3 ಬೈಕ್‌ಗೆ ಟ್ರಾಕ್ಟರ್ ಡಿಕ್ಕಿ; ಮಳೆಯೇ ಉಳಿಸಿತು ಪ್ರಾಣ

Date:

ಟ್ರ್ಯಾಕ್ಟರ್​ನಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೂರು ಬೈಕ್​ಗಳು ಜಖಂಗೊಂಡಿದ್ದು, ಭಾರಿ ಅವಘಡವೊಂದು ತಪ್ಪಿಹೋಗಿದೆ. ಅದರಲ್ಲೂ ಯಾವುದೇ ಸಾವು-ನೋವು ಸಂಭವಿಸದಂತೆ ಮಳೆಯೇ ಕಾಪಾಡಿದೆ.

ಬಾಗಲಕೋಟೆ ಜಿಲ್ಲೆಯ‌ ಮುಧೋಳದ ರನ್ನ ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಒಳಗಾಗಿದ್ದು ಮುಗಳಖೋಡದಿಂದ ಐಸಿಪಿಎಲ್ ಶುಗರ್ ಫ್ಯಾಕ್ಟರಿಗೆ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್. ಅದರ ಚಕ್ರದ ಬೇರಿಂಗ್​ ಕಟ್​ ಆಗಿದ್ದೇ ಅಪಘಾತಕ್ಕೆ ಕಾರಣ.

ಗಾಲಿಯ ಬೇರಿಂಗ್ ಕಟ್​ ಆಗಿದ್ದರಿಂದ ಟ್ರ್ಯಾಕ್ಟರ್ ಟ್ರೇಲರ್ ಪಲ್ಟಿಯಾಗಿದೆ. ಪರಿಣಾಮವಾಗಿ ರಸ್ತೆ ಬದಿ ನಿಲ್ಲಿಸಿದ್ದ ಮೂರು ಬೈಕ್​ಗಳು ಅದರ ಅಡಿಗೆ ಸಿಲುಕಿ ಜಖಂಗೊಂಡಿವೆ. ಮಳೆ ಬರುತ್ತಿದ್ದ ಕಾರಣ ವಾಹನ ಸವಾರರು ದ್ವಿಚಕ್ರವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹತ್ತಿರದ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದಿದ್ದರು. ಹೀಗಾಗಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

Share post:

Subscribe

spot_imgspot_img

Popular

More like this
Related

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...