ಈ ಗರ್ಭಿಣಿ ಮಹಿಳೆಗೆ ಈಗ ಎಷ್ಟು ತಿಂಗಳು ಗೊತ್ತಾ…?

Date:

ಸಾಮಾನ್ಯವಾಗಿ ಗರ್ಭಿಣಿಯಾದವರು ತಮ್ಮ ಮಗುವಿಗೆ 9 ತಿಂಗಳು ತುಂಬಿದ ನಂತರ ಜನ್ಮ ನೀಡುವುದು ಸಾಮಾನ್ಯ ವಿಷಯ. ಆದ್ರೆ ಇಲ್ಲೊಂದು ಮಹಿಳೆಯ ಸ್ಟೋರಿ ಕೇಳಿದ್ರೆ ನಿಜ್ವಾಗ್ಲೂ ಶಾಕ್ ಆಗೋದಂತೂ ಸತ್ಯ. ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ತಮ್ಮ ಮಕ್ಕಳಿಗೆ ಬಯ್ಯುವಾಗ ನಿನ್ನ ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿದ್ನಲ್ಲೋ ಎಂಬ ಡೈಲಾಗ್ ಹೇಳೋದು ನಿಮ್ಗೆಲ್ಲಾ ಗೊತ್ತೇ ಇದೆ ಅನ್ಕೋತೀನಿ.. ಆದ್ರೆ ಈ ಮಹಿಳೆ ಇನ್ಮುಂದೆ ಡೈಲಾಗ್ ಚೇಂಜ್ ಮಾಡಿ 18 ತಿಂಗಳು ಅಂತ ಹೇಳ್ಬೇಕೇನೋ..?
ಆಶ್ಚರ್ಯವಾಯ್ತಾ..? ಈ ಸ್ಟೋರಿ ಓದಿ.. ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..! ಚೀನಾ ನಿವಾಸಿಯಾದ ವಾಂಗ್ ತಾನು 2015ರಲ್ಲೇ ಗರ್ಭ ಧರಿಸಿದ್ದಾಳೆ. ಗರ್ಭ ಧರಿಸಿದ ಮೊದಲ ತಿಂಗಳಲ್ಲೇ ಆಕೆ ವೈದ್ಯರ ಬಳಿ ತೋರಿಸಿಕೊಂಡಿದ್ದಾಳೆ. ವೈದ್ಯರೂ ನಿಮಗೆ 2015ರ ಕೊನೆಯಲ್ಲಿ ಮಗು ಜನಿಸುತ್ತದೆ ಎಂದು ಭವಿಷ್ಯ ನುಡಿದಿದ್ರೂ ಅದು ಹುಸಿಯಾಗಿದೆ ನೋಡಿ.. ವೈದ್ಯರು ಕೊಟ್ಟ ಡೇಟ್ ಮುಗುದ್ರೂ ಸಹ ವಾಂಗ್‍ಗೆ ಇನ್ನೂ ಹೆರಿಗೆಯಾಗಿಲ್ಲ..! ಇದರಿಂದ ಆತಂಕಗೊಂಡಿರುವ ವಾಂಕ್ ವೈದ್ಯರ ಬಳಿ ತೊರಿಸಿದ್ದಾರೆ.
ಆದ್ರೆ ಮಗುವಿಗೆ 9 ತಿಂಗಳಾದ್ರೂ ಸರಿಯಾದ ಬೆಳವಣಿಗೆಯಾಗಿರಲಿಲ್ಲ ಎನ್ನುತ್ತಾರೆ ವೈದ್ಯರು. ಈ ಸಮಯದಲ್ಲಿ ಹೆರಿಗೆ ಮಾಡೋದ್ರಿಂದ ಅಪಾಯ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದರು. ಇದೀಗ ಮಗು ಬೆಳವಣಿಗೆ ಹೊಂದುತ್ತಿದ್ದು, ಪೂರ್ತಿ ಬೆಳವಣಿಗೆಯಾದಾಗ ಅಂದ್ರೆ 18ನೇ ತಿಂಗಳಲ್ಲಿ ಹೆರಿಗೆ ಮಾಡಿಸುವುದಾಗಿ ವೈದ್ಯರು ಹೇಳಿದ್ದಾರೆ.
ವಾಂಗ್ ಇದೀಗ ಅತೀ ಧೀರ್ಘಾವಧಿ ಕಾಲ ಗರ್ಭ ಧರಿಸಿದ ಮೊದಲ ಮಹಿಳೆ ಎಂಬ ದಾಖಲೆಗೆ ಸೇರಲಿದ್ದಾಳೆ. ಆದರೆ ವಿಶ್ವದ ನಾನಾ ಭಾಗದ ವೈದ್ಯರು ಇದನ್ನು ಒಪ್ಪಲು ಸಿದ್ದರಿಲ್ಲ ಎಂಬುದೇ ಒಂದು ಪ್ರಶ್ನೆಯಾಗಿದೆ. ಗರ್ಭದಲ್ಲಿ ಮಗು ಇರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ವೈದ್ಯರು. ಆದರೆ ವಾಂಗ್ ಬಳಿ ಮೊದಲ ತಿಂಗಳಿಂದ ಈವರೆಗಿನ ದಾಖಲೆಗಳೆಲ್ಲವೂ ಇವೆ..!

PAY-CEN_LongPregnancy_01 (1)

 

POPULAR  STORIES :

ಪತ್ರಕರ್ತನನ್ನು ನೋಡಿದ ಆ ರೋಗಿ ವಿಚಿತ್ರವಾಗಿ ಮಾತಾಡ್ತಾನೆ..! ‘ಅನ್ವೇಷಿ’ ನೋಡಿದ್ರೆ ಎಲ್ಲವೂ ಅರ್ಥವಾಗುತ್ತೆ..!

ಬೆಳ್ಳಿ ತಾರೆಗೆ ಬಿಎಂಡಬ್ಲ್ಯೂ ಕಾರು, ಸಾಕ್ಷಿಗೆ ವಿಮಾನ ಟಿಕೆಟ್ ಗಿಫ್ಟ್…!

ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!

ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!

ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.

ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!

ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...