ಬೆಳಗ್ಗೆ ಚುರುಕಿನಿಂದ ನಡೆದ ಮತದಾನ ಮಧ್ಯಾಹ್ನ ಬಿರು ಬಿಸಿಲಿನ ಪರಿಣಾಮ ಮಂದಗತಿಯಲ್ಲಿ ಸಾಗಿತ್ತು. ಸಂಜೆಯ 6 ಗಂಟೆಯ ವೇಳೆಗೆ ಮತದಾನ ಕೊನೆಗೊಡಿದ್ದು. ಮತದಾನದ ಪ್ರಮಾಣ ಶೇ.65ರಷ್ಟು ದಾಟಿತ್ತು.
ಅಲ್ಲಲ್ಲಿ ಕೈಕೊಟ್ಟ ಮತ ಯಂತ್ರ, ಹಲವೆಡೆ ಕೆಲ ಕಾಲ ಮತದಾನ ಸ್ಥಗಿತ, ಕೆಲವೆಡೆ ತಡವಾಗಿ ಆರಂಭವಾದ ಮತದಾನ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸೇರಿದಂತೆ ಸಣ್ಣ ಪುಟ್ಟ ಗೊಂದಲ ಹೊರತುಪಡಿಸಿದರೆ ರಾಜ್ಯದ ಎರಡನೇ ಹಂತದ ಮತದಾನ ಶಾಂತಿಯುತ ವಾಗಿ ನಡೆದಿದೆ. ಭಾರತದ ಚುನಾವಣಾ ಆಯೋಗದ ಮಾತಿ ಪ್ರಕಾರ ಸಂಜೆ ವೇಳೆಗೆ ಒಟ್ಟು ಶೇ.65 ರಷ್ಟುಮತದಾನವಾಗಿದ್ದು, ಪೂರ್ಣ ಮಾಹಿತಿ ಬಂದ ನಂತರ ಮತದಾನದ ಪ್ರಮಾಣ ಮತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.ಸಣ್ಣಪುಟ್ಟ ಗೊಂದಲದ ನಡುವೆ ಇಂದು ನಡೆದ ರಾಜ್ಯದಲ್ಲಿ 14 ಕ್ಷೇತ್ರಗಳ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ಮೊದಲ ಹಂತದಂತೆಯೇ ಎರಡನೇ ಹಂತದಲ್ಲೂ ಶಾಂತಿಯುತ ಮತದಾನವಾಗಿದೆ.