100ರ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ?

Date:

 ಮಸ್ತನಮ್ಮ . ಮೂಲತಃ ಆಂಧ್ರ ಪ್ರದೇಶದವರು. ಇವರು ದೇಶಿಯ ಅಡುಗೆ ಶೈಲಿಯಲ್ಲಿ ಅಡುಗೆಗಳನ್ನು ಮಾಡಿ ಯುಟ್ಯೂಬ್ ನಲ್ಲಿ ವಿಡಿಯೋಗಳನ್ನು ಹಾಕುತ್ತ ಬಹಳ ಖ್ಯಾತರಾದವರು. ಇವರು ಮಾಡುವ ಸ್ವಾದಿಷ್ಟಕರ ಆಹಾರ ತಯಾರಿಸುವ ವಿಧಾನ ವಿಶಿಷ್ಟವಾಗಿದ್ದು, ಇದನ್ನು ಭಾರತೀಯರು ಅಲ್ಲದೆ, ದೇಶ-ವಿದೇಶದವರು ಇವರ ವಿಡಿಯೋ ಹಾಗೂ ಇವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

106 ವರ್ಷಗಳ ಗಟ್ಟಿಗಿತ್ತಿ ಮಸ್ತನಮ್ಮ ಅವರು ತಯಾರಿಸಿದ ದೇಶಿ ಸಸ್ಯಹಾರ ಹಾಗೂ ಮಾಂಸಹಾರ ರೆಸಿಪಿಗಳನ್ನು ಯುಟ್ಯೂಬ್ ಚಾನಲ್ Country Food ಹೆಸರಿನಲ್ಲಿ ಅಪ್ಲೋಡ್ ಮಾಡಲಾಗಿತ್ತು. ವಿಶೇಷತೆ ಏನೆಂದರೆ ಅತಿ ಹಿರಿಯ ವಯಸ್ಸಿನವರು ಇಂತಹ ಕೆಲಸಕ್ಕೆ ಮುಂದಾಗಿರೋದು ನಿಜಕ್ಕೂ ಬೇರೆ ವಯಸ್ಸಿನವರಿಗೂ ಇವರು ಮಾದರಿ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಇನ್ನು ಮಸ್ತನಮ್ಮಳ ಯುಟ್ಯೂಬ್ ಚಾನಲ್ ಗೆ 14 ಲಕ್ಷದ 10 ಸಾವಿರ ಚಂದಾರಾರಿದ್ದು, ಸಾಂಪ್ರದಾಯಿಕ ಅಡುಗೆ ಸಿದ್ದಪಡಿಸುವ ತನ್ನ ನೈಪುಣ್ಯತೆಯಿಂದ ಈ ಅಜ್ಜಿ ಎಲ್ಲರ ಮನಗೆದ್ದಿದ್ದಾರೆ. ಸ್ವಾದಿಷ್ಟ ಎಗ್ ದೋಸೆಯಿಂದ ಹಿಡಿದು ಫಿಶ್ ಪ್ರೈ, ಬಾಂಬೂ ಚಿಕನ್ ಬಿರಿಯಾನಿ ಮಾಡುವ ಬಗೆಯನ್ನು ಅವರ ವಿಡಿಯೋಗಳು ಕಲಿಸುತ್ತವೆ. ಅಜ್ಜಿಯ ಯುಟ್ಯೂಬ್ ಚಾನೆಲ್ ನ್ನು ಅವರ ಮರಿ ಮೊಮ್ಮಗ ಕೆ. ಲಕ್ಷ್ಮಣ್ ಅವರು ನಡೆಸುತ್ತಿದ್ದಾರೆ.

