ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಹೊಸದಾಗಿ 15 ಜಾತಿಗಳನ್ನು ಸೇರಿಸುವ ಹಾಗೂ 13 ಇತರೆ ಜಾತಿಗಳಲ್ಲಿ ತಿದ್ದುಪಡಿ ತರುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಎಲ್ಲರೂ ಸಹಮತ ಸೂಚಿಸಿದ್ದಾರೆ. ಇದರ ಜೊತೆಯಲ್ಲಿಯೇ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ ನಿರಾಶ್ರಿತ ಕಲ್ಯಾಣ ಕಾರ್ಯಕ್ಕೆ 2000 ಕೋಟಿ ರೂ. ಪ್ಯಾಕೇಜ್ ನೀಡುವ ನಿರ್ಣಯಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಹಾಗೂ ಉತ್ತರಖಂಡ ರಾಜ್ಯಗಳಲ್ಲಿನ ಜಾತಿಗಳನ್ನು ಗಮನದಲ್ಲಿಟ್ಟುಕೊಂಡು ಓಬಿಸಿ ಪಟ್ಟಿಯಲ್ಲಿ ಒಟ್ಟು 28 ಬದಲಾವಣೆಗಳನ್ನು ತರುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಿತ್ತು. ಹೊಸದಾಗಿ ಸೇರ್ಪಡೆಯಾಗುವ ಜಾತಿಗಳು ಹಾಗೂ ತಿದ್ದುಪಡಿಯಿಂದ ಒಬಿಸಿ ವರ್ಗದಡಿ ಬರುವ ಜನರಿಗೆ ಮೀಸಲು ಸೌಲಭ್ಯ ದೊರೆಯಲಿದೆ. ಕೇಂದ್ರ ಸರಕಾರಿ ಸೇವೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲು ಸವಲತ್ತು ಲಭಿಸಲಿದೆ.
Like us on Facebook The New India Times
POPULAR STORIES :
ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!
ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!