2021 ರಲ್ಲಿ ಏನಾಗುತ್ತೆ? ನಾಸ್ಟ್ರಾಡಾಮಸ್‌ ಭವಿಷ್ಯವಾಣಿ..!

Date:

ಫ್ರೆಂಚ್ ಭೌತಜ್ಞಾನಿ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಾಸ್ಟ್ರಾಡಾಮಸ್ ಬರೆದಿದ್ದ ಲೆಸ್ ಪ್ರೊಫೆಟಿಸ್‌ನಲ್ಲಿ ಜಗತ್ತಿನಲ್ಲಿ ಮುಂದೆ ಏನಾಗಲಿದೆ, ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಏನೇನು ಸಂಭವಿಸುತ್ತದೆ ಎಂದು ಮೊದಲೇ ಅಂದಾಜಿಸಿದ್ದ. ಆತನ ಅಂದಾಜಿನಂತೆ ಮತ್ತು ಪುಸ್ತಕದಲ್ಲಿ ಹೇಳಿದ್ದಂತೆ ಈವರೆಗೆ ಹಲವು ಅಚ್ಚರಿಗಳು ಸಂಭವಿಸಿದ್ದು, ಜನರನ್ನು ಬೆರಗುಗೊಳಿಸಿವೆ. ನಾಸ್ಟ್ರಾಡಾಮಸ್ ಮರಣದ ಬಳಿಕ ಆತನ ಪುಸ್ತಕ ಪ್ರಸಿದ್ಧಿ ಪಡೆಯಿತು. ಹೀಗಿರುವಾಗ ನಾಸ್ಟ್ರಾಡಾಮಸ್ ಅಂದಾಜಿಸಿದಂತೆ 2020ರಲ್ಲಿ ಏನೇನು ನಡೆಯಲಿದೆ?. ನಿನ್ನೆಗಷ್ಟೆ ದೊಡ್ಡ ಸಂಕಟಮಯ ವರ್ಷವೊಂದು ಕಳೆದು ಹೋದ ನಿರಾಳತೆ ನಮ್ಮಲ್ಲಿತ್ತು. ಆದರೆ, ನಾಸ್ಟ್ರಾಡಾಮಸ್ ಪ್ರಕಾರ 2021ರಲ್ಲಿ ಭಾರೀ ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಕೂಡ ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯ ಬಹುತೇಕ ನಿಜವಾಗಿವೆಯಂತೆ. ಲೆಸ್ ಪ್ರೊಫೇಟಿಸ್ ಎಂಬ ಪುಸ್ತಕವನ್ನು ಬರೆದಿರುವ ನಾಸ್ಟ್ರಾಡಾಮಸ್, ಅದರಲ್ಲಿ ಈ ಅಂದಾಜುಗಳನ್ನು ಮಾಡಿದ್ದಾನಂತೆ. ಐದು ಶತಮಾನಗಳ ಹಿಂದೆ ಈ ಪುಸ್ತಕ ಬರೆಯಲಾಗಿದೆಯಾದರೂ ಸಹ ಇಂದಿಗೂ ಇದು ಪ್ರಸ್ತುತವಾಗಿದೆ.
ಈತನ ಅನೇಕ ಭವಿಷ್ಯ ನಿಜವಾಗಿರುವ ಕಾರಣ ಇದೀಗ ಆತನ ಪುಸ್ತಕಗಳನ್ನು ಓದುವ ಮಂದಿ 2021 ರ ಬಗ್ಗೆಯೂ ಈತ ಹೇಳಿರುವುದು ನಿಜವಾಗುವುದೆಂಬ ಭಯದಲ್ಲಿ ಇದ್ದಾರೆ. ಈ ವರ್ಷ ಕೆಲ ಯುವಕರು ಅರ್ಧ ಸತ್ತಿದ್ದು, ಅವುಗಳ ಪ್ರೇತಾತ್ಮಗಳೆಲ್ಲಾ ನಮ್ಮ ಸುತ್ತ ಗಿರಕಿ ಹಾಕುತ್ತಿರುತ್ತವೆ ಎಂದಿದ್ದಾರೆ.
ಇದೇ ವೇಳೆ ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದು, ಅದು ನಮ್ಮನ್ನೆಲ್ಲಾ ನಾಶ ಮಾಡಬಲ್ಲದು. ಜಲವಾಯು ಪರಿವರ್ತನೆಯ ಈ ಹಾನಿ ಯುದ್ಧ ಹಾಗೂ ಸಮರದ ಸ್ಥಿತಿಗಳನ್ನು ಸೃಷ್ಟಿಸಲಿದೆ. ಸಂಪನ್ಮೂಲಗಳಿಗಾಗಿ ವಿಶ್ವದಲ್ಲಿ ಹಾಹಾಕಾರ ಸೃಷ್ಟಿಯಾಗಲಿದೆ ಹಾಗೂ ಜನರು ಪಲಾಯನಗೈಯಲ್ಲಿದ್ದಾರೆ ಎಂದು ನಾಸ್ಟ್ರಾಡಾಮಸ್ ಈ ಪುಸ್ತಕದಲ್ಲಿ ಬರೆದಿದ್ದಾರೆ.
ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಉಲ್ಕೆಯೊಂದು ಬಂದು ಬೀಳಲಿದೆ ಎಂದು ನಾಸ್ಟ್ರಾಡಾಮಸ್ ಹೇಳಿರುವ ಮಾತುಗಳನ್ನು ಅಮೆರಿಕದ ನಾಸಾದ ಮುನ್ಸೂಚನೆ ಸಹ ಸ್ಪಷ್ಟಪಡಿಸುತ್ತಿದೆ. ಇವೆಲ್ಲಾ ಸಾಕಾಗದೇ ಇದ್ದಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನವೊಂದು ಸಂಭವಿಸುವ ಸಾಧ್ಯತೆ ಬಗೆಗೂ ಪುಸ್ತಕದಲ್ಲಿ ಉಲ್ಲೇಖವಿದೆ.
ಇದೇ ವೇಳೆ ಸಾಂಕ್ರಮಿಕಗಳು, ಬರ ಹಾಗೂ ಭೂಕಂಪನಗಳಂಥ ಪ್ರಾಕೃತಿಕ ವಿಕೋಪದಿಂದ ಜನರ ತತ್ತರಿಸುವುದರೊಂದಿಗೆ ಈ ವರ್ಷಗಳಲ್ಲಿ ಕೊರೋನಾಗಿಂತಲೂ ಇನ್ನೂ ಭಯಂಕರವಾದ ವೈರಸ್‌ಗಳು ನಮಗೆ ಕಾಟ ಕೊಡಲಿವೆ ಎನ್ನುತ್ತದೆ ಈ ಬುಕ್.
ಸುಮಾರು 465 ವರ್ಷಗಳ ಹಿಂದೆ ಮೈಕಲ್ ದಿ ನಾಸ್ಟ್ರಾಡಾಮಸ್  ಪ್ರಪಂಚದ ಬಗ್ಗೆ ಹೇಳಿರುವ ಮುನ್ಸೂಚನೆಗಳು ಇಲ್ಲಿಯವರೆಗೆ ಜನರನ್ನು ಅಚ್ಚರಿಗೊಳಿಸಿವೆ. ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ (Prophecies of Nostradamus) ಎಂಬ ತನ್ನ ಪುಸ್ತಕದಲ್ಲಿ, ನಾಸ್ಟ್ರಾಡಾಮಸ್ ಒಟ್ಟು 6338 ಭವಿಷ್ಯವಾಣಿಗಳನ್ನುಉಲ್ಲೇಖಿಸಿದ್ದಾನೆ. ಅದರಲ್ಲಿ ಇದುವರೆಗೆ ಶೇ. 70 ರಷ್ಟು  ನಿಜವೆಂದು ಸಾಬೀತಾಗಿವೆ.

