2021 ನಲ್ಲಿ ಯಾರು ಯಾವ ಮಂತ್ರ ಜಪಿಸಬೇಕು?

Date:

2020 ವರ್ಷವನ್ನು ಕೆಲವರು ಸಂತೋಷದಿಂದ ಕಳೆದರೆ ಇನ್ನು ಕೆಲವರು ದುಃಖದಲ್ಲಿ, ಸಮಸ್ಯೆಗಳ ಸುಳಿಯಲ್ಲಿ ಕಳೆದಿದ್ದಾರೆ. ಇನ್ನೂ ಕೆಲವರು ಕೊರೊನಾ ಮಹಾಮಾರಿಯ ಭಯದಲ್ಲೇ ಕಳೆದಿದ್ದಾರೆ. ನಾವೀಗ 2021 ರ ನೂತನ ವರ್ಷದಲ್ಲಿದ್ದೇವೆ. ಸಮಸ್ಯೆಗಳೆಲ್ಲವೂ ದೂರಾಗುವುದು, ದುಃಖಗಳೆಲ್ಲವೂ ದೂರಾಗುವುದು ಎನ್ನುವ ಹೊಸ ಆಶಾಕಿರಣವನ್ನುಟ್ಟುಕೊಂಡು 2021ನ್ನು ಸ್ವಾಗತಿಸಿದ್ದೇವೆ. ಎಷ್ಟೇ ಹೊಸ ವರ್ಷ ಬಂದರೂ ಸಮಸ್ಯೆಗಳು ಮನುಷ್ಯನನ್ನು ಬಿಡಲಾರದು. 2021 ರಲ್ಲಿ ಅಂದರೆ ಈ ವರ್ಷ ಎದುರಾಗುವ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಲು ರಾಶಿಗನುಗುಣವಾಗಿ ಈ ಮಂತ್ರವನ್ನು ಪಠಿಸಬಹುದು. ರಾಶಿಗನುಗುಣವಾಗಿ ಮಂತ್ರವನ್ನು ಪಠಿಸುವುದರೊಂದಿಗೆ ಈ ಪರಿಹಾರವನ್ನು ತೆಗೆದುಕೊಳ್ಳುವುದರಿಂದ ವರ್ಷದುದ್ದಕ್ಕೂ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಸಾಧಿಸುತ್ತೀರಿ. 2021 ರಲ್ಲಿ ರಾಶಿಗನುಗುಣವಾಗಿ ಯಾವ ಮಂತ್ರವನ್ನು ಪಠಿಸಬೇಕು..? ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಬೇಕು..? ತಪ್ಪದೇ ತಿಳಿದುಕೊಳ್ಳಿ..

ಮೇಷ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮೇಷ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಸೋಮವಾರ, ಶುದ್ಧ ಜೇನುತುಪ್ಪವನ್ನು ಮಣ್ಣಿನ ಪಾತ್ರೆಗಳಲ್ಲಿ ತುಂಬಿಸಿ ಟೆರೇಸ್ ಅಥವಾ ಬಾಲ್ಕನಿಯಲ್ಲಿ ಇರಿಸಿ. ಮಂಗಳವಾರ ಅದನ್ನು ಯಾಋಇಗೂ ತಿಳಿಯದಂತೆ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಹಾಕಿ ಬನ್ನಿ. ನಾಯಿಗಳಿಗೆ 43 ದಿನಗಳವರೆಗೆ ಸಿಹಿ ತಿಂಡಿಯನ್ನು ಅಥವಾ ಬಿಟ್ಕೇಟ್‌ನ್ನು ನೀಡಿ.

ಯಶಸ್ಸಿನ ಮಂತ್ರ – ಓಂ ಹ್ರೈಂ ಜೂಂ ಸಃ

ಶುಭ ಬಣ್ಣ – ಕೆಂಪು

ಶುಭ ಗ್ರಹಗಳು – ಸೂರ್ಯ, ಬೃಹಸ್ಪತಿ

ಶುಭ ಸಂಖ್ಯೆ – 9

ಶುಭ ದಿಕ್ಕು – ದಕ್ಷಿಣ

 

ವೃಷಭ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಷಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಷಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಕರಗಿದ ಬೆಣ್ಣೆ, ಮೊಸರು, ಪಾಯಸ, ಸುಗಂಧ ದ್ರವ್ಯ, ಬಟ್ಟೆ, ಬೆಳ್ಳಿ, ಅಕ್ಕಿ ಮುಂತಾದ ವಸ್ತುಗಳನ್ನು ಶುಕ್ರವಾರದಂದು ದಾನ ಮಾಡಬೇಕು.

