ಇರಾನ್ : ಇರಾನ್ನ ಪ್ರಮುಖ ಕುದ್ಸ್ ಮಿಲಿಟರಿ ಪಡೆಯ ಮುಖ್ಯಸ್ಥ ಮತ್ತು ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಕಸ್ಸೆಮ್ ಸೊಲೈಮಾನಿಯ ಹತ್ಯೆಯ ಬಳಿಕ ಇರಾನ್ ಮತ್ತಷ್ಟು ವ್ಯಾಘ್ರಗೊಂಡಂತಿದೆ. ಇರಾನ್ ನೆಲದಿಂದ ಎಲ್ಲಾ ಅಮೇರಿಕಾ ಸೈನಿಕರನ್ನು ಹೊರಹಾಕುವಂತೆ ಹಾಗೂ 2015 ರ ಪರಮಾಣು ಒಪ್ಪಂದದ ಯಾವುದೇ ನೀತಿ ನಿಯಮವನ್ನು ಪಾಲಿಸುವುದಿಲ್ಲ ಎಂದು ಇರಾನ್ ಸಂಸತ್ತು ಪ್ರಕಟಣೆ ಹೊರಡಿಸಿದೆ.ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅಲ್ಲಿಮ ದೂರದರ್ಶನವೊಂದಕ್ಕೆ ಹೇಳಿಕೆ ನೀಡಿ, ಪರಮಾಣು ಬಾಂಬ್ ಉತ್ಪಾದನೆ ಮತ್ತು ಸಂಶೋಧನೆ ಮೇಲೆ ತಮ್ಮ ರಾಷ್ಟ್ರ ಯಾವುದೇ ಮಿತಿಗಳನ್ನು ಹೇರುವುದಿಲ್ಲ ಎಂದು ಘೋಷಿಸಿದ್ದಾರೆ. ಇರಾನ್ ಅಧ್ಯಕ್ಷರ ಈ ಹೇಳಿಕೆ ಇದೀಗ ಕೊಲ್ಲಿ ರಾಷ್ಟ್ರಗಳಲ್ಲಿ ಆತಂಕವನ್ನು ಉಂಟು ಮಾಡಿದೆ.ಈ ಎಲ್ಲಾ ಬೆಳವಣಿಗೆಗಳು ಸಂಭವಿಸಿದಲ್ಲಿ ಇರಾನ್ ಪರಮಾಣು ಬಾಂಬ್ ನಿರ್ಮಿಸಲು ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪನ್ನು ಇರಾನ್ನಲ್ಲಿ ಮರುಸ್ಥಾಪಿಸುವ ಸಂಭವವಿದೆ ಎಂದು ಹೇಳಲಾಗುತ್ತಿದ್ದು, ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯ ದೇಶಗಳಿಗೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಊಹಿಸಲಾಗಿದ್ದು, 3ನೇ ಮಹಾಯುದ್ಧ ನಡೆಯುತ್ತಾ ಎಂಬ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
3ನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ ಇರಾನ್?
Date: