ಡಿ.ಕೆ.ಶಿವಕುಮಾರ್ ಅವರ ಮೆಡಿಕಲ್ ಕಾಲೇಜ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೊಗಲು ಬಿಡೊಲ್ಲ ನನ್ನ ಪ್ರಾಣ ಹೋದರೂ ಸರಿ ಮೆಡಿಕಲ್ ಕಾಲೇಜಿನ ಕನಕಪುರದಲ್ಲಿ ಮಾಡುತ್ತೇನೆ ಎನ್ನುವ ಮಾತಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು ಪಾಪ ಮೆಡಿಕಲ್‍ಗಾಗಿ ಪ್ರಾಣ ಬಿಡಿತ್ತೀನಿ ಅಂತ ಹೇಳಿದ್ದಾರೆ. ಹೋಗೋ ಪ್ರಾಣಗಳನ್ನು ಉಳಿಸಲಿಕ್ಕೆ ಮೆಡಿಕಲ್ ಕಾಲೇಜು ಇರುವುದು ಎಂಬುದನ್ನು ಮರೆತಂತಿದ್ದಾರೆ ಎಂದು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಜೆಟ್‍ನಲ್ಲಿ ಮಂಜೂರು ಮಾಡಿದ್ದರು. ಡಿ.ಕೆ.ಶಿವಕುಮಾರ್ ಕನಕಪುರ ಕರ್ನಾಟಕದಲ್ಲಿ ಒಂದು ತಾಲ್ಲೂಕು ಎಂಬುದನ್ನು ತಿಳಿದಂತೆ ಕಾಣುತ್ತಿಲ್ಲ . ಮೊದಲು ಅದೊಂದು ತಾಲ್ಲೂಕು ಎಂಬುದನ್ನು ತಿಳಿದುಕೊಳ್ಳಲಿ ಎಂದರು.ಯಡಿಯೂರಪ್ಪ ಅವರು ಸರಿಯಾಗಿಯೇ ಮಾಡಿದ್ದಾರೆ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜ್ ಆಗುವುದು ಖಂಡಿತ ಪ್ರಾಣ ಹೋಗುವಂತಹ ಪರಿಸ್ಥಿತಿ ಬಂದರೆ ಅದೇ ಮೆಡಿಕಲ್ ಕಾಲೇಜಿನಲ್ಲಿ ಪ್ರಾಣ ಉಳಿಸಿಕೊಳ್ಳಬಹುದು ಎಂಬ ಹೇಳಿಕೆಯನ್ನು ಸುಧಾಕರ್ ಅವರು ನೀಡಿದ್ದಾರೆ .