16 ದಿನಗಳ ಹಿಂದೆ ಮದುವೆ, ಈಗ ವಿವಾಹಿತೆ ಸಾವು!

Date:

ಮದುವೆಯಾದ ಕೇವಲ 16 ದಿನಗಳಲ್ಲೇ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಚೈತನ್ಯ (19) ಮೃತ ನವವಿವಾಹಿತೆ. ಈಕೆ ಗುಂಟೂರಿನ ರೆಪಲ್ಲಿ ವಲಯದ ಎಡುಪಲ್ಲಿ ಗ್ರಾಮದ ನಿವಾಸಿ.

16 ದಿನಗಳ ಹಿಂದಷ್ಟೇ ಗುಂಟೂರು ಗ್ರಾಮೀಣ ವಲಯದ ದಾಸರಿಪಲೇಮ್​ ಗ್ರಾಮದ ಕೋಟಿ ಸಂಬಿರೆಡ್ಡಿ ಎಂಬಾತನೊಂದಿಗೆ ಸಪ್ತಪದಿ ತುಳಿದಿದ್ದಳು. ಸಂಬಿರೆಡ್ಡಿ ಹೈದರಾಬಾದ್​ ಸಾಫ್ಟ್​ವೇರ್​ ಕಂಪನಿ ಒಂದರ ಉದ್ಯೋಗಿ. ಪ್ರಸ್ತುತ ವರ್ಕ್​ ಫ್ರಮ್​ ಹೋಮ್​ ಮಾಡುತ್ತಿದ್ದ.

ಹಬ್ಬದ ಹಿನ್ನೆಲೆಯಲ್ಲಿ 16 ದಿನಗಳ ಕಾಲ ತವರು ಮನೆಯಲ್ಲಿದ್ದ ಚೈತನ್ಯಳನ್ನು ಎರಡು ದಿನಗಳ ಹಿಂದೆ ದಾಸರಿಪಲೇಮ್​ ಗ್ರಾಮದ ಅತ್ತೆಯ ಮನೆಗೆ ಬಿಟ್ಟು ಬಂದಿದ್ದರು. ಒಂದು ದಿನ ಮಗಳ ಜತೆಯಲ್ಲೇ ಉಳಿದಿದ್ದ ತಾಯಿ ಸೋಮವಾರ ಮಧ್ಯಾಹ್ನ ತಮ್ಮ ಮನೆಗೆ ಹಿಂತಿರುಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಟಿವಿ ನೋಡುತ್ತಾ ಕುಳಿತಿದ್ದವಳು ಎದ್ದು ಬಾತ್​ರೂಮ್​ಗೆ ತೆರಳಿದ್ದಾಳೆ. ಸಾಕಷ್ಟು ಸಮಯದವರೆಗೂ ಆಕೆ ವಾಪಸ್​ ಬರದಿದ್ದನ್ನು ನೋಡಿ ಅತ್ತೆ ಮನೆಯವರು ಹೋಗಿ ಬಾತ್​ರೂಮ್​ ಬಾಗಿಲು ತೆರೆದು ನೋಡಿದಾಗ ಆಕೆ ಬಾತ್​ರೂಮ್​ ಕಿಟಕಿಗೆ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿದ್ದನ್ನು ವೈದ್ಯರು ದೃಢಪಡಿಸಿದರು.

ಮಗಳನ್ನು ಕಳೆದುಕೊಂಡು ಕುಟುಂಬದಲ್ಲಿ ದುಃಖ ಮಡುಗಟ್ಟಿದ್ದು, ಚೈತನ್ಯಳ ಗಂಡ ಮತ್ತು ಅತ್ತೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಅದನ್ನು ಸಹಿಸದೇ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆಕೆಯ ಪಾಲಕರು ಆರೋಪ ಮಾಡಿದ್ದಾರೆ. ಈ ಸಂಬಂಧ ದೂರು ಸಹ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...