2 ವರ್ಷ ಬಳಸಬಹುದಾದ ಕೆರೆ ನೀರನ್ನ ಖಾಲಿ ಮಾಡುತ್ತಿರು ಗ್ರಾಮಸ್ಥರು..! ಇದಕ್ಕೆ ಕಾರಣ ಆ ಒಬ್ಬ ಮಹಿಳೆ..!!
ಕೆಲವೊಮ್ಮೆ ಮೌಡ್ಯಗಳು ಬುದ್ದಿವಂತಿಕೆಯನ್ನ, ನೈಜ್ಯ ಜೀವನದ ಲಕ್ಷಣಗಳನ್ನ ಮರೆಮಾಡಿ ಬಿಡುತ್ತೆ ಎಂಬುದಕ್ಕೆ ನವಲಗುಂದ ತಾಲೂಕಿನ ಮೊರೆಬ ಗ್ರಾಮವೇ ಸಾಕ್ಷಿ.. ಯಾಕಂದ್ರೆ ಈ ಗ್ರಾಮದ ಜನತೆಗೆ, ಜಾನುವಾರುಗಳಿಗೆ ನೀರಿನ ಮೂಲ ಈ ಕೆರೆ.. ಆದರೇ ಇಡೀ ಗ್ರಾಮಸ್ಥರೆ ಈಗ ಸೇರಿ ಕೆರೆಯ ನೀರನ್ನ ಖಾಲಿ ಮಾಡಲು ಮುಂದಾಗಿದ್ದಾರೆ.. 36 ಎಕರೆ ವಿಸ್ತಾರದಲ್ಲಿರುವ ಈ ಕೆರಯ ನೀರು ಕಡಿಮೆ ಎಂದರು 2 ವರ್ಷ ಬಳಸಬಹುದಾಗಿ.. ಹೀಗಿದ್ರು, ಗ್ರಾಮಸ್ಥರೆ ಈ ಕೆರೆ ನೀರನ್ನ ಹೊರ ಹಾಕ್ತಿದ್ದಾರೆ…
ಕಾರಣವೇನು..?
ನವೆಂಬರ್ 29ರಂದು ಶಾಂತವ್ವ ಎಂಬ ಮಹಿಳೆ ಇದೇ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ರು.. ಎಚ್ ಐವಿ ಸೋಂಕಿತ ಮಹಿಳೆಯಾಗಿದ್ದ ಈಕೆ ಈ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೆ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ.. ಆಕೆ ಬಿದ್ದು ಸತ್ತ ನೀರನ್ನ ಕುಡಿದರೆ ನಮಗೆ ಆ ಕಾಯಿಲೆ ಎಲ್ಲಿ ತಗುಲುತ್ತದೋ ಎಂಬ ಆತಂಕದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಜನತೆ.. ಗ್ರಾಮಸ್ಥರೆಲ್ಲ ಸೇರಿ ಚರ್ಚಿಸಿ ಪಂಚಾಯಿತಿಗೆ ವಿಷಯವನ್ನ ಮುಟ್ಟಿಸಿದ್ದಾರೆ.. ಆದರೆ ಪಂಚಾಯತಿಯಲ್ಲಿ ಮೌಲ್ಯವನ್ನು ಬಿಡಿ ಎಂದು ಎಷ್ಟೇ ಹೇಳಿದ್ರು ಪ್ರಯೋಜನವಾಗಲಿಲ್ಲ.. ಹೀಗಾಗೆ ಬೇರೆ ದಾರಿ ಇಲ್ಲದೆ ನೀರನ್ನ ಬರಿದು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ..
ಇಡೀ ತಾಲೂಕಿಗೆ ಅತೀ ದೊಡ್ಡ ಕೆರೆ ಇದಾಗಿದ್ದು, ಸುತ್ತಮುತ್ತಲಿನ ಗ್ರಾಮದ ಜನತೆಯ ದಾಹವನ್ನ ತೀರಿಸುತ್ತಿತ್ತು.. ಆದರೆ ಈ ಘಟನೆ ಆದ ಬಳಿಕ ಗ್ರಾಮಸ್ಥರು ಇಲ್ಲಿನ ನೀರನ್ನ ಬಳಸೋದನ್ನ ನಿಲ್ಲಿಸಿದ್ದು, 2 ಕಿಮೀ ದೂರದಲ್ಲಿರುವ ಮಲಪ್ರಭ ಕೆರೆಯಿಂದ ನೀರನ್ನ ಹೊತ್ತುಕೊಂಡು ಬಂದು ಬಳಸುತ್ತಿದ್ದಾರೆ ಎನ್ನಲಾಗಿದೆ..