40ರ ಗಡಿ ದಾಟಿದ ಕೂಡಲೇ ಕೈ ಕಾಲು ನೊವೆಂದು ಹೇಳುವ ನಮಗೆಲ್ಲ ಈ ಅಜ್ಜಿಯನ್ನು ನೋಡಿ ನಾಚಿಕೆಯಾಗಬೇಕು.. ಯಾಕಂದ್ರೆ ಈ ಅಜ್ಜಿಯ ವಯಸ್ಸ ನೂರು..! ಆದರೂ 100 ಮಿಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಯುವಕರನ್ನೂ ನಾಚಿಸುವಂತೆ ಈ ಅಜ್ಜಿ ಸಾಧನೆ ಮಾಡಿದೆ..!
ಹೌದು.. ಈ ಶತಾಯುಷಿ ಭಾರತೀಯ ಮಹಿಳೆ ಅಮೇರಿಕನ್ ಮಸ್ಟರ್ ಅಥ್ಲೆಟಿಕ್ಸ್‍ನಲ್ಲಿ ಇಂತಹದೊಂದು ಸಾಧನೆಯನ್ನು ಮಾಡಿದ್ದಾರೆ. ಭಾರತೀಯ ಮೂಲದ ಮನ್ ಕೌರ್ ಎನ್ನುವ ಅಜ್ಜಿ ಕೆನಡಾದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಮೂರು ಚಿನ್ನದ ಪದಕ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 100ವರ್ಷ ಮೇಲ್ಪಟ್ಟವರಿಗಾಗಿ ನಡೆದ ಈ ಸ್ಪರ್ಧೆಯಲ್ಲಿ ಬೇರೆ ಸ್ಪರ್ಧಿಗಳೇ ಇರಲಿಲ್ಲ. ಕೌರ್ ಈಗಾಗಲೇ ಹಲವಾರು ಮಾಸ್ಪರ್ ಅಥ್ಲೆಟಿಕ್ಸ್‍ನಲ್ಲಿ ಭಾಗವಹಿಸಿದ್ದು, 20ಕ್ಕೂ ಹೆಚ್ಚು ಪದಕವನ್ನು ಗೆದ್ದಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಕೌರು ಓಡಲು ಆರಂಭಿಸಿದ್ದು ತನ್ನ 93ನೇ ವಯಸ್ಸಿನ್ನಲ್ಲಂತೆ..! ತಾಯಿಯ ಅತ್ಯುತ್ತಮ ಆರೋಗ್ಯವನ್ನು ಗಮನಿಸಿದ್ದ ಪುತ್ರ ಗುರುದೇವ್ ಸಿಂಗ್, ತಾಯಿಗೆ ಹಿರಿಯ ಕ್ರೀಡಾಕೂಟದಲ್ಲಿ ಭಾವಹಿಸುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಕೌರ್ ತನ್ನ 93ನೇ ವಯಸ್ಸಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕಾಲಿಟ್ಟರು. ಪ್ರತೀ ನಾಲ್ಕು ವಷ್ಕ್ಕೊಮ್ಮೆ ನಡೆಯುವ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್‍ನಲ್ಲಿ ಭಾಗವಹಿಸುತ್ತಾ ಬಂದಿರುವ ಈ ಶತಾಯುಷಿ ಅಜ್ಜಿ 20ಕ್ಕೂ ಹೆಚ್ಚು ಪದಕ ತಮ್ಮದಾಗಿಸಿಕೊಂಡಿದ್ದಾರೆ.
POPULAR STORIES :
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.
18 ವರ್ಷ ತುಂಬುದ್ರೆ 37 ಸಾವಿರ ಆಫರ್…!
ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!
ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!