ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಸಿನಿಮಾಗಳು ಅಂದ್ರೆ ಕೋಟ್ಯಾಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲತ್ತಾರೆ. ಪುನೀತ್ ರಾಜ್ಕುಮಾರ್ ನಟಿಸಿದ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ಬ್ಲಾಕ್ ಬ್ಲಾಸ್ಟರ್ ಸಿನಿಮಾಗಳು. ಅಪ್ಪು ಚಿತ್ರದಿಂದ ಹಿಡಿದು ಇತ್ತೀಚಿಗೆ ತೆರೆಕಂಡ ನಟಸಾರ್ವಬೌಮ ಚಿತ್ರದವರೆಗೂ ಎಲ್ಲಾ ಸಿನಿಮಾಗಳೂ ಕೂಡ ಪವರ್ಸ್ಟಾರ್ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಹೀಗೆ ಅಭಿಮಾನಿಗಳು ಮೆಚ್ಚಿಕೊಂಡ ಒಂದು ಚಿತ್ರ ತೆರೆಕಂಡು 16 ವಂಸತಗಳನ್ನು ಕಳೆದಿದೆ.
ಎಸ್.. ಇಂದಿಗೆ ತೆರೆಕಂಡು 16 ವಸಂತಗಳನ್ನು ಪೂರೈಸಿದ ಸಿನಿಮಾ ಮತ್ಯಾವುದೂ ಅಲ್ಲಾ ಪುನೀತ್ ರಾಜ್ಕುಮಾರ್ ಅಪ್ಪು ಅಭಿನಯದ ನಂತರ ತೆರೆಕಂಡ ಅಭಿ ಚಿತ್ರ. ಹೌದು.. ಅಭಿ ಅಪ್ಪು ಚಿತ್ರದ ಯಶಸ್ಸಿನ ನಂತರ ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ಮೂಡಿಬಂದ 2ನೇ ಬ್ಲಾಕ್ ಬಾಸ್ಟರ್ ಸಿನಿಮಾ. ಇನ್ನೊಂದು ವಿಶೇಷತೆ ಅಂದ್ರೆ ಅಭಿ ಚಿತ್ರದ ಮೂಲಕವೇ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಚಂದನವನಕ್ಕೆ ಪದಾರ್ಪಣೆ ಮಾಡಿದ್ರು. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ರಮ್ಯಾ ಜೋಡಿಯ ಲವ್ ಕೆಮಿಸ್ಟ್ರಿ ಸಖತ್ತಾಗಿಯೇ ವರ್ಕೌಟ್ ಆಗಿತ್ತು.
2003ರಲ್ಲಿ ದಿನೇಶ್ ಬಾಬು ನಿರ್ದೇಶನದಲ್ಲಿ ತೆರೆಕಂಡಿದ್ದ ಚಿತ್ರದಲ್ಲಿ ರಮ್ಯಾ ಮೊದಲ ಬಾರಿಗೆ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡಿ ಮಿಂಚಿದ್ರು. ಅಭಿ ಚಿತ್ರದ ಮೂಲಕ ರಮ್ಯಾಗೆ ಚಂದನವನದ ಅದೃಷ್ಟದ ಬಾಗಿಲು ತೆರೆದಂತಾಗಿತ್ತು. ನಂತರ ಆಕಾಶ್, ಅರಸು ಸೇರಿದಂತೆ ಹಲವು ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು.
ಪ್ರೀತಿಗೆ ಧರ್ಮ, ಜಾತಿ ಯಾವುದು ಇಲ್ಲ. ಒಬ್ಬ ಕಾಲೇಜು ಹುಡುಗ ತನ್ನ ಗೆಳತಿಯನ್ನು ಪ್ರೀತಿಸಿದಾಗ ಧರ್ಮ ಅಡ್ಡ ಬಂದಾಗ ಎಲ್ಲ ಅಡೆ-ತಡೆಗಳನ್ನು ಹೇಗೆ ಎದುರಿಸುತ್ತಾರೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ ಅಭಿ ಚಿತ್ರ ಬಹು ತಾರಾಬಳಗವನ್ನೆ ಒಳಗೊಂಡಿತ್ತು. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು ಯುವ ಮನಗಳಿಗೆ ಹೊಸ ಥರದಲ್ಲಿ ಚಿತ್ರ ಮೂಡಿಬಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು.
ಚಂದನವನದ ಬ್ಲಾಕ್ಬ್ಲಾಸ್ಟರ್ ಮೂವಿ ಅಭಿ ಚಿತ್ರ ಬೆಳ್ಳಿ ಪರದೆ ಅಪ್ಪಳಿಸಿ 16 ವರ್ಷಗಳಾಗಿವೆ. ಮೊದಲ ಮೋಹಕ ನೋಟದಲ್ಲೇ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟು, ಇಂದಿಗೂ ಪಟ್ಟದರಸಿಯಾಗಿ ಹಲವು ಸಿನಿಮಾಗಳಲ್ಲಿ ಮಿಂಚುತ್ತಿರೋ ರಮ್ಯಾ ಕೂಡ ಸಿನಿರಂಗಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 16 ವರ್ಷಗಳು ಕಳೆದಿವೆ.
16 ವಸಂತಗಳನ್ನು ಪೂರೈಸಿದ ಮೋಹಕ ತಾರೆ ರಮ್ಯಾ..!
Date: