3 ಹೊತ್ತಿನ ಊಟಕ್ಕಾಗಿ ದುಡಿಯೋ ಕ್ಯಾಬ್ ಚಾಲಕನ ಮೇಲೆ ಸಂಜನಾ ದರ್ಪ?

Date:

ಕ್ಯಾಬ್ ಚಾಲಕನೊಬ್ಬ ತಮಗೆ ಕಿರುಕುಳ ನೀಡಿದ ಎಂದು ನಟಿ ಸಂಜನಾ ಗಲ್ರಾನಿ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆ ಪ್ರಕರಣ ಇದೀಗ ಹೆಚ್ಚು ಗಂಭೀರವಾಗಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

 

ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳೊಂದಿಗೆ ಪೋಸ್ಟ್ ಹಂಚಿಕೊಂಡಿದ್ದ ಸಂಜನಾ ಗಲ್ರಾನಿ, ”ಓಲಾ ಕ್ಯಾಬ್ ಡ್ರೈವರ್‌ ಏಸಿ ಏರಿಸಲು ನಿರಾಕರಿಸಿದ. ಏಸಿ ಏರಿಸಲು ಹೇಳಿದಾಗ ನಮಗೆ ಬೆದರಿಕೆ ಹಾಕಿದ. ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗುವುದಾಗಿ ಹೇಳಿದ” ಎಂದು ಬರೆದುಕೊಂಡಿದ್ದರು. ಸಂಜನಾ, ಕ್ಯಾಬ್‌ನಲ್ಲಿರುವಾಗಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ನನ್ನನ್ನು ಕಿಡ್ನ್ಯಾಪ್ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು. ಕೂಡಲೇ ಹೊಯ್ಸಳ ಪೊಲೀಸರು ಸ್ಥಳಕ್ಕೆ ತೆರಳಿ ಸಂಜನಾಗೆ ಮರಳಿ ಕರೆ ಮಾಡಿದಾಗ ನಾನು, ತಲುಪಬೇಕಾದ ಸ್ಥಳ ತಲುಪಿದ್ದೇನೆ, ದೂರು ಕ್ಲೋಸ್ ಮಾಡಿ ಎಂದಿದ್ದರು. ಅಂತೆಯೇ ಪೊಲೀಸರು ದೂರು ಕ್ಲೋಸ್ ಮಾಡಿದ್ದರು.

ಇದು ಸುದ್ದಿಯಾಗುತ್ತಿದ್ದಂತೆ, ಕ್ಯಾಬ್ ಡ್ರೈವರ್ ಸುಸಾಯ್ ಮಣಿ ಆರ್‌ಆರ್‌ ನಗರ ಪೊಲೀಸರಿಗೆ ಸಂಜನಾ ಗಲ್ರಾನಿ ವಿರುದ್ಧ ದೂರು ನೀಡಿದ್ದಾರೆ. ಕ್ಯಾಬ್ ಪ್ರಯಾಣದ ವೇಳೆ ಸಂಜನಾ ಗಲ್ರಾನಿ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ, ಅದರ ವಿಡಿಯೋ ಸಾಕ್ಷಿ ನನ್ನ ಬಳಿ ಇದೆ ಎಂದು ಸುಸಾಯ್ ಮಣಿ ಹೇಳಿದ್ದಾರೆ. ಅಲ್ಲದೆ, ಸಂಜನಾ ಕ್ಯಾಬ್ ಅನ್ನು ಇಂದಿರಾನಗರದಿಂದ ಕೆಂಗೇರಿಗೆ ಬುಕ್ ಮಾಡಲಾಗಿತ್ತು, ಆದರೆ ಸಂಜನಾ, ಆರ್‌ಆರ್‌ ನಗರದಲ್ಲಿ ಇಳಿಸುವಂತೆ ಒತ್ತಾಯ ಮಾಡಿದರು. ಹಾಗೆ ಮಾಡಲಾಗುವುದಿಲ್ಲ ಎಂದಿದ್ದಕ್ಕೆ ಜಗಳ ಆರಂಭಿಸಿ, ಪೊಲೀಸರಿಗೆ ಫೋನ್ ಮಾಡಿದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಡ್ರೈವರ್ ಸುಸಾಯ್ ಮಣಿ.

