ತೆರೆಯ ಮೇಲೆ ತಮ್ಮ ಚುಂಬನಕ್ಕೆ ಪ್ರಖ್ಯಾತವಾಗಿ ‘ಸರಣಿ ಕಿಸ್ಸರ್’ ಎಂಬ ಬಿರುದು ಪಡೆದಿರುವ ಬಾಲಿವುಡ್ ನಟ ಅಂದ್ರೆ ಅದು ಇಮ್ರಾನ್ ಹಶ್ಮಿ. ಆದ್ರೆ ಇಮ್ರಾನ್ ಹಶ್ಮಿ ಸಿನಿಮಾಗಳು ಇತ್ತೀಚಿಗೆ ತೀರಾ ಅಪರೂಪ ಆಗಿವೆ. ವಿಭಿನ್ನ ಸಿನಿಮಾಗಳ ಮೂಲಕವೇ ಚಿತ್ರಾಭಿಮಾನಿಗಳನ್ನು ರಂಜಿಸುತ್ತಿದ್ದ ಇಮ್ರಾನ್ ಈಗ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಮಾತ್ರ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಕಿಸ್ಸರ್ ಕಿಂಗ್ ಅಂತಾನೆ ಫೇಮಸ್ ಆಗಿರೋ ಇಮ್ರಾನ್ ಹೊಸ ಈಗ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಮ್ರಾನ್ ಒಪ್ಪಿಕೊಂಡಿರುವ ಹೊಸ ಸಿನಿಮಾ ಹಾರರ್ ಎನ್ನುವುದೇ ವಿಶೇಷ. ಮೂರು ವರ್ಷಗಳ ಬಳಿಕ ಹಾರರ್ ಸಿನಿಮಾ ಮೂಲಕ ಬರ್ತಿದ್ದಾರೆ ಎನ್ನುವ ವಿಚಾರ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಹಾರರ್ ಸಿನಿಮಾಗಳ ಮೂಲಕನೇ ಹೆಚ್ಚು ಖ್ಯಾತಿ ಗಳಿಸಿರುವ ಇಮ್ರಾನ್ ‘ರಾಝ್’ ಸರಣಿಯ ಮೂರನೇ ಆವೃತ್ತಿ ನಂತರ ಮತ್ತೆ ಕಾಣಿಸಿಕೊಂಡಿರ್ಲಿಲ್ಲ. 2016ರಲ್ಲಿ ರಿಲೀಸ್ ಆಗಿದ್ದ ‘ರಾಝ್-ರಿಬೂಟ್’ ಚಿತ್ರದ ಮೂಲಕ ಸಿನಿಪ್ರಿಯರನ್ನು ಬೆಚ್ಚಿಬೀಳಿಸಿದ್ದ ಇಮ್ರಾನ್ ಈಗ ಮತ್ತೆ ಹಾರಾರ್ ಮೂಲಕ ಎಂಟ್ರಿಯಾಗ್ತಿದ್ದಾರೆ.
ಇನ್ನು ಇಮ್ರಾನ್ ಸಹಿ ಮಾಡಿರುವ ಸಿನಿಮಾ ಮಲಯಾಳಂನ ಹಿಟ್ ಸಿನಿಮಾ ‘ಎಜ್ರಾ’ ರೀಮೇಕ್. ಮಲಯಾಳಂನಲ್ಲಿ ಪೃಥ್ವಿರಾಜ್ ನಾಯಕನಾಗಿ ಕಾಣಿಸಿಕೊಂಡಿದ್ರು. ಸಿನಿಮಾ ನೋಡಿ ಇಂಪ್ರೆಸ್ ಆದ ಇಮ್ರಾನ್ ಬಾಲಿವುಡ್ ನಲ್ಲಿ ರೀಮೇಕ್ ಮಾಡಲು ಸೈ ಅಂದಿದ್ದಾರೆ. ಇನ್ನು ವಿಶೇಷ ಅಂದ್ರೆ ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಜಯ್ ಕೃಷ್ಣನ್ ಇಮ್ರಾನ್ ಹಶ್ಮಿ ಸಿನಿಮಾಗೂ ಆಕ್ಷನ್ ಕಟ್ ಹೇಳಲಿದ್ದಾರೆ. ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿರುವ ಇಮ್ರಾನ್ ‘ಎಜ್ರಾ’ ಸಿನಿಮಾದ ಬಗ್ಗೆ ಟ್ವಿಟ್ಟರನಲ್ಲಿ ಶೇರ್ ಮಾಡಿದ್ದಾರೆ. ಭಯಾನಕ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ವಾಗಿದೆ ಎಂದು ಹೇಳಿಕೊಂಡಿದ್ದಾರೆ.