ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರೋಟೋ ಕಾಲ್ ನೂರಕ್ಕೆ ನೂರರಷ್ಟು ಪಾಲನೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಎಂ ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ , ಇಂದಿರಾ ನಗರ, ಕೊರಮಂಗಲದಲ್ಲಿ ಯಾವುದೇ ಘಟನೆಗಳು ಸಂಭವಿಸಿಲ್ಲ ನಮ್ಮ ಅಧಿಕಾರಿ ಸಿಬ್ಬಂದಿ ಒಳ್ಳೆ ಕೆಲಸ ಮಾಡಿದ್ದಾರೆ.
ಈ ವರ್ಷ ಯಾವುದೇ ಅಹಿತಕರ ಘಟನೆ ಬೆಂಗಳೂರಿನಲ್ಲಿ ನಡೆದಿಲ್ಲ ಬಹಳ ಶಾಂತಿಯುತವಾಗಿ ಸಂಭ್ರಮಾಚರಣೆ ನಡೆದಿದೆ, ಹಾಗೂ ಕೋವಿಡ್ ಪ್ರೋಟೋ ಕಾಲ್ 100 ಕ್ಕೆ 100 ಪಾಲನೆಯಾಗಿದೆ ಇದಕ್ಕೆ ಶ್ರಮವಹಿಸಿದ ಅಧಿಕಾರಿ ಸಿಬ್ಬಂದಿಗೆ ಪ್ರಶಂಸೆ ಮಾಡಿದ ಕಮಲ್ ಪಂತ್ ಸಿಲಿಕಾನ್ ಸಿಟಿ ಜನರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್.