕಾರದ ಆದೇಶದಂತೆ ಇತರ ಮಕ್ಕಳ ಜೊತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲೇಬೇಕು..

LEAVE A REPLY

Please enter your comment!
Please enter your name here