ಆ ಪುಟ್ಟ ಹುಡುಗಿಯನ್ನು ಕಂಡರೆ ಖಂಡಿತಾ ಮೂಕವಿಸ್ಮಿತರಾಗ್ತೀರಾ..! ಅವಳ ಗುಣ ಮತ್ತು ಪ್ರತಿಭೆಗೆ ಯಾರೂ ಯಾರೆಂದರೆ ಯಾರೂ ಸಾಟಿ ಇಲ್ಲ..! ಆ ಪುಟ್ಟ ಬಾಲಕಿಯ ಸಾಧನೆ ದೊಡ್ಡದು..! ಮಾತು ಎಂಥವರ ಕಣ್ಣನ್ನೂ ತೆರೆಸುತ್ತೆ..! ಆದರೆ ಪಾಪ, ಅವಳಿಗೆ ಕಣ್ಣಿಲ್ಲ..! ಅವಳು ಅಂಧಳು, ಆದರೆ ಅವಳ ಗುಣ ಅಂದ-ಚಂದವೋ..!
ಅವಳು ನಿಜಕ್ಕೂ ಅಸಾಧಾರಣ ಹುಡುಗಿ..! ಹೆಸರು `ರಿದಾ ಝೆಹ್ರಾ’. ಇವಳಿಗೆ ಕೇವಲ ಏಳು ವರ್ಷ ವಯಸ್ಸು. ಮೀರತ್ನ ಬ್ರಿಜಿ ಮೋಹನ್ ಅಂಧ ಮಕ್ಕಳ ವಸತಿ ಶಾಲೆಲಿ ಮೂರನೇ ಕ್ಲಾಸ್ ಓದ್ತಾ ಇದ್ದಾಳೆ..! ಅಪ್ಪ ಅಮ್ಮ, ಲೋಹಿಯಾ ನಗರದಲ್ಲಿದ್ದಾರೆ..! ಅಲ್ಲಿ ಅಪ್ಪ ಬಿರಿಯಾನಿ ಮಾರಿ ಜೀವನ ನಡೆಸ್ತಾ ಇದ್ದಾರೆ..! ರಿದಾ ಮನೆಗೆ ಹೋಗೋದು ಬೇಸಿಗೆ ರಜೆಯಲ್ಲಿ, ಹಬ್ಬ-ಹರಿದಿನಗಳಲ್ಲಿ ಮಾತ್ರ..! ಈ ಪುಟ್ಟ ಬಾಲಕಿ ಹುಟ್ಟುವಾಗಲೇ ಶೇಕಡ 80ರಷ್ಟು ಅಂಧೆಯಾಗಿದ್ಲು..! ಆದರೆ, ಇವಳಲ್ಲೊಂದು ವಿಶೇಷ ಶಕ್ತಿ ಇದೆ..! ಕೇಳಿಸಿಕೊಂಡೇ ಎಲ್ಲವನ್ನೂ ಕಲೀತಾಳೆ..! ಅವಳೆಂಥಾ ಅಸಾಧಾರಣ ಹುಡುಗಿ ಗೊತ್ತಾ..?! ನೀವು ಭಗವದ್ಗೀತೆಯ ಯಾವ ಶ್ಲೋಕವನ್ನಾದರೂ ಕೇಳಿ ಅವಳು ಕಣ್ಣುಮುಚ್ಚಿಕೊಂಡು, ಕೈ ಮುಗಿದುಕೊಂಡು ಪಟಪಟನೆ ಹೇಳಿ ಬಿಡುತ್ತಾಳೆ..!