ಮೊಮ್ಮಗ ಲಕ್ಷ್ಮಣ್ ಅಜ್ಜಿಯ ಕೈ ರುಚಿಯ ನೋಡಿದ್ದರಿಂದ ಅಜ್ಜಿ ಮಾಡಿದ ಸ್ವಾದಿಷ್ಟಕರವಾಗಿ ಮಾಡುವ ಅಡುಗೆಯ ಪರಿಯನ್ನ ಯುಟ್ಯೂಬ್ ಚಾನಲ್ ನಲ್ಲಿ ಹಾಕಿದರು. ಮೊದಲ ವಿಡಿಯೋ ಎಲ್ಲೆಡೆ ವೈರಲ್ ಆಯಿತು. ಆಗ ಸ್ವಂತ ಯುಟ್ಯೂಬ್ ಚಾನಲ್ ನಡೆಸಲು ತೀರ್ಮಾನಿಸಿ ಅಜ್ಜಿಯ ಸಹಾಯದಿಂದ ತಾಜಾ ವಸ್ತುಗಳನ್ನು ಉಪಯೋಗಿಸಿ ಸ್ವಾದಿಷ್ಟ ಖಾದ್ಯಗಳನ್ನು ತಯಾರಿಸುವ ವೀಡಿಯೋ ಸಿದ್ಧಪಡಿಸಲು ನಿರ್ಧರಿಸಿದವು. ಆಗ ಅಜ್ಜಿಗೆ ಸಂತೋಷವಾಯಿತು ಎನ್ನುತ್ತಾರೆ ಅವರ ಮರಿಮೊಮ್ಮಗ ಲಕ್ಷ್ಮಣ್.
107 ವರ್ಷದ ಮಸ್ತನಮ್ಮನವರು ಸೀಪುಡ್ ಹಾಗೂ ದೋಸೆ ತಯಾರಿಸುವುದರಲ್ಲಿ ಸಿದ್ಧ ಹಸ್ತರಂತೆ. ಗ್ರಾಮೀಣ ಸೊಗಡಿನ ರುಚಿಕಟ್ಟಾದ ಅಡುಗೆ ಮಾಡುವ ಈ ಅಜ್ಜಿಯ ವಿಶೇಷ ಎಂದರೆ 21ನೇ ಶತಮಾನದಲ್ಲಿದ್ದರೂ ಅವರು ಗ್ಯಾಸ್ ನಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಕೃಷಿ ಜಮೀನಿನ ಹತ್ತಿರ ತೆರೆದ ಬಯಲಿನಲ್ಲಿ ರುಚಿಕಟ್ಟಾದ ಸಸ್ಯಹಾರಿ ಅದರಲ್ಲೂ ವಿಶೇಷವಾಗಿ ಮಾಂಸಹಾರಿ ಅಡುಗೆ ಮಾಡುತ್ತಿದ್ದ ಇವರ ಶೈಲಿಗೆ ಹಲವರ ಬಾಯಲ್ಲಿ ನೀರೂರಲು ಕಾರಣವಾಗಿತ್ತು.

ಕುತೂಹಲ ಎಂದರೆ ಮಸ್ತನಮ್ಮನವರ ಬದುಕಿನ ಬಗ್ಗೆ ಹೇಳಬೇಕೆಂದರೆ, ಮಸ್ತನಮ್ಮನವರ ಜೀವನದಲ್ಲಿ ಸಂಕಷ್ಟವನ್ನು ನೋಡಿ ಬೆಳೆದವರು. ಇನ್ನು 22 ವರ್ಷಕ್ಕೆ ಗಂಡನ್ನು ಕಳೆದುಕೊಂಡರಲ್ಲದೆ, ಕೊನೆಗೆ ಹುಟ್ಟಿದ ಐದು ಮಕ್ಕಳಲ್ಲಿ ಒಬ್ಬರು ಬದುಕಿಕೊಂಡರು. ಕೃಷಿ ಜಮೀನನ್ನು ನಂಬಿಕೊಂಡು ಕೆಲಸ ಮಾಡುತ್ತಿದ್ದ ಈ ಅಜ್ಜಿಯ ಕೈ ರುಚಿ ಅವರ ಬದುಕನ್ನೇ ಬದಲಾಯಿಸಿತು. ವಿಶಿಷ್ಟ ರೀತಿಯ ಅಡುಗೆ ಮಾಡುತ್ತಿದ್ದ ಅವರನ್ನು ಗುಂಟೂರಿನ ರೆಸ್ಟೊರೆಂಟ್ ಮಾಲೀಕರ ಸೇರಿದಂತೆ ಅನೇಕರು ಬಂದುಕೈ ರುಚಿ ಸವಿದು ಖುಷಿಪಟ್ಟಿದ್ದು ಉಂಟು.
107 ವರ್ಷದ ಮಸ್ತನಮ್ಮನವರು ತಮ್ಮ ಕೈ ರುಚಿ ಮೂಲಕ ಯು ಟ್ಯೂಬ್ ಸ್ಟಾರ್ ಮಾತ್ರವಲ್ಲದೇ, ಭಾರತದ ಪಾರಂಪರಿಕ ಪದ್ದತಿಯನ್ನು ವಿಶ್ವಕ್ಕೆ ಪರಿಚಯಿಸಿದ ಈ ಮಣ್ಣಿನ ಹೆಮ್ಮಯ ನಾರಿ ಎಂದೇ ಹೇಳಬಹುದು. ಇವರು ಡಿಸೆಂಬರ್ 3, 2018ರಲ್ಲಿ ತೀರಿಕೊಂಡರು.

 

ತಮ್ಮಿಂದ ಇನ್ನೇನು ಸಾಧ್ಯವಿಲ್ಲ ಎಂದು ಜೀವನದಲ್ಲಿ ಹತಾಶರಾಗಿರುವ ಪ್ರತಿಯೊಬ್ಬರಿಗೂ ತಾವು ಸಾಧಿಸಬಲ್ಲೆವು ಎಂದು ವಿಶ್ವಾಸ ತುಂಬುವ ಸ್ಫೂರ್ತಿ ಇವರಿಂದ ಸಿಕ್ಕೇ ಸಿಗುತ್ತದೆ.

Share post:

Subscribe

spot_imgspot_img

Popular

More like this
Related

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...