ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವುಕಂಡಿದ್ದ ಎಲ್‌ಡಿಎಫ್‌ನ ಆರ್ಯ ರಾಜೇಂದ್ರನ್ ಅವರು ತಿರುವುನಂತಪುರಂ ಕಾರ್ಪೋರೇಷನ್‌ನ ಮೇಯರ್ ಆಗುವ ಮೂಲಕ ಭಾರತದ ಅತೀ ಕಿರಿಯ ಮೇಯರ್ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.
21 ವರ್ಷ ಪ್ರಾಯದ ಆರ್ಯ ರಾಜೇಂದ್ರನ್ ಅವರು ಮುದುವನ್ಮುಗಲ್ ಕ್ಷೇತ್ರದ ವಾರ್ಡ್ ಕೌನ್ಸಿಲರ್ ಆಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಇದೀಗ ತಮ್ಮ ಮೊದಲ ಗೆಲುವಿನಲ್ಲೇ ಮೇಯರ್ ಆಗುವ ಅವಕಾಶ ಆರ್ಯ ಅವರಿಗೆ ಲಭಿಸಿದ್ದು, ಆರ್ಯ ರಾಜೇಂದ್ರನ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡುವುದಾಗಿ ಸಿಪಿಎಂ ಜಿಲ್ಲಾ ಕಾರ್ಯಾಲಯ ತಿಳಿಸಿದೆ.
ಚುನಾವಣೆ ಸಂದರ್ಭದಲ್ಲಿ ಜಮೀಲಾ ಶ್ರೀಧರ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಸೂಚಿಸಲಾಗಿತ್ತು. ಆದರೆ ಇದೀಗ ಮೇಯರ್ ಪಟ್ಟ 21 ವರ್ಷದ ಆರ್ಯ ರಾಜೇಂದ್ರನ್ ಅವರಿಗೆ ಒಲಿದಿದೆ. ವಿಶೇಷ ಅಂದ್ರೆ ಆರ್ಯ ರಾಜೇಂದ್ರನ್ ಅವರನ್ನು ಮೇಯರ್ ಆಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಆ ಮೂಲಕ ದೇಶದ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಆರ್ಯ ಪಾತ್ರರಾಗಿದ್ದಾರೆ.
ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಆರ್ಯ ರಾಜೇಂದ್ರನ್ ಎಸ್‌ಎಫ್‌ಐ ರಾಜ್ಯ ಸಮಿತಿಯ ಸದಸ್ಯರಾಗಿದ್ದಾರೆ. ಅಲ್ಲದೇ ಬಾಲಜನಸಂಗಂ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ.
ಅಂಚೆಯಲ್ಲಿ 2443 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಡಿಯನ್ ಪೋಸ್ಟ್ ಕರ್ನಾಟಕ ಅಂಚೆ ವೃತ್ತದಲ್ಲಿನ ಅಗತ್ಯ 2443 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್, ಡಾಕ್ ಸೇವಕ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಇನ್ನಷ್ಟು ವಿವರಗಳನ್ನು ತಿಳಿದು ಆನ್‌ಲೈನ್ ಅರ್ಜಿ ಸಲ್ಲಿಸಿ.
ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ ಹುದ್ದೆರೂ12,000 ದಿಂದ 14,000 ವರೆಗೆ.ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆರೂ10,000 ದಿಂದ 12,000 ವರೆಗೆ.ಡಾಕ್ ಸೇವಕ್ ಹುದ್ದೆರೂ10,000 ದಿಂದ 12,000 ವರೆಗೆ.
ದಿನಾಂಕ 21-12-2020 ಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ಮೀರಿರಬಾರದು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
– ಅರ್ಜಿ ಸಲ್ಲಿಸಲು ಅಭ್ಯರ್ಥಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪಡೆದಿರಬೇಕು. ಹಾಗೂ ಕರ್ನಾಟಕ ಅಧಿಕೃತ ಭಾಷೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
– ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳು ರೂ.100 ಪಾವತಿಸಬೇಕು.
– ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಶುಲ್ಕ ವಿನಾಯಿತಿ ನೀಡಲಾಗಿದೆ.
ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಿಯಮಾನುಸಾರ ಸ್ವಯಂಚಾಲಿತ ಮೆರಿಟ್ ಪಟ್ಟಿ ತಯಾರು ಮಾಡುವ ಮೂಲಕ ನೇಮಕಾತಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ನೇಮಕ ಮಾಡಲಾಗುತ್ತದೆ.
ಹುದ್ದೆಯ ಹೆಸರುಪೋಸ್ಟ್ ಮಾಸ್ಟರ್ವಿವರಭಾರತೀಯ ಅಂಚೆ ಅಧಿಸೂಚನೆಪ್ರಕಟಣೆ ದಿನಾಂಕ2020-12-21ಕೊನೆ ದಿನಾಂಕ2021-01-20ಉದ್ಯೋಗ ವಿಧFull Timeಉದ್ಯೋಗ ಕ್ಷೇತ್ರಸರ್ಕಾರಿ ಉದ್ಯೋಗವೇತನ ವಿವರINR 10000 to 14000 /Month
ಕೌಶಲ–ವಿದ್ಯಾರ್ಹತೆಎಸ್‌ಎಸ್‌ಎಲ್‌ಸಿಕಾರ್ಯಾನುಭವ0 year
ವಿಳಾಸಕರ್ನಾಟಕದಾದ್ಯಂತ ಅಂಚೆ ಶಾಖೆಗಳುಸ್ಥಳಕರ್ನಾಟಕಪ್ರದೇಶಕರ್ನಾಟಕಅಂಚೆ ಸಂಖ್ಯೆ560001ದೇಶIND