ಮುಂಬೈನ 18 ತಿಂಗಳ ಮಗುವೊಂದು ತೀರ ಅಪರೂಪದ ಕಾಯಿಲೆಯಿಂದ 22 ಕೆ.ಜಿ ತೂಕ ತೂಗುತ್ತಿದೆ..! ಆ ಪುಟ್ಟ ಮಗುವಿನ ಹೆಸರು ಶ್ರೀಜಿತ್ ಹಿಂಗಾನ್ಯಾರ್. ಈ ಮಗುವನ್ನು ಮುಂಬೈನ ಜಸ್ಲೋವಿಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಈ ವಿಚಿತ್ರ ಕಾಯಿಲೆಗೆ ಭಾರತದಲ್ಲಿ ಚಿಕಿತ್ಸೆ ಇಲ್ವಂತೆ..! ಈಗ ಮಗುವಿನ ರಕ್ತದ ಮಾದರಿಯನ್ನು ಬ್ರಿಟನ್‍ನ ಕೇಂಬ್ರಿಡ್ಜ್‍ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಮಗು ಲೆಫ್ಟಿನ್ ಜೀನ್ ಮ್ಯೂಟೇಲೇಷನ್ ಎಂಬ ಕಾಯಿಲೆಯಿಂದ ಇಷ್ಟು ಚಿಕ್ಕವಯಸ್ಸಲ್ಲಿ ಇಷ್ಟೊಂದು ದೊಡ್ಡ ತೂಕ ತೂಗುತ್ತಿದ್ದಾನೆ. ಹುಟ್ಟುವಾಗ 2.5 ಕೆ.ಜಿ ಇದ್ದ ಶ್ರೀಜಿತ್,10 ತಿಂಗಳಲ್ಲಿ 17 ಕೆ.ಜಿಯಾಗಿದ್ದ..! ಈಗಿನ್ನೂ 18 ತಿಂಗಳು, ಈಗಾಗಲೇ 22 ಕೆ.ಜಿ ಇದ್ದಾನೆ..! ನಮ್ಮ ಭಾರತದಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇಲ್ಲವಾಗಿರುವುದರಿಂದ ಕಷ್ಟವಾಗುತ್ತಿದೆ. ಇಂಗ್ಲೇಂಡ್‍ನಿಂದ ಔಷಧ ತರಿಸಲಾಗುತ್ತಿದೆ. ಮಗುವಿನ ದೇಹ ಸ್ಥಿತಿ ಹೀಗೆ ಮುಂದುವರೆದರೆ ಇನ್ನಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವೈಧ್ಯರು ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಕರ್ನಾಟಕದ ರಿಶಾ ಅಮರಾ ಈ ಸಮಸ್ಯೆಯಿಂದ ಬಳಲುತ್ತಿದ್ದಳು. 9 ತಿಂಗಳಲ್ಲಿ 18 ಕೆಜಿ ಇದ್ದ ಆಕೆಗೆ ಇಂಗ್ಲೇಂಡ್‍ನ ಕೇಂಬ್ರಡ್ಜ್ ವಿವಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಈಗ 16 ಕೆಜಿ ತೂಕವಿದ್ದಾಳೆ. ಪುಟ್ಟಮಕ್ಕಳು ಬೇಗ ಆರಾಮಾಗಲಿ ಎಂದು ನೀವೂ ಹಾರೈಸಿ.
POPULAR STORIES :
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!