12 ವರ್ಷದಿಂದ ರೋಹಿತ್ ಶರ್ಮಾ ಹೆಸರಲ್ಲಿದ್ದ ದಾಖಲೆ ಉಡೀಸ್ ಮಾಡಿದ ಹರ್ಷಲ್

Date:

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಡೆತ್‌ ಓವರ್‌ ಬೌಲಿಂಗ್‌ ಟ್ರಬಲ್‌ಗೆ ಕೊನೆಗೂ ಪರಿಹಾರ ಸಿಕ್ಕಂತ್ತಾಗಿದೆ. ಯುವ ಆಲ್‌ರೌಂಡರ್‌ ಹರ್ಷಲ್‌ ಪಟೇಲ್‌ ರಿವರ್ಸ್‌ ಸ್ವಿಂಗ್, ಸ್ಲೋ ಬಾಲ್ ಮತ್ತು ಯಾರ್ಕರ್‌ಗಳ ಮೂಲಕ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದು ಆರ್‌ಸಿಬಿಗೆ ತನ್ನ ಬೌಲಿಂಗ್‌ ಬಳಗದ ಮೇಲೆ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.

ಹರಿಯಾಣ ಮೂಲದ 30 ವರ್ಷದ ಬಲಗೈ ವೇಗಿ ಇದೇ ವೇಳೆ ರೋಹಿತ್‌ ಶರ್ಮಾ ಅವರ ಹೆಸರಲ್ಲಿದ್ದ ಅತ್ಯಂತ ವಿಶೇಷ ಬೌಲಿಂಗ್‌ ದಾಖಲೆಯನ್ನು ಮುರಿದಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಕೈರೊನ್ ಪೊಲಾರ್ಡ್‌, ಕೃಣಾಲ್ ಪಾಂಡ್ಯ ಮತ್ತು ಮಾರ್ಕೊ ಯನ್ಸನ್ ಅವರನ್ನು ಬಲಿ ಪಡೆಯುವ ಮೂಲಕ ಹರ್ಷಲ್‌ ಸ್ಮರಣೀಯ ದಾಖಲೆ ತಮ್ಮದಾಗಿಸಿಕೊಂಡರು. ಈ ಮೂಲಕ ತಮ್ಮ 4 ಓವರ್‌ಗಳಲ್ಲಿ 27 ರನ್‌ ನೀಡಿ 5 ವಿಕೆಟ್ ಪಡೆದ ಸಾಧನೆ ಮಾಡಿದರು.

ಅಂದಹಾಗೆ ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ ಎದುರು ಇಂಡಿಯನ್ ಪ್ರೀಮಿಯರ್ ಲೀಗ್‌ ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ದಾಖಲೆ ರೋಹಿತ್‌ ಶರ್ಮಾ ಅವರ ಹೆಸರಲ್ಲಿತ್ತು ಎಂದರೆ ಅಚ್ಚರಿ ಆಗಬಹುದು. ಆದರೆ, ಇದು ಸತ್ಯ. 2009ರಲ್ಲಿ ಡೆಕನ್‌ ಚಾರ್ಜರ್ಸ್‌ ತಂಡ ಪರ ಆಡಿದ್ದ ರೋಹಿತ್‌ ಶರ್ಮಾ, ಅಂದು ಮುಂಬೈ ವಿರುದ್ಧದ ಲೀಗ್‌ ಪಂದ್ಯದಲ್ಲಿ ಕೇವಲ 6 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಒಡೆದು ಯಶಸ್ವಿ ಬೌಲರ್‌ ಎನಿಸಿದ್ದರು.

ರೋಹಿತ್‌ ಶರ್ಮಾ ಹೆಸರಲಲ್ಲಿದ್ದ 12 ವರ್ಷಗಳ ಹಳೇ ದಾಖಲೆಯನ್ನು ನುಚ್ಚು ನೂರು ಮಾಡಿದ ಹರ್ಷಲ್‌ ಪಟೇಲ್‌, ಇನ್ನು ಟೀಮ್‌ ಇಂಡಿಯಾ ಪರ ಆಟದ ಭಾರತೀಯ ಬೌಲರ್‌ಗಳ ಪೈಕಿ ಐಪಿಎಲ್‌ನಲ್ಲಿ ಮೂರನೇ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್‌ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕೆಕೆಆರ್‌ ತಂಡದ ಮಾಂತ್ರಿಕ ಸ್ಪಿನ್ನರ್‌ ವರುಣ್ ಚಕ್ರವರ್ತಿ ಮತ್ತು ರಾಜಸ್ಥಾನ್ ರಾಯಲ್ಸ್‌ನ ಮಾಜಿ ಬೌಲರ್‌ ಅಂಕಿತ್‌ ರಜಪೂತ್‌ ಮಾತ್ರ ಇದ್ದಾರೆ.

ಬಲಗೈ ಮಧ್ಯಮ ವೇಗಿ ಅಂಕಿತ್‌ ರಜಪೂತ್‌ ಐಪಿಎಲ್ 2019 ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 14 ರನ್‌ ನೀಡಿ 5 ವಿಕೆಟ್‌ಗಳನ್ನು ಉರುಳಿಸಿದ್ದರು. ಕೆಕೆಆರ್‌ನ ಚಕ್ರವರ್ತಿ, ಯುಎಇ ಅಂಗಣದಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ (ಐಪಿಎಲ್ 2020) ಡೆಲ್ಲಿ ಕ್ಯಾಪಿಟಲ್ಸ್‌ ಎದುರು 20 ರನ್‌ ಬಿಟ್ಟುಕೊಟ್ಟು ಐದು ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಇದಾದ ಬಳಿಕ ಚಕ್ರವರ್ತಿಗೆ ಭಾರತ ತಂಡಕ್ಕೆ ಆಡುವ ಅವಕಾಶ ಸಿಕ್ಕಿತ್ತಾದರೂ, ಫಿಟ್ನೆಸ್‌ ಟೆಸ್ಟ್‌ನಲ್ಲಿ ಸಾಮರ್ಥ್ಯ ಸಾಬೀತು ಮಾಡಲು ವಿಫಲರಾಗಿ ಸ್ಥಾನ ಪಡೆಯದೇ ಹೋದರು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಏಪ್ರಿಲ್ 14ರಂದು ಚೆಪಾಕ್‌ ಕ್ರೀಡಾಂಗಣದಲ್ಲೇ ನಡೆಯಲಿರುವ ತನ್ನ 2ನೇ ಲೀಗ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಪೈಪೋಟಿ ನಡೆಸಲಿದೆ. ಹರ್ಷಲ್‌ ಪಟೇಲ್‌ ಇಲ್ಲೂ ಅಂಥದ್ದೇ ಪ್ರದರ್ಶನ ನೀಡಬಲ್ಲರೆ ಎಂಬ ಕುತೂಹಲ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿದೆ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...