ಹೊಸ ವರ್ಷದ ಸಂಭ್ರಮ, ಐಟಿ ರೇಡ್ ನ ನಡುವೆ ನ್ಯೂ ಚಾನೆಲ್ ಗಳ ಟಿಆರ್ ಪಿ ಏನಾಯ್ತು..??
ಹೊಸ ವರ್ಷದ ಸಂಭ್ರಮದಲ್ಲಿದ ಜನತೆಗೆ ವಿಶೇಷ ಕಾರ್ಯಕ್ರಮಗಳನ್ನ ನೀಡಿ ರಂಜನಿಸಿದ್ದ ನ್ಯೂಸ್ ಚಾನೆಲ್ ಗಳಿಗೆ ಆನಂತರ ಸಿಕ್ಕಿದ್ದು, ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲಿನ ಐಟಿ ದಾಳಿ.. ಈ ಎರಡು ಸುದ್ದಿಗಳು ನ್ಯೂಸ್ ಚಾನೆಲ್ ಗಳಿಗೆ ದಿನ ಪೂರ ಸುದ್ದಿಯ ಮೂಲಗಳಾಗಿತ್ತು..
ಹಾಗಿದ್ರೆ ಕಳೆದ ವಾರ ನ್ಯೂಸ್ ಚಾನೆಲ್ ಗಳು ವೀಕ್ಷರನ್ನ ಸೆಳೆಯುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಯ್ತು..? ಯಾವ್ಯಾವ ಚಾನೆಲ್ ಗಳಿಗೆ ಎಷ್ಟೆಷ್ಟೋ ರೇಟಿಂಗ್ ಹೋಯ್ತು ಎಂಬುದರ ಪಟ್ಟಿ ಇಲ್ಲಿದೆ ನೋಡಿ… ಎಂದಿನಂತೆ ಟಿವಿ 9 ಕನ್ನಡ, ಕನ್ನಡದ ಟಾಪ್ ಒನ್ ನ್ಯೂಸ್ ಚಾನೆಲ್ ಆಗೆ ಮುಂದುವರೆದಿದೆ.. ಕಳೆದ ವಾರ 126 ರೇಟಿಂಗ್ ಪಡೆದುಕೊಂಡಿದೆ..ಇನ್ನೂಳಿದಂತೆ ಪಬ್ಲಿಕ್ ಟಿವಿಯ ರೇಟಿಂಗ್ ನಲ್ಲಿ ಏರಿಕೆ ಕಂಡಿದ್ದು 75 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ.. ಇನ್ನು ಸುವರ್ಣ ನ್ಯೂಸ್ ಕೂಡ ಈ ಎರಡು ಸುದ್ದಿಗಳನ್ನ ಬಿತ್ತರಿಸುವಲ್ಲಿ ಹಿಂದೆ ಬಿದ್ದಿರಲಿಲ್ಲ.. ಹೀಗಾಗೆ ಸುವರ್ಣ ಕಳೆದ ವಾರ 59 ರೇಟಿಂಗ್ ಅನ್ನ ಪಡೆದುಕೊಂಡಿದೆ..
ಇನ್ನುಳಿದ ಹಾಗೆ ನ್ಯೂಸ್ 18 ಕನ್ನಡ 44, ದಿಗ್ವಿಜಯ 21, ಬಿಟಿವಿ 16, ಟಿವಿ5 ಕನ್ನಡ 14, ಪ್ರಜಾ ಟಿವಿ ಹಾಗು ಉದಯ ನ್ಯೂಸ್ 10, ಕಸ್ತೂರಿ ನ್ಯೂಸ್ 8, ನ್ಯೂಸ್ ಎಕ್ಸ್ ಕನ್ನಡ 4 ಹಾಗು ಟಿವಿ 1 ಕನ್ನಡ 3 ರೇಟಿಂಗ್ ಅನ್ನ ಪಡೆಯುವ ಮೂಲಕ ಕೊನೆ ಸ್ಥಾನದಲ್ಲಿದೆ..