ಯಶಸ್ಸಿಗೆ ಮಂತ್ರ – ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ ಊರ್ವರೂಕಮೀವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌.

ಗ್ರಹ ಮಂತ್ರ – ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ|

ಶುಭ ಬಣ್ಣ – ಬಿಳಿ, ಹಸಿರು

ಶುಭ ಸಂಖ್ಯೆ – 5,6

ಶುಭ ಗ್ರಹಗಳು – ಶುಕ್ರ, ಬುಧ

ಶುಭ ದಿಕ್ಕು – ಪಶ್ಚಿಮ

ಮಿಥುನ ರಾಶಿ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮಿಥುನ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ: ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ಧ್ವಜವನ್ನು ಸ್ಥಾಪಿಸಿ.

ಯಶಸ್ಸಿಗೆ ಮಂತ್ರ – ಓಂ ಏಂ ಶ್ರೀ ಕ್ಲೀಂ ಪ್ರಾಣ ವಲ್ಲಭಾಯ ಸೌಃ ಸೌಭಾಗ್ಯದಾಯ ಶ್ರೀ ಕೃಷ್ಣಾಯ ಸ್ವಾಹಾ|

 

ಕಟಕ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕಟಕ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಹುಣ್ಣಿಮೆಯ ದಿನದಂದು ಪಾಯಸವನ್ನು ದಾನ ಮಾಡಬೇಕು. ಇದರಿಂದ ಲಕ್ಷ್ಮಿ ದೇವಿಯು ಸಂತಸಗೊಳ್ಳುವಳು.

ಯಶಸ್ಸಿನ ಮಂತ್ರ – ಓಂ ಹಸ್ತುಪಿಶಾಚಿಲಿಖೇ ಸ್ವಾಹಾ|

ಸಿಂಹ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಸಿಂಹ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಬೆಲ್ಲ, ಮಸೂರ, ಬಾದಾಮಿ, ಜೇನುತುಪ್ಪ, ತೆಂಗಿನಕಾಯಿ ಮತ್ತು ಸಾಸಿವೆ ಎಣ್ಣೆಯನ್ನು ಭಾನುವಾರ ದಾನ ಮಾಡಿ. ಇದರಿಂದ ಸೂರ್ಯ ದೇವನಿಗೆ ಸಂತೋಷವಾಗುತ್ತದೆ.

ಯಶಸ್ಸಿನ ಮಂತ್ರ – ಓಂ ಹ್ರೀಂ ಶ್ರೀಂ ಸೌಂಃ

ಕನ್ಯಾ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕನ್ಯಾ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ: ಕಾಗೆಗಳಿಗೆ ಸಿಹಿ ಅನ್ನ ಮತ್ತು ಹಸುವಿಗೆ ಹಸಿರು ಮೇವನ್ನು ನೀಡಿ. ಇದು ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರಾಗಿಸುತ್ತದೆ.

ಯಶಸ್ಸಿನ ಮಂತ್ರ – ಓಂ ಶ್ರೀಂ ಏಂ ಓಂ|

 

ತುಲಾ

 

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ತುಲಾ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಕೊಳಕು ಅಥವಾ ಹರಿದ ಹಳೆಯ ಬಟ್ಟೆಗಳನ್ನು ಧರಿಸಬೇಡಿ. ಸುಗಂಧ ದ್ರವ್ಯ ಅಥವಾ ಪರ್ಪ್ಯುಮ್‌ ಬಳಸಿ. ಇದರಿಂದ ಲಕ್ಷ್ಮಿ ದೇವಿ ಆಶೀರ್ವಾದ ನೀಡುವಳು.

ಯಶಸ್ಸಿನ ಮಂತ್ರ – ಓಂ ಏಂ ಹ್ರೀಂ ಶಿವ ಗೌರೀಮಯ, ಹ್ರೀಂ ಏಂ ಓಂಃ. ಇದು ಲಕ್ಷ್ಮಿ ಮಂತ್ರ.

