ಎರಡು ವರ್ಷದ ಮಗುವನ್ನು 12 ವರ್ಷದ ಬಾಲಕ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾದ ದೇವಸ್ಥಾನದ ಬಳಿ 2ವರ್ಷದ ಮಗುವಿನ ಶವ ಪತ್ತೆಯಾಗಿತ್ತು. ಮಗು ಕಾಣೆಯಾದ 14 ಗಂಟೆಗಳ ಬಳಿಕ ಹೆಣವಾಗಿ ಸಿಕ್ಕಿತ್ತು…! ಮುಖ, ಕುತ್ತಿಗೆ, ಬೆನ್ನಿನ ಭಾಗದಲ್ಲಿ ಗಾಯದ ಗುರುತುಗಳಿದ್ವು. ಮಗುವಿನ ಬಲಗಣ್ಣಿಗೂ ಪೆಟ್ಟಾಗಿತ್ತು.
ಪ್ರಕರಣವನ್ನು ಬೇಧಿಸಿದಾಗ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ದೇವಸ್ಥಾನದ ಬಳಿ ಆಟವಾಡ್ತಿದ್ದ 2 ವರ್ಷದ ಮಗುವನ್ನು ಆರೋಪಿ ಬಾಲಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆ ಜೋರಾಗಿ ಅಳಲು ಶುರುಮಾಡಿದಾಗ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯನ್ನು ಬಾಲಾಪರಾಧ ಭವನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.