31 ವರ್ಷಗಳಿಂದ ಯಾರೂ ಮುರಿಯಲಾಗದಿದ್ದ ದಾಖಲೆಯನ್ನು ಮುರಿದ ಕೃನಾಲ್ ಪಾಂಡ್ಯ

1
60

ನಿನ್ನೆ ಪುಣೆಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಪದಾರ್ಪಣೆ ಮಾಡಿದ್ದಾರೆ. ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ಕೃನಾಲ್ ಪಾಂಡ್ಯ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಚೊಚ್ಚಲ ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಮೈಲಿಗಲ್ಲನ್ನು ಕೃನಾಲ್ ಪಾಂಡ್ಯ ನಿರ್ಮಿಸಿದ್ದಾರೆ.

 

 

ಕೇವಲ 26 ಎಸೆತಗಳಲ್ಲಿ 50 ರನ್ ಸಿಡಿಸುವ ಮೂಲಕ ಈ ಹಿಂದೆ ಇಂಗ್ಲೆಂಡ್ ನ ಆಟಗಾರ ಜಾನ್ ಮೊರಿಸ್ ನಿರ್ಮಿಸಿದ್ದ ದಾಖಲೆಯನ್ನು ಕೃನಾಲ್ ಪಾಂಡ್ಯ ಧ್ವಂಸ ಮಾಡಿದ್ದಾರೆ. ಜಾನ್ ಮೊರಿಸ್ 1990 ರಲ್ಲಿ ನ್ಯೂಜಿಲೆಂಡ್ ವಿರುದ್ಧ 35 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವುದರ ಮೂಲಕ ಅತಿವೇಗವಾಗಿ ಚೊಚ್ಚಲ ಏಕದಿನ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

 

 

ಇದೀಗ ಆ ದಾಖಲೆಯನ್ನು ಕೃನಾಲ್ ಪಾಂಡ್ಯ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅತಿ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿಯೂ ಸಹ ಕೃನಾಲ್ ಪಾಂಡ್ಯ ಮೊದಲನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 31 ವರ್ಷಗಳಿಂದ ಯಾರೂ ಮುಟ್ಟಲಾಗದಿದ್ದ ದಾಖಲೆಯನ್ನು ಕೃನಾಲ್ ಪಾಂಡ್ಯ ಅಳಿಸಿ ಹಾಕಿದ್ದಾರೆ.

1 COMMENT

LEAVE A REPLY

Please enter your comment!
Please enter your name here