3 ಕೋಟಿಗೆ ಸೇಲಾಯ್ತು ಮೂನ್​ ಶೂ..!

Date:

ವಿಶ್ವದಲ್ಲಿ ಬ್ರಾಂಡೆಡ್ ವಸ್ತುಗಳಿಗೆ ಯಾವತ್ತೂ ಕೂಡ ಬೇಡಿಕೆ ಕಮ್ಮಿಯಾಗಲ್ಲ. ಅದರಲ್ಲಿ ಸ್ಪೋರ್ಟ್ಸ್​ ಶೂ ಕಂಪನಿಗಳ ಸಾಲಲ್ಲಿ ಮುಂಚೂಣಿಯಲ್ಲಿ ನಿಲ್ಲೋ ಶೂಗಳಿಗೆ ಭಾರಿ ಬೇಡಿಕೆ ಇದೆ.ನೈಕಿ ಕಂಪನಿಯ ಶೂಗಳಿಗಂತೂ ಇನ್ನಿಲ್ಲದ ಬೇಡಿಕೆಯುಂಟು..! ಈಗ ಈ ಕಂಪನಿಯ ಶೂವೊಂದು ಬರೋಬ್ಬರಿ 3 ಕೋಟಿ ರೂಗಳಿಗೆ ಸೇಲಾಗಿದೆ..!
ನೈಕಿ ಕಂಪನಿಯ ಮೂನ್​ ಶೂ ಒಂದೆರೆಡು ಲಕ್ಷವಲ್ಲ ಬರೋಬ್ಬರಿ 3 ಕೋಟಿ ರೂಗಳಿಗೆ ಮಾರಾಟವಾಗಿ ಅಚ್ಚರಿಗೆ ಕಾರಣವಾಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ದಾಖಲೆ ಬೆಲೆಗೆ ಬಿಕರಿಯಾಗಿರೋ ಮೂನ್​ ಶೂ ತಯಾರಾಗಿದ್ದು 1972ರಲ್ಲಿ. ಕೆನಾಡದ ಟೊರೆಂಟೋ ನಗರದ ಕಲೆಕ್ಟರ್ ಮೈಲ್ಸ್ ನಡಾಲ್ ಈ ವಿಂಟೇಜ್​ ಶೂ ಅನ್ನು ಹರಾಜಿನಲ್ಲಿ 3 ಕೋಟಿ ರೂಗೆ ಪಡೆದುಕೊಂಡಿದ್ದಾರೆ.

ನೈಕಿ ಸಂಸ್ಥೆಯ ಸಹ ಸಂಸ್ಥಾಪಕ ಬೋವೆರ್​ಮನ್​ 1972ರ ಒಲಂಪಿಕ್​ ವೇಳೆಯಲ್ಲಿ ಈ ಶೂ ಡಿಸೈನ್ ಮಾಡಿದ್ದರು. ಆಗ ಕೇವಲ 12 ಜೊತೆ ಶೂಗಳನ್ನು ಮಾತ್ರ ತಯಾರಿಸಲಾಗಿತ್ತು. ಅದ್ರಲ್ಲಿ ಉಳಿದಿರೋದು ಇದೊಂದು ಜೊತೆ ಶೂ ಮಾತ್ರವಾವಗಿತ್ತು. ಈ ಶೂ ಅನ್ನು ಹರಾಜಿನಲ್ಲಿ ಖರೀದಿಸಿರುವ ಬೋವೆರ್​ಮನ್​ ಈ ಶೂ ಅನ್ನು ತನ್ನ ಖಾಸಗಿ ಸಂಗ್ರಹಾಲಯದಲ್ಲಿ ಇಡಲು ನಿರ್ಧರಿಸಿದ್ದು, ಇವರು ಪ್ರಪಂಚದ ದುಬಾರಿ ಕಾರುಗಳ ಸಂಗ್ರಹ ಕೂಡ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...