4.5 ಲಕ್ಷಕ್ಕೆ ಮಾರಾಟವಾದ ಎರಡು ಆಡುಗಳು; ವಿಶೇಷವೇನು ಗೊತ್ತಾ?

Date:

ಈದ್-ಅಲ್-ಅಧಾಗೂ ಮುನ್ನಾ ದಿನ ಮಂಗಳವಾರ ಉತ್ತರ ಪ್ರದೇಶದ ಲಖ್ನೋನಲ್ಲಿನ ಮಾರುಕಟ್ಟೆ ವಿವಿಧ ತಳಿಗಳ ಆಡು, ಕುರಿಗಳಿಂದ ತುಂಬಿಕೊಂಡಿತ್ತು. ಅವುಗಳಲ್ಲಿ ಆಡಿನ ಈ ಜೋಡಿಯೊಂದು ಎಲ್ಲರ ಗಮನ ಸೆಳೆಯುತ್ತಿದ್ದವು. ಬರೀ ನೋಟದಿಂದ ಮಾತ್ರವಲ್ಲ, ಇದರ ಬೆಲೆಯೂ ವಿಶೇಷವಾಗಿಯೇ ಇತ್ತು.

ಲಖ್ನೋನ ಗೋಮ್ಟಿ ನದಿ ತೀರದ ಮಾರುಕಟ್ಟೆಯಲ್ಲಿ ಈ ವಿಶೇಷವಾದ ಆಡುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಂದ ಹಾಗೆ ಈ ಜೋಡಿ ಆಡು ಮಾರಾಟವಾಗಿದ್ದು 4.5 ಲಕ್ಷ ರೂಪಾಯಿಗೆ. ಈ ಎರಡು ಆಡುಗಳಿಗೂ ಎರಡು ವರ್ಷವಾಗಿದ್ದು, ಒಂದು 170 ಕೆ.ಜಿ.ಯದ್ದಾದರೆ ಮತ್ತೊಂದು 150 ಕೆ.ಜಿ. ತೂಕ.

ಈ ಆಡುಗಳಿಗೆ ಏಕಿಷ್ಟು ದುಬಾರಿ ಬೆಲೆ? ಎಂದು ಪ್ರಶ್ನಿಸಿದರೆ, ಇವುಗಳನ್ನು ಬೆಳೆಸಿದ ರೀತಿಯೇ ಈ ದುಬಾರಿ ಬೆಲೆಗೆ ಕಾರಣ ಎನ್ನುತ್ತಾರೆ ಇವನ್ನು ಖರೀದಿಸಿದ ವ್ಯಕ್ತಿ. ಈ ಆಡುಗಳಿಗೆ ದಿನನಿತ್ಯವೂ ವಿಶೇಷವಾದ ಆಹಾರ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಮಾಮೂಲಿ ಹುಲ್ಲಿನ ಬದಲಾಗಿ ಪ್ರತಿದಿನವೂ ತಪ್ಪದೇ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡಲಾಗುತ್ತಿತ್ತು. ಗೋಡಂಬಿ, ಪಿಸ್ತಾ, ಬಾದಾಮಿಯಂಥ ಪೌಷ್ಟಿಕ ಆಹಾರದ ಜೊತೆ ಸಿಹಿ ತಿನಿಸುಗಳನ್ನು ಕೂಡ ಈ ಆಡುಗಳಿಗೆ ನೀಡಲಾಗುತ್ತಿತ್ತು. ಹೀಗಾಗೇ ಇವುಗಳ ದೇಹ ಇಷ್ಟು ಸದೃಢವಾಗಿದೆ ಎಂದು ವಿವರಿಸಿದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...