ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

Date:

ಈಗಿನ ಕಾಲದ ಗಂಡ್ಮಕ್ಳು ತಾನು ಮಾಡ್ತಾ ಇರೋ ಪದವೀನೇ ಆದಷ್ಟು ಬೇಗ ಮುಗಿಲಪ್ಪಾ..! ಯಾವನಿಗೆ ಬೇಕು ಈ ಓದು ಬರಹ ಅಂತ ದಿನವಿಡಿ ದೇವರ ಬಳಿ ಪ್ರಾರ್ಥನೆ ಮಾಡ್ತಾ ಇದ್ರೆ.. ಇಲ್ಲೊಬ್ಬ ಪ್ರೋಫೆಸರ್‍ಗೆ ಓದೋದು ಅಂದ್ರೆ ಜೀವಕ್ಕಿಂತ ಹೆಚ್ಚಂತೆ ನೋಡಿ.. ಇವರ ಈ ಶರ ವೇಗದ ಪದವಿಯನ್ನು ಪಡೆದ್ಕೊಳ್ತಾ ಇರೋದು ನೋಡ್ತಾ ಇದ್ರೆ.. ಭವಿಷ್ಯದ ಶಿಕ್ಷಣ ಸಚಿವರಾಗೋದಂತೂ ಗ್ಯಾರೆಂಟಿ..! ಯಾಕೆ ಹೀಗೆ ಹೇಳ್ತಾ ಇದೀವಿ ಅಂದ್ರೆ ಜೀವನದಲ್ಲಿ ಅಗತ್ಯವಿರೋ ಮೂರು ಪದವಿ ಮಾಡೋಕೇ ಸಾಕು ಸಾಕಾಗಿ ಹೋಗೋ ನಮಗೆ ಚೆನ್ನೈನ ಪ್ರೊಫೆಸರ್ ವಿಎನ್ ಪಾರ್ಥಿವನ್ ಎಂಬುವವರು ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿದ್ದಾರೆ. ತನ್ನ ಜೀವನದಲ್ಲಿ ಓದು ಅಂದ್ರೆನೆ ನನಗೆ ಅಚ್ಚುಮೆಚ್ಚು ಎಂದಿರುವ ಈ ಪ್ರಾಧ್ಯಾಪಕರು ಈವರೆಗೂ ಅವರು ಪಡೆದಿರೋ ಪದವಿ ಸಂಖ್ಯೆಯನ್ನು ಕೇಳಿದರೆ ನೀವೇ ಬೆಚ್ಚಿ ಬೀಳ್ತೀರ..! ಯಾಕಂದ್ರೆ ಈಯಪ್ಪ ಪಡೆದಿರೋ ಪದವಿಗಳ ಸಂಖ್ಯೆ ಒಂದಲ್ಲಾ ಎರಡಲ್ಲ ಬರೋಬ್ಬರಿ 145 ಶೈಕ್ಷಣಿಕ ಪದವಿಗಳು..! ಶಾಕ್ ಆಯ್ತಾ..? ಇವರಿಗೆ ಎಷ್ಟು ಓದಿನ ಮೇಲೆ ಹುಚ್ಚಿದೆ ಅಂದ್ರೆ ಅವರು ನಿರಂತರವಾಗಿ ಪರೀಕ್ಷೆಗಳಿಗೆ ತಯಾರಿ ನಡುಸ್ತಾ ಇರ್ತಾರಂತೆ.. ಅಷ್ಟೇ ಯಾಕೆ ಹೊಸ ಹೊಸ ಪದವಿ ಹಾಗೂ ಡಿಪ್ಲೋಮಾಗಳಿಗೆ ತಪ್ಪದೇ ಅದಕ್ಕೆ ಅರ್ಜಿ ಹಾಕಿ ಪದವಿ ಮುಗಿಸುತ್ತಾರೆ. ಜೀವನದುದ್ದಕ್ಕೂ ಪಾರ್ಥಿವನ್ ಹೊಸ ಪದವಿ ಶಿಕ್ಷಣವನ್ನು ಹುಡಿಕಿಕೊಂಡು ಅಭ್ಯಾಸ ಮಾಡುತ್ತಾರೆ. ಹೀಗಾಗಿ ಬಹುತೇಕ ಪರಿಕ್ಷಾ ಕೇಂದ್ರಗಳಲ್ಲಿ ಪಾರ್ಥಿವನ್ ಮುಖ ಎಲ್ಲರಿಗೂ ಚಿರ ಪರಿಚಿತರಾಗಿದ್ದಾರೆ. ಇವರು ಈಗ ಪಡೆಯುತ್ತಿರುವ ಪದವಿಯ ಹಾಗೆ ಅವರ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಇರಲಿಲ್ಲ ಎನ್ನುತ್ತಾರೆ ಪಾರ್ಥಿವನ್. ಅಲ್ಲಿನ ವೈಫಲ್ಯವೇ ಈಗಿನ ಮಹಾನ್ ಸಾಧನೆಗೆ ಪ್ರೇರಣಾ ಶಕ್ತಿ ಎಂದು ಹೇಳಿಕೊಂಡಿದ್ದಾರೆ. ನಾನು ಕಾಲೇಜು ಅವಧಿಯಲ್ಲಿದ್ದಾಗ ಆ ಸಂದರ್ಭದಲ್ಲಿ ಪದವಿ ಪಡೆಯೋಕೆ ಬಾರಿ ಹರ ಸಾಹಸ ಪಡೆಯಬೇಕಾಗಿತ್ತು, ಪದವಿ ಮುಗಿ ಕೂಡಲೇ ನನಗೆ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಆದರೂ ನಾನು ಮುಂದೆ ಓದುವ ಅಭ್ಯಾಸವನ್ನು ನಿಲ್ಲಿಸಲಿಲ್ಲ ಎಂದಿರುವ ಅವರು ಕೆಲವು ಬಾರಿ ನಾನು ಒಂದು ಪರೀಕ್ಷೆಗೆ ಓದಿಕೊಂಡು, ಅದೇ ಸಮಯದಲ್ಲಿ ಇನ್ನೊಂದು ಪರೀಕ್ಷೆಯನ್ನು ಬರೆಯುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪಾರ್ಥಿವನ್ ಅವರಿಗೆ ಇಷ್ಟವಾಗದ ವಿಷಯವೂ ಇದೆಯಂತೆ..! ಅವರಿಗೆ ಗಣಿತ ಅಂದ್ರೆ ಆಗೊಲ್ಲವಂತೆ ನೋಡಿ..! ಒಂದು ಕ್ಷಣವನ್ನೂ ವ್ಯರ್ಥ ಮಾಡದ ಪಾರ್ಥಿವನ್ ರ ಈ ಅತಿಯಾದ ಓದಿನಿಂದಲೇ ಅವರ ಸ್ಮರಣಾ ಶಕ್ತಿಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಅವರು ಈ ಹಿಂದೆ ನೋಡಿದ ಜನರ ಮುಖವನ್ನು ಮತ್ತೊಮ್ಮೆ ಕಂಡು ಹಿಡಿಯಲು ಕಷ್ಟ ಆಗುತ್ತಂತೆ. ಕೆಲವೊಮ್ಮೆ ನಿತ್ಯ ಭೇಟಿ ನೀಡುವ ರಸ್ತೆಯನ್ನೇ ಮರೆತು ಬಿಡುತ್ತಾರಂತೆ ಇವರು. ಆದರೆ ಅವರ ಸಾಧನೆ ಮಾತ್ರ ವರ್ಣನೆಗೆ ನಿಲುಕದ್ದು..!

POPULAR  STORIES :

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!

ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!

ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!

ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!

ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...