ವೃಶ್ಚಿಕ

 

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ವೃಶ್ಚಿಕ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ನಿರ್ಗತಿಕರಿಗೆ ಬಡವರಿಗೆ ಸಿಹಿ ಆಹಾರವನ್ನು ನೀಡಿ ಆದರೆ ನೀವು ಆ ಆಹಾರವನ್ನು ಸೇವಿಸಬೇಡಿ. ಜೇನುತುಪ್ಪ ಮತ್ತು ಸಿಂಧೂರವನ್ನು ಮಣ್ಣಿನ ಪಾತ್ರೆಗಳಲ್ಲಿ ಹಾಕಿ ಮನೆಯಲ್ಲಿ ಇಟ್ಟುಕೊಳ್ಳಿ. ಕೆಂಪು ಗುಲಾಬಿಯನ್ನು ನದಿಯಲ್ಲಿ ಹರಿಬಿಡಿ.

ಯಶಸ್ಸಿನ ಮಂತ್ರ – ಓಂ ನಾರಾಯಣಾಯ ಸುರಸಿಂಹಾಯ ನಮಃ

ಧನು

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಧನು ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ದೇವಾಲಯದಲ್ಲಿ ಅರಳಿ ಗಿಡವನ್ನು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರು ಹಾಕಿ. ಅಲ್ಲದೆ, ಹಣೆಗೆ, ಹೊಕ್ಕುಳಿಗೆ ಮತ್ತು ನಾಲಿಗೆಗೆ ಕೇಸರಿ ಮಿಶ್ರ ನೀರನ್ನು ಹಚ್ಚಿ.

 

ಯಶಸ್ಸಿಗೆ ಮಂತ್ರ – ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ

 

ಮಕರ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮಕರ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಎರಡು ಬಾಳೆಗಿಡವನ್ನು ನೆಟ್ಟು ಅದನ್ನು ಪೋಷಣೆ ಮಾಡಿ. ಮತ್ತು ಯಾವಾಗಲೂ ಆ ಬಾಳೆಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿಡಿ. ಪ್ರತಿನಿತ್ಯ ಇದು ಸಾಧ್ಯವಾಗದಿದ್ದರೆ ಗುರುವಾರದಂದು ತಪ್ಪದೇ ಮಾಡಬೇಕು. ಇದರಿಂದ ವಿಷ್ಣು ನಿಮ್ಮನ್ನು ಆಶೀರ್ವದಿಸುತ್ತಾನೆ.

ಯಶಸ್ಸಿನ ಮಂತ್ರ – ಓಂ ಶ್ರೀಂ ಹ್ರೀಂ ಶ್ರೀಂ ನಮಃ |

ಕುಂಭ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಕುಂಭ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಯಾವಾಗಲೂ ಬೆಳ್ಳಿಯ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಸಾಸಿವೆ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಹಸುಗಳಿಗೆ ನೀಡಿ.

ಗ್ರಹ ಮಂತ್ರ – ಓಂ ಶ್ರೀಂ ಪ್ರಾಂ ಪ್ರೀಂ ಪ್ರೌಂ ಸಃ ಶಂ ಶನೇಶ್ಚರಾಯ ನಮಃ

 

ಮೀನ

2021 ರ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸನ್ನು ಪಡೆಯಲು ಮೀನ ರಾಶಿಯ ಜನರು ಈ ಮಂತ್ರವನ್ನು ಮತ್ತು ಈ ಪರಿಹಾರವನ್ನು ಮಾಡಬೇಕು.

ಪರಿಹಾರ – ಹಣೆಗೆ, ಹೊಕ್ಕುಳಿಗೆ ಮತ್ತು ನಾಲಿಗೆಗೆ ಕೇಸರಿ ಮಿಶ್ರ ನೀರನ್ನು ಹಚ್ಚಿ ಮತ್ತು ಮಸೂರ ಬೇಳೆಯನ್ನು ದಾನ ಮಾಡಿ.

ಯಶಸ್ಸಿನ ಮಂತ್ರ- ಓಂ ಹ್ರೀಂ ಕ್ಲೀಂ ಶ್ರೀಂ ಶ್ರೀಯೇ ನಮಃ

 

 

 

 

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...