ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

admin
2 Min Read

ಅವತ್ತು ಏಪ್ರಿಲ್ 4, 2015. 13 ವರ್ಷದ ದಿಶಾಂತ್ ಮೆಹಂದ್ರಿತ್ತಾ ಮತ್ತು ಆತನ ಕುಟುಂಬದ ದಿನಚರಿ ಎಂದಿನಂತೇ ಸಾಗಿತ್ತು..! ವೃತ್ತಿಯಲ್ಲಿ ಚಾರ್ಟಡ್ ಅಕೌಂಟೆಂಟ್ ಆಗಿದ್ದ ತಂದೆ ರವೀಂದರ್ ಬದ್ದಿಯಲ್ಲಿನ ತಮ್ಮ ಆಫೀಸಲ್ಲಿ ಇದ್ದರು..! ದಿಶಾಂತ್ ಆತನ ತಾಯಿ ಅರ್ಚನಾ ಹಾಗೂ ಎಂಟು ವರ್ಷದ ತಮ್ಮ ರ್ಯಾನ್ ಜೊತೆ ಮನೆಯಲ್ಲಿ ಇದ್ದ..!
ಮಧ್ಯಾಹ್ನ 2ಗಂಟೆ ಸುಮಾರಿಗೆ ಅಪರಿತ ವ್ಯಕ್ತಿಯೊಬ್ಬ ಮನೆಯ ಬಾಗಿಲನ್ನು ಬಡಿಯುತ್ತಾನೆ..! ರವೀಂದರ್ ಇದ್ದಾರ ಎಂದು ಕೇಳುತ್ತಾನೆ..! ಅವರು ಮನೆಯಲ್ಲಿಲ್ಲ ಎಂದು ಹೇಳಿದ ಅರ್ಚನಾ ಆಫೀಸಲ್ಲಿದ್ದ ರವೀಂದರ್ ಗೆ ಫೋನ್ ಮಾಡಿ, ಮನೆಯ ಬಾಗಿಲಲ್ಲಿ ರವೀಂದರ್ ಗೆ ಕಾಯ್ತಾ ಇದ್ದ ಆ ಅಪರಿಚಿತನಿಗೆ ಮಾತಾಡಲು ಹೇಳ್ತಾರೆ..! ರವೀಂದರ್ ಮನೆಗೆ ಬಂದಿದ್ದ ವ್ಯಕ್ತಿಯ ಜೊತೆ ಫೋನ್ ನಲ್ಲೇ ಮಾತಾಡಿ ಇನ್ನೊಂದು ದಿನ ಬರುವಂತೆ ಹೇಳ್ತಾರೆ..! ಮನೆಯಲ್ಲಿ ಅರ್ಚನಾ ಮತ್ತು ಅವರ ಇಬ್ಬರು ಪುಟ್ಟ ಮಕ್ಕಳು ಮಾತ್ರ ಇರೋದನ್ನು ಕನ್ಫರ್ಮ್ ಮಾಡಿಕೊಂಡ ಆ ಅಪರಿಚಿತ “ಸರಿ, ಸ್ವಲ್ಪ ವಾಶ್ ರೂಮ್ ಬಳಸಿಕೊಳ್ಳ ಬಹುದಾ ಎಂದು ಕೇಳಿಕೊಳ್ತಾನೆ”..! ಅರ್ಚನಾ ವಾಶ್ರೂಂ ದಾರಿಯನ್ನು ತೋರಿಸ್ತಾರೆ..! ಮನೆಯ ಒಳಗೆ ಬಂದ ಆ ಅಪರಿಚಿತ ಅರ್ಚನಾರಿಗೆ ಚಾಕು ತೋರಿಸಿ, ಅವರ ಮಕ್ಕಳಿಗೆ ಮನೆಯಲ್ಲಿರೋ ಆಭರಣ, ಹಣವನ್ನೆಲ್ಲಾ ಬೇಗ ತಂದು ಕೊಟ್ಟು ಅಮ್ಮನನ್ನು ಬಿಡಿಸಿಕೊಳ್ಳಿ ಎಂದು ಹೆದರಿಸುತ್ತಾನೆ..! ಆಗ ತಕ್ಷಣವೇ ಆ ಕಳ್ಳನ ಕಾಲಿಗೆ ಬಿದ್ದು ಅಮ್ಮನನ್ನು ಬಿಡುವಂತೆ ಕೇಳಿಕೊಳ್ತಾನೆ 13 ವರುಷದ ದಿಶಾಂತ್..! ಕಳ್ಳನ ಗಮನವನ್ನು ತನ್ನತ್ತ ಸೆಳೆದ ದಿಶಾಂತ್ ಅಮ್ಮ ಮತ್ತು ಪುಟ್ಟ ತಮ್ಮನನ್ನು ಸೇಫ್ ಮಾಡ್ತಾನೆ..! ಕಣ್ಣು ಮುಚ್ಚಿ ಬಿಡುವುದರೊಳಗೇ ಕಳ್ಳನ ಕೈಯಲ್ಲಿದ್ದ ಚಾಕುವನ್ನು ಕಿತ್ತು ದೂರ ಎಸೆಯುತ್ತಾನೆ..! ಕಳ್ಳನ ಕೈಯ ಚಾಕು ದೂರಾಗಿದ್ದೇ ತಡ ದಿಶಾಂತ್
ಮತ್ತು ಅಮ್ಮಾ ಅರ್ಚನಾ ಸೇರಿ ಕಳ್ಳನನ್ನು ಹಿಡಿದು ಕಟ್ಟುತ್ತಾರೆ..! ತಕ್ಷಣ ಪೊಲೀಸರಿಗೆ ಮಾಹಿತಿ ನೀಡ್ತಾರೆ..! ಪೊಲೀಸರು ಅವನನ್ನು ಬಂಧಿಸುತ್ತಾರೆ..!
ಎಂಟನೇ ತರಗತಿ ಓದ್ತಾ ಇರೋ 13ರ ಬಾಲಕ ದಿಶಾಂತ್ ಗೆ ತೋರಿದ ದೈರ್ಯ, ಸಾಹಸವನ್ನು ಮೆಚ್ಚಿರುವ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ `ನ್ಯಾಷನಲ್ ಬ್ರೇವರಿ ಅವಾರ್ಡ್-2015ಗೆ ದಿಶಾಂತ್ ಹೆಸರನ್ನು ಆಯ್ಕೆ ಮಾಡಿದೆ..! ಈ ಬಾರಿಯ ಗಣರಾಜ್ಯೋತ್ಸವದಂದು ದಿಶಾಂತ್ ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಷನಲ್ ಬ್ರೇವರಿ ಅವಾರ್ಡ್ ಪಡೆಯಲಿದ್ದಾನೆ..!
ಸಮಯಕ್ಕೆ ಸರಿಯಾಗಿ ಬುದ್ಧಿವಂತಿಕೆ ಉಪಯೋಗಿಸಿ, ದೈರ್ಯದಿಂದ ಕಳ್ಳನಿಂದ ಅಮ್ಮನನ್ನು, ದುಡ್ಡು, ಬಂಗಾರವನ್ನೂ ಉಳಿಸಿಕೊಂಡ ದಿಶಾಂತ್ ಸಾಧನೆಯನ್ನು, ಆತನ ದೈರ್ಯವನ್ನು ಎಲ್ಲರೂ ಮೆಚ್ಚಲೇಬೇಕು. ಈ ಕೆಚ್ಚೆದೆಯ ಹುಡುಗನಿಗೆ ನಮ್ಮಕಡೆಯಿಂದಲೂ ಒಂದು ಸಲಾಂ.

 

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share This Article
Leave a Comment