ಕನ್ನಡದ ಖ್ಯಾತ ನಟಿ ‘ಮುಂಗಾರು ಮಳೆ’ ಖ್ಯಾತಿ ಪೂಜಾಗಾಂಧಿ ಮೇಲೆ ದೂರು ದಾಖಲಾಗಿ ಸ್ಟಾರ್ ನಟಿ ಪೂಜಾಗಾಂಧಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಾರ್ಚ್ 11 ರಂದು ಪೊಲೀಸರು NCR ದಾಖಲು ಮಾಡಿಕೊಂಡಿದ್ದರು.ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಪೂಜಾಗಾಂಧಿ ಕೆಲವು ದಿನ ಉಳಿದುಕೊಂಡಿದ್ದರು. ಆದರೆ, ಹೋಟೆಲ್ ಬಿಲ್ ಕಟ್ಟದೇ ಅಲ್ಲಿಂದ ಪರಾರಿ ಆಗಿದ್ದರು. ಲಕ್ಷ ಲಕ್ಷ ಬಿಲ್ ಮಾಡಿ ಯಾರಿಗೂ ಗೊತ್ತಾಗದೇ ಎಸ್ಕೇಪ್ ಆಗಿದ್ದಾರಂತೆ.
ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸ್ ಪೂಜಾಗಾಂಧಿ ಯನ್ನು ಸ್ಟೇಷನ್ ಗೆ ಕರಿಸಿದ್ದರು. ಪೊಲೀಸರ ಸಮ್ಮುಖದಲ್ಲಿ ಎರಡು ಲಕ್ಷ ನೀಡಿದ್ದ ನಟಿ ಪೂಜಾಗಾಂಧಿ ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ. ಸದ್ಯ, ‘ದಂಡುಪಾಳ್ಯ 3’ ಸಿನಿಮಾದ ನಂತರ ಪೂಜಾ ಗಾಂಧಿ ಬೇರೆ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಇನ್ನು ಸಿನಿಮಾ ಮಾತ್ರವಲ್ಲದೆ ಒಮ್ಮೆ ರಾಯಚೂರಿನಿಂದ ವಿಧಾನಸಭೆ ಚುನಾವಣೆಗೆ ಜೆಡಿಎಸ್ ನಿಂದ ಪೂಜಾ ಸ್ಪರ್ಧೆ ಕೂಡ ಮಾಡಿದ್ದರು.