 

ಕ್ಯಾಬ್ ಡ್ರೈವರ್‌ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಜನಾ, ”ನನ್ನ ಚಿತ್ರೀಕರಣ ಇದ್ದಿದ್ದು ಆರ್‌ಆರ್‌ ನಗರದಲ್ಲಿ. ಆದರೆ ಚಾಲಕ ನನ್ನನ್ನು ಆರ್‌ಆರ್‌ ನಗರಕ್ಕೆ ಕರೆದುಕೊಂಡು ಹೋಗುತ್ತಿದ್ದ. ಆಗ ನನಗೆ ಭಯವಾಯ್ತು, ನಮ್ಮನ್ನು ಈತ ಕಿಡ್ನ್ಯಾಪ್ ಮಾಡುತ್ತಿರಬಹುದು ಎನಿಸಿತು. ನಾವು ಮಹಿಳೆಯರಷ್ಟೆ ಕ್ಯಾಬ್‌ನಲ್ಲಿದ್ದೆವು. ಹಾಗಾಗಿ ನಾನು ಪೊಲೀಸರಿಗೆ ಕರೆ ಮಾಡಿದೆ. ಅದಾದ ಬಳಿಕ ಆತ ನನ್ನನ್ನು ಆರ್‌ಆರ್‌ ನಗರದಲ್ಲಿ ಬಿಟ್ಟು ಹೋದ” ಎಂದಿದ್ದಾರೆ.

 

”ಆದರೂ ಸಹ ನಾನು ಓಲಾ ಸಂಸ್ಥೆಯವರಿಗೆ ದೂರು ನೀಡಿದಾಗ ಆ ಡ್ರೈವರ್‌ಗೆ ಏನೂ ಮಾಡದಂತೆ ಕೇವಲ ಶಿಸ್ತಿನ ಪಾಠ ಮಾಡುವಂತೆ ಅಷ್ಟೆ ಹೇಳಿದೆ. ಕೆಲಸದಿಂದ ತೆಗೆಯದಂತೆ ನಾನೇ ಮನವಿ ಮಾಡಿದೆ” ಎಂದ ಸಂಜನಾ, ತಾವು ಓಲಾ ಕಸ್ಟಮರ್ ಕೇರ್‌ ಜೊತೆ ಮಾತನಾಡಿರುವ ಆಡಿಯೋ ಕ್ಲಿಪ್‌ ಅನ್ನು ಮಾಧ್ಯಮದ ಮುಂದೆ ಕೇಳಿಸಿದ್ದಾರೆ.

”ಆ ಡ್ರೈವರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಉದ್ದೇಶ ನನಗೆ ಇರಲಿಲ್ಲ. ಆದರೆ ಈಗ ಆತನೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪ್ರಕರಣ ಈಗ ಅಲ್ಲೇ ಇತ್ಯರ್ಥವಾಗಲಿ ನನ್ನ ಅಭ್ಯಂತರವೇನೂ ಇಲ್ಲ. ಈಗಾಗಲೇ ನನ್ನ ಮೇಲೆ ಕೆಲವು ಸುಳ್ಳು ಕೇಸುಗಳಿವೆ. ಈಗ ಇದೂ ಒಂದು” ಎಂದಿದ್ದಾರೆ ನಟಿ ಸಂಜನಾ ಗಲ್ರಾನಿ. ”ನನ್ನ ಬಳಿ ಸ್ವಂತದ ಕಾರು ಇಲ್ಲ. ನನಗೆ ಸಿನಿಮಾ ಅವಕಾಶಗಳು ಸಹ ಸೂಕ್ತವಾಗಿ ಸಿಗುತ್ತಿಲ್ಲ. ಸ್ವಂತದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೇನೆ. ಇಂಥಹಾ ಸ್ಥಿತಿಯಲ್ಲಿ ಸುಳ್ಳು ಪ್ರಕರಣಗಳು ಬೇರೆ” ಎಂದು ಬೇಸರ ಮಾಡಿಕೊಂಡಿದ್ದಾರೆ ಸಂಜನಾ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...