ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡು ಹಾಡಿ ಇದೀಗ ಬಾಲಿವುಡ್ ಪ್ರವೇಶ ಮಾಡಿ ರಾತ್ರೋರಾತ್ರಿ ಸ್ಟಾರ್ ಆಗಿರುವ ರಾನು ಮೊಂಡಲ್ ಅವರ ವೈಯುಕ್ತಿಕ ಜೀವನದ ಬಗ್ಗೆ ತಿಳಿಯಲು ಎಲ್ಲರೂ ಕುತೂಹಲದಿಂದ ಹುಡುಕುತ್ತಿದ್ದಾರೆ.
ರಾನು ಮೊಂಡಲ್ ಗೆ ಎರಡು ಮದುವೆಯಾಗಿತ್ತು ಎಂಬುದು ತಿಳಿದುಬಂದಿದ್ದು, ಹೌದು ಮೊದಲ ಮದುವೆಯಾದ ನಂತರವೂ ಸಹ ರಾನು ಕ್ಲಬ್ ಗಳಲ್ಲಿ ಹಾಡು ಹಾಡುತ್ತಿದ್ದರಂತೆ. ಈ ಕೆಲಸ ಗಂಡ & ಮನೆಯವರಿಗೂ ಇಷ್ಟವಿರಲಿಲ್ಲ. ಹೀಗಾಗಿ ಗಂಡನಿಂದ ಆಕೆ ದಿನ ಕಳೆದಂತೆ ದೂರವಾದಳು ರಾನು.
ಹೀಗೆ ರಾನು ಪಶ್ಚಿಮ ಬಂಗಾಳ ಮೂಲದ ಬಬ್ಲು ಮೊಂಡಲ್ ನ ಮದುವೆಯಾದಳು. ಎರಡನೇ ಮದುವೆಯಾಗಿ ಉತ್ತಮ ಜೀವನ ನಡೆಸುತ್ತಿದ್ದ ರಾನುವಿನ ಎರಡನೇ ಪತಿ ಬಬ್ಲು ಮೊಂಡಲ್ ಸಾವನ್ನಪ್ಪಿದ. ಇದರಿಂದ ಖಿನ್ನತೆಗೊಳಗಾದ ರಾನು ಭಿಕ್ಷೆ ಬೇಡಲು ಆರಂಭಿಸಿ ಯಾರ ಸಹಾಯವೂ ಇಲ್ಲದೇ ಬೀದಿ ಬೀದಿ ತಿರುಗಲು ಆರಂಭಿಸಿದಳು ಎಂದು ತಿಳಿದುಬಂದಿದೆ.