ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!

Date:

ಮೊನ್ನೆ ಮೊನ್ನೆ ನಾವು ನಿಮಗೆ ಕೋಟಿ ಸಂಬಳದ ಕಕ್ಕರ್ ಕಥೆಯನ್ನು ಹೇಳಿದ್ವಿ..! ಅಂತರ್ಜಾ ಲ ಲೋಕದ ದೈತ್ಯ ಸರ್ಚ್ ಇಂಜಿನ್ ಗೂಗಲ್ ದೆಹಲಿ ಟೆಕ್ನಾಲಜಿ ಯೂನಿವರ್ಸಿಟಿಯ ವಿದ್ಯಾರ್ಥಿ ಚೇತನ್ ಕಕ್ಕರ್ ಗೆ ಬರೊಬ್ಬರಿ 12578950.00 ರೂ ವಾರ್ಷಿಕ ಸಂಬಳ ಕೊಡಲು ಮುಂದೆ ಬಂದಿರೋದನ್ನು ಓದಿದ್ದೀರಿ..! ಈಗ ಇದೇ ಗೂಗಲ್ ನಿಂದ ೨ ಕೋಟಿ ಸಂಬಳ ಪಡೆಯಲಿರುವ ಇನ್ನೊಬ್ಬ ವಿದ್ಯಾರ್ಥಿಯ ಪರಿಚಯ ಇಲ್ಲಿದೆ.
ಗೂಗಲ್ ನಿಂದ ೨ ಕೋಟಿ ಸಂಬಳ ಪಡೆಯಲಿರೋ ಆ ಯುವಕ ಪುಣೆಯ ಅಭಿಷೇಕ್ ಪಂತ್. ಖರಗ್ ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ವಿದ್ಯಾರ್ಥಿ.
22 ವರ್ಷದ ಅಭಿಷೇಕ್ ಈ ವರ್ಷದ ಆರಂಭದಲ್ಲಿ ಕ್ಯಾಲಿಫೋರ್ನಿಯಾದಲ್ಲಿನ ಗೂಗಲ್ ಆಫೀಸ್ ನಲ್ಲಿ ಮೂರು ತಿಂಗಳ ಇಂಟರ್ನ್ ಶಿಪ್ ಮುಗಿಸಿದ್ದಾರೆ. ಬಾಲ್ಯದಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದ ಇವರು ಹತ್ತನೇ ತರಗತಿ ಸಿಬಿಎಸ್ಸಿ ಯಲ್ಲಿ ನಗರಕ್ಕೆ ಪ್ರಥಮ ಸ್ಥಾನ ಪಡೆದಿದ್ದರು.
ಅಮೇರಿಕಾಲ್ಲಿ ಹುಟ್ಟಿದ ಪಂತ್ 2006ರಲ್ಲಿ ಕುಟುಂಬದೊಡನೆ ಪುಣೆಯಲ್ಲಿ ಬಂದು ನೆಲೆಸಿದವರು. ಈಗ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಮತ್ತೆ ಅಮೇರಿಕಾಕ್ಕೆ ಹೊರಟಿದ್ದಾರೆ..!
ಅಮೇರಿಕಾದಿಂದ ಬಂದು ಪುಣೆಯಲ್ಲಿ ನೆಲೆಸಿದ ಆರಂಭದಲ್ಲಿ ಪಂತ್ರ ಅಪ್ಪ ಅಮ್ಮನಿಗೆ ಮಗನ ಶಿಕ್ಷಣದ ಬಗ್ಗೆ ಚಿಂತೆ ಆಗಿತ್ತು..! ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಮಗ ಭಾರತದ ಶಿಕ್ಷಣ ಪದ್ಧತಿಗೆ ಹೇಗೆ ಹೊಂದಿಕೊಳ್ಳುತ್ತಾನೆ ಎಂಬುದೇ ಅಪ್ಪ ಅಮ್ಮನ ತಲೆನೋವಾಗಿತ್ತು..! 3 ಗಂಟೆಗಳ ಕಾಲ ಕುಳಿತು ಮಗ ಪರೀಕ್ಷೆಯನ್ನು ಹೇಗೆ ಬರೆಯುತ್ತಾನೆನೋ ಅಂತ ತುಂಬಾನೇ ಯೋಚಿಸುತ್ತಿದ್ದರು..! ಪಂತ್ ತನ್ನ ಅಪ್ಪ ಅಮ್ಮನ ಪ್ರಯತ್ನಕ್ಕೆ ಸ್ಪಂದಿಸಿ, ಅವರು ಹೇಳಿದಂತೆ ಓದಿನ ಕಡೆಗೆ ಹೆಚ್ಚು ಹೆಚ್ಚು ಗಮನಹರಿಸಿ ಶೈಕ್ಷಣಿಕವಾಗಿ ಒಳ್ಳೆಯ ಪ್ರದರ್ಶನವನ್ನೇ ನೀಡಿದರು..! ಅವರ ನಿರಂತರ ಓದು, ಸತತ ಪ್ರಯತ್ನ ಓದಿನಲ್ಲಿದ್ದ ಶ್ರದ್ಧೆಯ ಪರಿಣಾಮ ಉತ್ತಮ ಪ್ರತಿಫಲವೇ ಬಂತು..! 10ನೇ ತರಗತಿ ಪರೀಕ್ಷೆಯಲ್ಲಿ ಶೇ97.6 ಅಂಕಗೊಳೊಂದಿಗೆ ಪಾಸ್ ಆದರು..! ದೆಹಲಿ ಪಬ್ಲಿಕ್ ಸ್ಕೂಲ್ನ ಶಿಕ್ಷಕರು ಪಂತ್ನ ತಂದೆ-ತಾಯಿಗಳೂ ಹೆಮ್ಮೆಪಟ್ಟರು..!
ಪುಣೆಯಿಂದ ಖರಗ್ಪುರ್ ಮತ್ತು ಖರಗ್ಪುರ್ನಿಂದ ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ನಲ್ಲಿ ಇಂಟರ್ನ್ ಶಿಪ್ ಮಾಡಿದ್ದು. ಅಲ್ಲಿಂದಲೇ ಕೆಲಸಕ್ಕೂ ಆಫರ್ ಬಂದಿರೋದು ಹೊಸ ಅನುಭವವಾಗುತ್ತಿದೆ.. ತುಂಬಾ ಖುಷಿಯಲ್ಲಿದ್ದೇನೆ ಎಂದು ಪಂತ್ ಲವಲವಿಕೆಯಿಂದ ಹೇಳುತ್ತಾರೆ.
ಪಂತ್, ಮುಂದಿನ ವರ್ಷದ ಸೆಪ್ಟೆಂಬರ್ ನಲ್ಲಿ ಕೆಲಸಕ್ಕೆ ಸೇರಲಿದ್ದಾರೆ..! ಗೂಗಲ್ ಇವರಿಗೆ ಆರಂಭದಲ್ಲೇ ನೀಡಲಿರೋ ವಾರ್ಷಿಕ ಸಂಬಳ 2,00,00,000 ರೂಪಾಯಿಗಳು..!
ಎನಿವೇ..ಗೂಗಲ್ನಿಂದ ಕೋಟಿ ಕೋಟಿ ಸಂಬಳ ಪಡೆಯಲಿರೋ ಅಭಿಷೇಕ್ ಗೆ ಶುಭವಾಗಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...