ಸಂಜನಾ ಭಾವುಕ ಸಂದೇಶ

 

ಡ್ರಗ್ಸ್ ವಿಚಾರದಡಿ ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ನಟಿ ಸಂಜನಾ ಗಲ್ರಾನಿ ಅವರು ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ್ದಾರೆ. ಅನೇಕ ದಿನಗಳ ನಂತರದಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.
‘ನನಗೆ ಮೆಸೇಜ್ ಕಳಿಸಿರುವ ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದಗಳು. ನಾನು ಪ್ರತಿಯೊಂದು ಮೆಸೇಜ್ ಓದಿರುವೆ. ನಿಮ್ಮ ಅಮೂಲ್ಯವಾದ ಕಾಳಜಿ ನೋಡಿ ಪುಣ್ಯ ಮಾಡಿದ್ದೇನೆ ಅನಿಸಿತು. 1 ಮಿಲಿಯನ್ ಫಾಲೋವರ್ಸ್‌ಗೆ ಧನ್ಯವಾದ. ಆರೋಗ್ಯ ಸುಧಾರಿಸುತ್ತಿದ್ದಂತೆ ಸೋಶಿಯಲ್ ಮೀಡಿಯಾಗೆ ಮರಳುತ್ತೇನೆ. ನಿಮ್ಮ ಪ್ರೀತಿಗೆ, ವಿಶೇಷವಾಗಿ ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ಸಂಜನಾ ಗಲ್ರಾನಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
ಈಗ ಸಂಜನಾ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಸಹೋದರಿ ನಿಕ್ಕಿ ಗಲ್ರಾನಿ ಹುಟ್ಟುಹಬ್ಬದ ಪ್ರಯುಕ್ತ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಈ ಮೂಲಕ ಅವರು ಸೋಶಿಯಲ್ ಮೀಡಿಯಾಕ್ಕೆ ಕಂಬ್ಯಾಕ್ ಮಾಡಿದ್ದಾರೆ. ನಿಕ್ಕಿ ಗಲ್ರಾನಿ ಕೂಡ ಖ್ಯಾತ ನಟಿ, ಈಗ ಅವರು ತೆಲುಗು, ತಮಿಳು ಭಾಷೆಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಸೆಪ್ಟೆಂಬರ್ 9ರಂದು ವಶಕ್ಕೆ ಪಡೆದಿದ್ದರು. ತದನಂತರದಲ್ಲಿ ಅವರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಮೂರು ತಿಂಗಳ ಜೈಲುವಾಸದ ನಂತರದಲ್ಲಿ ಸಂಜನಾಗೆ ಕರ್ನಾಟಕ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಆದರೆ ಆರಂಭದಲ್ಲಿ ಎರಡು ಬಾರಿ ಅವರಿಗೆ ಜಾಮೀನು ತಿರಸ್ಕರಿಸಲಾಗಿತ್ತು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...