ಆಶ್ಚರ್ಯ ಆಗುತ್ತೆ ಅಲ್ವಾ..?! ಕಣ್ಣು ಕಾಣಲ್ಲ, ಓದಲು ಸಾಧ್ಯವಿಲ್ಲ..! ಅವಳಿಗೆ ಬ್ರೈಲ್ ಲಿಪಿಯಲ್ಲೂ ಭಗವದ್ಗೀತೆ ಸಿಕ್ಕದೇ ಇರುವಾಗ, ಆಕೆ ಭಗವದ್ದಗೀತೆಯನ್ನು ಸಂಪೂರ್ಣ ಕಲಿತಿದ್ದಾಳೆಂದರೆ ಸಾಮಾನ್ಯವಂತೂ ಅಲ್ಲ..!
ಇನ್ನೂ ಹೇಳಬೇಕಂದ್ರೆ, ಈಕೆ ಮುಸ್ಲೀಂ ಹುಡುಗಿ, ಮನೆಯಲ್ಲಿ ಓದುವುದು ಕುರಾನ್ನನ್ನು..! ಹೀಗಿರುವಾಗ ಈ ಪುಟ್ಟ ಬಾಲಕಿ ಭಗವದ್ದಗೀತೆಯನ್ನು ಪಟಪಟನೆ ಹೇಳುತ್ತಳೆಂದರೆ.. ಮೆಚ್ಚಲೇ ಬೇಕು..!
ಅದು 2015ರ ಶುರು, ಮೀರತ್ ನಗರದಲ್ಲಿ ಮಕ್ಕಳಿಗಾಗಿ ಭಗವದ್ಗೀತೆ ಪಠಣ ಸ್ಪರ್ಧೆ ಆಯೋಜನೆಗೊಂಡಿತ್ತು..! ನಮ್ಮ ಶಾಲಾ ಮಕ್ಕಳೂ ಕೂಡ ಭಾಗವಹಿಸಲೆಂಬ ಆಸೆಯಿಂದ ಶಾಲಾ ಮುಖ್ಯಶಿಕ್ಷಕ ಪ್ರವೀಣ್ ಶರ್ಮಾರವರು ತರಗತಿಯಲ್ಲಿ ಭಗವದ್ಗೀತೆಯನ್ನು ರಾಗವಾಗಿ ಹೇಳ ತೊಡಗಿದ್ರು..! ಆಗ ಅವರು, ಎಲ್ಲಾ ಮಕ್ಕಳಿಗಿಂತಲೂ ಝೆಹ್ರಾ ಬೇಗನೆ ಕಲಿತದ್ದನ್ನು ಗಮನಿಸ್ತಾರೆ..! ಓಹ್, ಈ ಹುಡಗಿ ತುಂಬಾ ಜಾಣೆ ಇದ್ದಾಳೆ, ಇವಳಿಗೆ ಹೇಗಾದರೂ ಮಾಡಿ ಇನ್ನೂ ಹೆಚ್ಚು ಹೆಚ್ಚು ಹೇಳಿಕೊಡೋಣ ಅಂತ ಭಾವಿಸ್ತಾರೆ..! ಅವರ ಬಳಿಯಲ್ಲಿ ರಿದಾ ಝೆಹ್ರಾಗೆ ಕೊಡೋಕೆ ಬ್ರೈಲ್ ಲಿಪಿಯಲ್ಲಿನ ಭಗವದ್ದಗೀತಾ ಪುಸ್ತಕ ಇರ್ಲಿಲ್ಲ..! ಅದಕ್ಕಾಗಿ ದಿನಾಲೂ ಝೆಹ್ರಾಗಾಗಿ ಪುಸ್ತಕ ಓದಿ ಹೇಳ್ತಾರೆ..! ಹೀಗೆ ಝೆಹ್ರಾ ಭಗವದ್ದಗೀತೆಯನ್ನು ಕಲೀತಾಳೆ..!
ಈ ಪುಟ್ಟ ಬಾಲಕಿಯನ್ನು ಮಾತಾಡಿಸಿದ್ರೆ ಅವಳ ಮಾತಲ್ಲೂ ಮುಗ್ಧತೆಯ ಜೊತೆಗೆ ನಮಗೆಲ್ಲಾ ಕಿವಿಹಿಂಡುವ ನುಡಿ ಮುತ್ತುಗಳಿವೆ..!
