ನವಜಾತ ಶಿಶುವಿಗಿದೆ ನಾಲ್ಕು ಕಾಲು, ಎರಡು ಜನನನಾಂಗ..!

Date:

ಸಾಮಾನ್ಯವಾಗಿ ಎಲ್ರಿಗೂ ಇರೋದು ಎರಡು ಕಾಲು, ಎರಡು ಕೈ, ಒಂದು ಜನನಾಂಗ. ಆದ್ರೆ ಇಲ್ಲೊಂದು ನವಜಾತ ಶಿಶುವಿಗೆ ಅವೆಲ್ಲವೂ ಡಬಲ್ ಆಗಿದೆ ಅಂದ್ರೆ ನೀವು ನಂಬ್ತೀರಾ..? ಖಂಡಿತ ನಂಬ್ಲೇಬೇಕು. ಯಾಕಂದ್ರೆ ಈ ಮಗುವಿಗೆ ನಾಲ್ಕು ಕಾಲು ಹಾಗೂ ಎರಡು ಜನನಾಂಗ ಇದೆ..! ಈ ಘಟನೆ ನಡೆದಿರೊದು ಬೇರೆ ಇನ್ಯಾವುದೆ ದೇಶದಲ್ಲಲ್ಲ ಅಥವಾ ಬೇರೆ ರಾಜ್ಯದಲ್ಲಲ್ಲ. ಬದ್ಲಾಗಿ ನಮ್ಮದೆ ರಾಜ್ಯದ ರಾಯಚೂರು ಜಿಲ್ಲೆಯಲ್ಲಿ..! ಹೌದು.. ಜಿಲ್ಲೆಯ ಧಾಡೆಯಸುಗುರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಲಿತಮ್ಮ ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ರು. ಆದ್ರೆ ಆ ಮಗು ಸಾಮಾನ್ಯ ಮಗುವಂತಿರಲಿಲ್ಲ. ಬದಲಿಗೆ ಆ ನವ ಜಾತ ಶಿಶುವಿಗೆ ನಾಲ್ಕು ಕಾಲುಗಳಿದ್ವು ಜೊತೆಗೆ ಎರಡೆರಡು ಜನನಾಂಗ ಹೊಂದಿದ್ವು..! ರಾಯಚೂರಿನ ಸಿಂಧನೂರು ಪುಲದಿನ್ನಿ ಗ್ರಾಮದ ಲಲಿತಮ್ಮ(23) ಚೆನ್ನ ಬಸಪ್ಪ(26) ದಂಪತಿಗೆ ಈ ಗಂಡು ಮಗು ಜನಿಸಿದ್ದು ನಾಲ್ಕು ಕಾಲು ಎರಡು ಜನನಾಂಗ ಹೊಂದಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಮಗುವಿನ ತಾಯಿಗೆ ನಾರ್ಮಲ್ ಹೆರಿಗೆ ಆಗಿದೆ. ಆದ್ರೆ ಮಗುವಲ್ಲಿ ನೂನ್ಯತೆ ಇರುವ ಕಾರಣ ವಿಜಯನಗರ ಇನ್ಸ್‍ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ದಾಖಲಿಸಲಾಗಿದೆ. ಪ್ರಾರಂಭದಲ್ಲಿ ಮಗುವಿನ ಸಂಬಂಧಿಗಳು ಆಸ್ಪತ್ರೆಗೆ ಕಳುಹಿಸಲು ಹಿಂದೇಟು ಹಾಕಿದ್ರು. ಕ್ರಮೇಣ ಸಿಬ್ಬಂದಿಗಳ ಮನವೊಲಿಕೆಯ ಬಳಿಕವಷ್ಟೆ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ಕುರಿತು ಮಾತನಾಡಿದ ವೈದ್ಯ ಡಾ. ವಿರೂಪಾಕ್ಷ ವಿಮ್ಸ್ ಸರ್ಜನ್ ಜೊತೆ ಮಾತನಾಡಿದ್ದೇವೆ. ಅವರು ಮಗುವನ್ನು ಕೂಲಂಕುಶ ತಪಾಸಣೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ರಾತ್ರೋ ರಾತ್ರಿ ಎಲಿಮಿನೇಟ್ ಆದ್ರು ಶಾಲಿನಿ..!!

ಹಂಪಿ ಸನ್‍ಲೈಟ್ & ಶ್ಯಾಡೋಸ್ ಚಿತ್ರಪ್ರದರ್ಶನ

ಈ ಬಾರಿಯ ಬಿಗ್‍ಬಾಸ್ ಫೈನಲ್ ಗೆಸ್ಟ್ ಯಾರು ಗೊತ್ತಾ..?

ಮಾಜಿ ಕ್ರಿಕೆಟಿಗ ವೀರು ಈಗ ಜಬರ್ದಸ್ತ್ ಸಿಂಗರ್

ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...