100ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಾಮಾಥ್ರ್ಯದ ದ್ವಿಚಕ್ರವಾಹನದಲ್ಲಿ ಇನ್ಮುಂದೆ ಒಬ್ಬರೇ ಸವಾರಿ ಮಾಡ್ಬೇಕು.. ಈ ಬಗ್ಗೆ ಈಗಾಗಲೇ ಸುದ್ದಿ ಆಗಿದೆ. ಇದೀಗ ಈ ಚಿಂತನೆಗೆ ಅಧಿಕೃತ ಮುದ್ರೆ ಬಿದ್ದಿದ್ದು 100 ಸಿಸಿ ದ್ವಿಚಕ್ರವಾಹನದಲ್ಲಿ ಇನ್ನುಮುಂದೆ ಎರಡು ಸೀಟಿದಲ್ಲಿ ಅದರ ನೋಂದಣಿಯನ್ನೇ ಮಾಡಲ್ಲ..! ಈ ಹೊಸ ನಿಯಮ ಇಂದಿನಿಂದಲೇ ಜಾರಿಗೆ ಬರಲಿದೆ..!
1989ರ ಕರ್ನಾಟಕ ಮೋಟರ್ ವಾಹನಗಳ ಕಾಯ್ದೆಯಲ್ಲೇ ಇದನ್ನು ಹೇಳಲಾಗಿದೆ. 2009ರಲ್ಲಿ ಮೈಸೂರಿನ ಹೆಬ್ಬಾಳ ರಸ್ತೆಯಲ್ಲಿ ನಡೆದಿದ್ದ ಆ್ಯಕ್ಸಿಡೆಂಟ್‍ಗೆ ಸಂಬಂಧಿಸಿದಂತೆ ಮೋಟರ್ ವಾಹನಗಳ ಕಾಯ್ದೆ 143(3)ರ ಅನ್ವಯ 100 ಸಿಸಿಗಿಂತ ಕಡಿಮೆ ಇಂಜಿನ್ ಸಾಮಥ್ರ್ಯವಿರೋ ದ್ವಿಚಕ್ರವಾಹನದಲ್ಲಿ ಹಿಂಬದಿ ಸವಾರರು ಇರುವಂತಿಲ್ಲ ಎಂದು ಹೇಳಿದ್ದು, ಈ ಹಿನ್ನೆಲೆಯಲ್ಲಿ ಹಿಂಬದಿ ಸೀಟಿರುವ ವಾಹನ ನೋಂದಣಿಯನ್ನು ಸಾರಿಗೆ ಇಲಾಖೆ ಇಂದಿನಿಂದ ಮಾಡಲ್ಲ..!
ರಾಜ್ಯದಲ್ಲಿ ಜಾರಿಯಾಗಿರೋ ಈ ನಿಯಮದಿಂದ 100 ಸಿಸಿ ಸಾಮಾಥ್ರ್ಯದ ದ್ವಿಚಕ್ರವಾಹನ ಕಂಪನಿಗಳಿಗೆ ದೊಡ್ಡ ತಲೆ ನೋವು ಎದುರಾಗಿದೆ. ಕರ್ನಾಟಕಕ್ಕೆ ಮಾತ್ರವೇ ಬೈಕ್ ವಿನ್ಯಾಸವನ್ನು ರೂಪಿಸಬೇಕಾದ ಪರಿಸ್ಥಿತಿ ಕಂಪನಿಗಳ ಮುಂದಿದೆ..!
ಈ ನಿಯಮ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ವಾಹನಗಳ ಸಂಖ್ಯೆ ಹೆಚ್ಚುವ ಅಪಾಯ ಕೂಡ ಇದೆ. ಇದರಿಂದ ಮಾಲಿನ್ಯವೂ ಹೆಚ್ಚಲಿದೆ.