2 ವರ್ಷದ ಹಿಂದೆ ಮದುವೆ, ನಂತರ ಮಗು, ಈಗ ಹುಡುಗನ ಸಾವು

0
88

ತಂದೆ-ತಾಯಿ, ಹೆಂಡತಿ-ಮಗುವಿಗೆ ಆಧಾರದಂತಿದ್ದ ಮಗ ಬೆಳ್ಳಬೆಳಗ್ಗೆ ಕೆಲಕ್ಕೆ ಹೋದವನು ಕೆಲವೇ ಗಂಟೆಗಳಲ್ಲಿ ಹೆಣವಾಗಿದ್ದಾನೆ. ಮಗನನ್ನು ಕಳೆದುಕೊಂಡ ತಂದೆ-ತಾಯಿ, ಗಂಡನನ್ನು ಕಳೆದುಕೊಂಡ ಹೆಂಡತಿ, ಏನು ಅರಿಯದ ಪುಟ್ಟ ಕಂದಮ್ಮನನ್ನು ನೋಡಿದರೆ ಎಂಥವರ ಕರುಳು ಕಿತ್ತುಬರುವಂತಿತ್ತು.

 

ಬೆಂಗಳೂರಿನ ಐಟಿ ಉದ್ಯೋಗಿ ರೋಹಿತ್ ಎಂದಿನಂತೆ ಇಂದು ತನ್ನ ಬೈಕ್ ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು. ಜವರಾಯ ರಸ್ತೆ ಬದಿಯಲ್ಲಿಯೇ ಕಾದು ಕುಳಿದಿದ್ದನು ಎನಿಸುತ್ತೆ. ವಾಟರ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ರೋಹಿತ್ ತಲೆ ಮೇಲೆ ವಾಹನ ಹರಿದುಬಿಟ್ಟಿದೆ. ಸ್ಥಳದಲ್ಲೇ ರೋಹಿತ್ ಪ್ರಾಣ ಬಿಟ್ಟಿದ್ದಾರೆ. 

 

HSR ಲೇಔಟ್ ನ 27ನೇ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ವಾಟರ್ ಟ್ಯಾಂಕ್ ಪಕ್ಕದಲ್ಲೇ ರೋಹಿತ್ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಟ್ಯಾಂಕರ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಬೈಕ್ ಗೆ ಟ್ಯಾಂಕರ್ ಟಚ್ ಆಗಿ ಫುಟ್ ಪಾತ್ ಗೆ ಬೈಕ್ ತಾಗಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿ ಬಲಕ್ಕೆ ಬಿದ್ದ ಬೈಕ್ ಸವಾರ ರೋಹಿತ್ ತಲೆ ಮೇಲೆ ಟ್ಯಾಂಕರ್ ಚಕ್ರ ಹರಿದು ಸಾವು ಸಂಭವಿಸಿದೆ. 

ವಾಟರ್ ಟ್ಯಾಂಕ್ ಚಾಲಕನ ವಿರುದ್ಧ ದೂರು ದಾಖಸಿಕೊಂಡು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ಎದುರು ಮೃತ ರೋಹಿತ್ ಅವರ ತಂದೆಯ ಆಕ್ರಂದನ ಮುಗಿಲು ಮುಟ್ಟಿತ್ತು. 

 

ಆ ಮಗುಗೆ ಯಾರನ್ನ ಅಪ್ಪ ಅಂತಾ ತೋರಿಸ್ಲಪ್ಪಾ, ಇನ್ನೂ ಆ ಮಗುಗೆ ಹಾಂ..ಹೂ ಅನ್ನಕ್ಕೂ ಬರಲ್ಲ. ದೇವರೇ ನಿನಗೆ ಕರುಣೆ ಅನ್ನೊದೇ ಇಲ್ವಾ? ನನ್ನನ್ನಾದರೂ ಕರೆದುಕೊಂಡು ಹೋಗಿದ್ರೆ ಆಗಿರೋದಲ್ವಾ? ಮನೆ ಕುಡಿಯನ್ನೇ ಮುರಿದುಕೊಂಡುಬಿಟ್ಯಲ್ಲ. ನಮಗೆ ಈಗ ಯಾರಪ್ಪ ದಿಕ್ಕು, ಮನೆ ಆಧಾರವಗಿದ್ದ ನನ್ನ ಮಗ ಎಂದು ರೋಹಿತ್ ತಂದೆ ಶ್ರೀನಿವಾಸ್ ಕಣ್ಣೀರು ಹಾಕಿದರು.

LEAVE A REPLY

Please enter your comment!
Please enter your name here