“ನನಗೆ ದೇವರನ್ನು ಪ್ರಾರ್ಥಿಸೋದಂದ್ರೆ ತುಂಬಾನೇ ಇಷ್ಟ..! ಭಗವದ್ಗೀತೆ ಆದ್ರೇನಂತೆ, ಕುರಾನ್ ಆದರೇನು,..?! ಯಾವುದಾದರೂ ಸರಿ, ಯಾವ ದೇವರನ್ನು ಪ್ರಾರ್ಥಿಸುತ್ತಿದ್ದೇನೆಂದು ನಂಗೆ ವ್ಯತ್ಯಾಸ ಗೊತ್ತಾಗಲ್ಲ..! ಅಕಸ್ಮಾತ್ ಹೇಗೋ ದೇವರು ನನ್ನೆದುರೇ ಬಂದು ನಿಂತ್ಕೊಂಡ್ರೂ ನಂಗೆ ನೋಡಕ್ಕಾಗಲ್ವಲ್ಲಾ..?! ಅಂತಾಳೆ ಈ ಪುಟ್ಟ ಹುಡುಗಿ..! ಪುಟ್ಟ ಝೆಹ್ರಾಳ ಮಾತನ್ನು ಗಮನಿಸಿ, ನಾವೆಷ್ಟು ದಡ್ಡರು, ಕಣ್ಣಿದ್ದೂ ಕುರುಡರೆನ್ನುವುದು ಅರ್ಥವಾಗುತ್ತೆ..!
ತಾನು ಚೆನ್ನಾ ಗಿ ಓದಿ ನನ್ನಂತೆ ಅಂಧರಾಗಿರೋ ಮಕ್ಕಳಿಗೆ ಶಿಕ್ಷಕಿಯಾಗಬೇಕೆಂಬ ಆಸೆ ರಿದಾ ಝೆಹ್ರಾಗಿದೆ..! ತನ್ನ ಮಗಳು ಇಷ್ಟೊಂದು ಚಿಕ್ಕವಯಸ್ಸಲ್ಲೇ ಬೇರೆ ಧರ್ಮಗಳನ್ನೂ ತಿಳಿದಿದ್ದಾಳೆಂದು ಆಕೆಯ ತಂದೆ ಹೆಮ್ಮೆಯಿಂದ ಹೇಳುತ್ತಾರೆ..! ಅವಳು ಭಗವದ್ಗೀತೆಯನ್ನಾದರೂ ಓದಲಿ, ಕುರಾನ್ನನ್ನಾದರೂ ಓದಲಿ ಎಂದು ಖುಷಿ ಖುಷಿಯಿಂದ ಮಗಳನ್ನು ಪ್ರೋತ್ಸಾಹಿಸ್ತಾರೆ..!
ಅಬ್ಬಾ.. ಪುಟ್ಟ ಹುಡುಗಿ ರಿದಾ ನಿಜಕ್ಕೂ ಕಣ್ಣಿದ್ದೂ ಕುರುಡರಾಗಿರೋ ನಮ್ಮ ಕಣ್ಣನ್ನು ತೆರಿಸಿದ್ದಾಳೆ, ಅವಳ ಮಾತಿನಿಂದ..! ಅವಳ ಅಸಾಧಾರಣ ಪ್ರತಿಭೆ, ಕಲಿಯ ಬೇಕೆಂಬ ಆಸೆ, ಗ್ರಹಿಕೆ ಗುಣ ಎಲ್ಲವೂ ಎಲ್ಲರಿಗೂ ಮಾದರಿ..! ಝೆಹ್ರಾ ಎತ್ತರೆತ್ತರಕ್ಕೆ ಬೆಳೆಯಲಿ..ಸಾಧನೆಯ ಶಿಖರವನ್ನೇರಿ ರಾರಾಜಿಸಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!